For the best experience, open
https://m.newskannada.com
on your mobile browser.
Advertisement

ಆರ್ಯನ್ ಖಾನ್ ವೆಬ್ ಸರಣಿಗೆ ಶಾರುಖ್ ಖಾನ್ ಹೀರೋ

ಶಾರುಖ್ ಖಾನ್​ರ ಪುತ್ರ ಆರ್ಯನ್ ಖಾನ್ ಸಹ ಚಿತ್ರರಂಗಕ್ಕೆ ನಿರ್ದೇಶಕನಾಗಿ ಎಂಟ್ರಿ ಕೊಡಲು ಸಜ್ಜಾಗಿದ್ದು, ಮಗನ ಮೊದಲ ಪ್ರಯತ್ನಕ್ಕೆ ಶಾರುಖ್ ಖಾನ್ ಬಂಡವಾಳ ಹೂಡುವುದು ಮಾತ್ರವೇ ಅಲ್ಲದೆ ತಾವೇ ಸ್ವತಃ ನಟನೆಯನ್ನೂ ಮಾಡಿದ್ದಾರೆ.
02:41 PM Mar 07, 2024 IST | Ashika S
ಆರ್ಯನ್ ಖಾನ್ ವೆಬ್ ಸರಣಿಗೆ ಶಾರುಖ್ ಖಾನ್ ಹೀರೋ

ಮುಂಬೈ:  ಶಾರುಖ್ ಖಾನ್​ರ ಪುತ್ರ ಆರ್ಯನ್ ಖಾನ್ ಸಹ ಚಿತ್ರರಂಗಕ್ಕೆ ನಿರ್ದೇಶಕನಾಗಿ ಎಂಟ್ರಿ ಕೊಡಲು ಸಜ್ಜಾಗಿದ್ದು, ಮಗನ ಮೊದಲ ಪ್ರಯತ್ನಕ್ಕೆ ಶಾರುಖ್ ಖಾನ್ ಬಂಡವಾಳ ಹೂಡುವುದು ಮಾತ್ರವೇ ಅಲ್ಲದೆ ತಾವೇ ಸ್ವತಃ ನಟನೆಯನ್ನೂ ಮಾಡಿದ್ದಾರೆ.

Advertisement

ವಿಶೇಷವೆಂದರೆ ಆರ್ಯನ್ ಖಾನ್ ನಿರ್ದೇಶಿಸುತ್ತಿರುವುದು ಸಿನಿಮಾ ಅಲ್ಲ ಬದಲಿಗೆ ವೆಬ್ ಸರಣಿ.

ಇದೀಗ ಸ್ವತಃ ಆರ್ಯನ್ ಖಾನ್ ಹೇಳಿಕೊಂಡಿರುವಂತೆ ತಮ್ಮ ವೆಬ್ ಸರಣಿಯಲ್ಲಿ ಶಾರುಖ್ ಖಾನ್ ನಟಿಸಲಿದ್ದಾರೆ. ವೆಬ್ ಸರಣಿಗೆ ‘ಸ್ಟಾರ್​ಡಮ್’ ಎಂದು ಹೆಸರಿಡಲಾಗಿದ್ದು, ಈ ವೆಬ್ ಸರಣಿ ಸಿನಿಮಾ ಉದ್ಯಮದ ಕುರಿತ ಕತೆಯನ್ನು ಒಳಗೊಂಡಿರಲಿದೆ.

Advertisement

‘ಎಲ್ಲರೂ ಅಪ್ಪನ ವೃತ್ತಿ ಬದ್ಧತೆಯ ಬಗ್ಗೆ ಮಾತನಾಡುತ್ತಾರೆ. ನಾನು ಅದನ್ನು ಕಣ್ಣಾರೆ ನೋಡಲು ಈ ಪ್ರಾಜೆಕ್ಟ್​ನಿಂದ ಸಾಧ್ಯವಾಯಿತು. ತಂದೆಯವರು ನಮ್ಮ ಈ ಪ್ರಾಜೆಕ್ಟ್​ಗೆ ಹೆಚ್ಚಿನ ಮೌಲ್ಯ ತಂದುಕೊಟ್ಟಿದ್ದಾರೆ. ಜನರು ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ನೋಡಲು ಕಾತರನಾಗಿದ್ದೇನೆ’ ಎಂದಿದ್ದಾರೆ ಆರ್ಯನ್ ಖಾನ್.

Advertisement
Tags :
Advertisement