For the best experience, open
https://m.newskannada.com
on your mobile browser.
Advertisement

ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ಕಾರ್ಯಕರ್ತರ ವಿರೋಧ

ಪುತ್ತೂರಿನ ಬಿಜೆಪಿ ಕಚೇರಿಯಲ್ಲಿ ನಿನ್ನೆ ರಾತ್ರಿ ನಡೆದ ಗೌಪ್ಯ ಸಭೆಯಲ್ಲಿ ಬಿಜೆಪಿಯ ನಾಯಕರು ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರ ಕಿವಿ ಹಿಂಡಿದ್ದಾರೆ ಎನ್ನಲಾಗುತ್ತಿದೆ. ಒಬ್ಬ ಪಕ್ಷೇತರ ಅಭ್ಯರ್ಥಿ ರಾಷ್ಟ್ರೀಯ ಪಕ್ಷಕ್ಕೆ ಗಡುವು ನೀಡಿ, ಜಿಲ್ಲೆಯ ಭದ್ರ ಪುತ್ತೂರಿನ ಹಿಂದುತ್ವವದ ಕೋಟೆಯನ್ನ ಹಾಳು ಮಾಡಿದವ ಪುತ್ತಿಲ, ಇಂತವನು ಒಮ್ಮೆ ಲೋಕಸಭೆಗೆ ಸ್ಪರ್ಧಿಸ್ತೇನೆ ಅಂತಾನೆ, ಇನ್ನೊಮ್ಮೆ ನಳಿನ್ ಗೆ ಟಿಕೆಟ್ ತಪ್ಪುವಾಗ ಬಿಜೆಪಿಗೆ ಸೇರ್ಪಡೆಯಾಗ್ತಾನೆ ಅಂತ ಬರ್ತಾನೆ. ಈ ಎಲ್ಲ ವಿದ್ಯಾಮಾನಗಳನ್ನ ಜಿಲ್ಲಾಧ್ಯಕ್ಷರಾದ ನೀವು ಗಮನಿಸ್ತಾ ಬಂದಿದ್ದೀರಿ, ಹೀಗಿದ್ರೂ ಪುತ್ತಿಲನನ್ನ ಹೇಗೆ ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳೋದು ಎಂದು ಪುತ್ತೂರಿನ ಬಿಜೆಪಿ ನಾಯಕರು, ಕಾರ್ಯಕರ್ತರು, ಬಿಜೆಪಿ ಜಿಲ್ಲಾಧ್ಯಕ್ಷ ಸಂತೀಶ್ ಕುಂಪಲ ಅವರಿಗೆ ಪ್ರಶ್ನೆಗಳ ಸುರಿಮಳೆಗೆ ಗೈದಿದ್ದಾರೆ.
03:58 PM Mar 16, 2024 IST | Gayathri SG
ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ಕಾರ್ಯಕರ್ತರ ವಿರೋಧ

ಪುತ್ತೂರು: ಪುತ್ತೂರಿನ ಬಿಜೆಪಿ ಕಚೇರಿಯಲ್ಲಿ ನಿನ್ನೆ ರಾತ್ರಿ ನಡೆದ ಗೌಪ್ಯ ಸಭೆಯಲ್ಲಿ ಬಿಜೆಪಿಯ ನಾಯಕರು ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರ ಕಿವಿ ಹಿಂಡಿದ್ದಾರೆ ಎನ್ನಲಾಗುತ್ತಿದೆ. ಒಬ್ಬ ಪಕ್ಷೇತರ ಅಭ್ಯರ್ಥಿ ರಾಷ್ಟ್ರೀಯ ಪಕ್ಷಕ್ಕೆ ಗಡುವು ನೀಡಿ, ಜಿಲ್ಲೆಯ ಭದ್ರ ಪುತ್ತೂರಿನ ಹಿಂದುತ್ವವದ ಕೋಟೆಯನ್ನ ಹಾಳು ಮಾಡಿದವ ಪುತ್ತಿಲ, ಇಂತವನು ಒಮ್ಮೆ ಲೋಕಸಭೆಗೆ ಸ್ಪರ್ಧಿಸ್ತೇನೆ ಅಂತಾನೆ, ಇನ್ನೊಮ್ಮೆ ನಳಿನ್ ಗೆ ಟಿಕೆಟ್ ತಪ್ಪುವಾಗ ಬಿಜೆಪಿಗೆ ಸೇರ್ಪಡೆಯಾಗ್ತಾನೆ ಅಂತ ಬರ್ತಾನೆ. ಈ ಎಲ್ಲ ವಿದ್ಯಾಮಾನಗಳನ್ನ ಜಿಲ್ಲಾಧ್ಯಕ್ಷರಾದ ನೀವು ಗಮನಿಸ್ತಾ ಬಂದಿದ್ದೀರಿ, ಹೀಗಿದ್ರೂ ಪುತ್ತಿಲನನ್ನ ಹೇಗೆ ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳೋದು ಎಂದು ಪುತ್ತೂರಿನ ಬಿಜೆಪಿ ನಾಯಕರು, ಕಾರ್ಯಕರ್ತರು, ಬಿಜೆಪಿ ಜಿಲ್ಲಾಧ್ಯಕ್ಷ ಸಂತೀಶ್ ಕುಂಪಲ ಅವರಿಗೆ ಪ್ರಶ್ನೆಗಳ ಸುರಿಮಳೆಗೆ ಗೈದಿದ್ದಾರೆ.

Advertisement

ಇನ್ನೂ ಇತ್ತ ಪುತ್ತಿಲ ಸೇರ್ಪಡೆಗೆ ನಳೀನ್ ಕುಮಾರ್ ಕಟೀಲ್ ಕೂಡ ಗರಂ ಆಗಿದ್ದಾರೆ ಎನ್ನಲಾಗಿದೆ. ಫೋನ್ ಕರೆ ಮಾಡಿ ಜಿಲ್ಲಾಧ್ಯಕ್ಷರಿಗೆ ಕೆಲಕಾಲ ಕ್ಲಾಸ್ ತೆಗೆದುಕೊಂಡಿದ್ದಾರೆ.

ಕೆಂಡಾಮಂಡಲನಾದ ಕಾರ್ಯಕರ್ತನೋರ್ವನಿಂದ ಪುತ್ತೂರು ಬಿಜೆಪಿ ಕಚೇರಿಗೆ ಬೆಂಕಿ ಹಚ್ಚುವ ಬೆದರಿಕೆ ಹಾಕಿದ್ದಾರೆ. ಗೌಪ್ಯಸಭೆಯಲ್ಲೇ ಬೆದರಿಕೆ ಹಾಕಿ ಬಿಜೆಪಿಯ ಮುಖಂಡ ಚಯರ್ ಗಳನ್ನ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಪುತ್ತಿಲ ಬಿಜೆಪಿ ಸೇರ್ಪಡೆಗೆ ಪುತ್ತೂರಿನ ಕೆಲ ನಾಯಕರು ಭಾರೀ ವಿರೋಧ ಮಾಡುತ್ತಿದ್ದು, ರಾಜ್ಯಾಧ್ಯಕ್ಷರ ಮಾತನ್ನೇ ಕಡೆಗನಿಸಿದ್ದಾರೆ. ಇಡೀ ರಾಜ್ಯದಲ್ಲೇ ಪುತ್ತೂರು ಹಿಂದುತ್ವದ ಭದ್ರ ನೆಲ, ಇದು ರಾಜ್ಯಾಧ್ಯಕ್ಷರಿಗೂ ಗೊತ್ತಿಲ್ವ. ಎಲ್ಲವೂ ಗೊತ್ತಿದ್ದು ಅರುಣ್ ಪುತ್ತಿಲನನ್ನ ಹೇಗೆ ಸೇರಿಸಿಕೊಳ್ತೀರಿ. ಇಷ್ಟೆಲ್ಲ ಬಿಜೆಪಿಯನ್ನ ಛಿದ್ರ ಮಾಡಿದವನನ್ನ ಸೇರಿಸೋದೆ ಬೇಡ ಎಂದು ಗೌಪ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.

ಇಷ್ಟೆಲ್ಲ ಆಕ್ರೋಶದ ಬಳಿಕ ಪುತ್ತಿಲ ಬಿಜೆಪಿ ಸೇರ್ಪಡೆ ಮಾಧ್ಯಮಗಳ‌ ಸೃಷ್ಟಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.

Advertisement
Tags :
Advertisement