For the best experience, open
https://m.newskannada.com
on your mobile browser.
Advertisement

ಮರಿ ಚೀತಾಗಳಿಗೆ ಜನ್ಮ ನೀಡಿದ ನಮೀಬಿಯಾದ ಆಶಾ: ಕ್ಯೂಟ್ ವಿಡಿಯೋ ವೈರಲ್

ನಮೀಬಿಯಾದಿಂದ ಭಾರತಕ್ಕೆ ಬಂದಿದ್ದ ಆಶಾ ಹೆಸರಿನ ಚೀತಾ ಮೂರು ಮರಿ ಚೀತಾಗಳಿಗೆ ಜನ್ಮ ನೀಡಿದೆ. ಮಧ್ಯಪ್ರದೇಶದ ಕುನೋ ನ್ಯಾಷನಲ್ ಪಾರ್ಕ್‌ನಲ್ಲಿ ಮರಿ ಚೀತಾಗಳು ಈಗಷ್ಟೇ ಪುಟ್ಟ ಪುಟ್ಟ ಹೆಜ್ಜೆಯನ್ನು ಹಾಕುತ್ತಿವೆ.
05:49 PM Jan 03, 2024 IST | Ashitha S
ಮರಿ ಚೀತಾಗಳಿಗೆ ಜನ್ಮ ನೀಡಿದ ನಮೀಬಿಯಾದ ಆಶಾ  ಕ್ಯೂಟ್ ವಿಡಿಯೋ ವೈರಲ್

ನವದೆಹಲಿ:‌ ನಮೀಬಿಯಾದಿಂದ ಭಾರತಕ್ಕೆ ಬಂದಿದ್ದ ಆಶಾ ಹೆಸರಿನ ಚೀತಾ ಮೂರು ಮರಿ ಚೀತಾಗಳಿಗೆ ಜನ್ಮ ನೀಡಿದೆ. ಮಧ್ಯಪ್ರದೇಶದ ಕುನೋ ನ್ಯಾಷನಲ್ ಪಾರ್ಕ್‌ನಲ್ಲಿ ಮರಿ ಚೀತಾಗಳು ಈಗಷ್ಟೇ ಪುಟ್ಟ ಪುಟ್ಟ ಹೆಜ್ಜೆಯನ್ನು ಹಾಕುತ್ತಿವೆ.

Advertisement

ಭಾರತದಲ್ಲಿ ನಮೀಬಿಯಾದ ಚೀತಾ ಮರಿ ಹಾಕಿರುವ ಸುದ್ದಿಯನ್ನ ಕೇಂದ್ರ ಸಚಿವ ಭೂಪೇಂದ್ರ ಯಾದವ್ ದೇಶದ ಜನತೆಗೆ ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ಭೂಪೇಂದ್ರ ಯಾದವ್ ಮರಿ ಚೀತಾಗಳ ಕ್ಯೂಟ್‌ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಕುನೋ ನ್ಯಾಷನಲ್ ಪಾರ್ಕ್‌ನಲ್ಲಿ ಮೂರು ಮರಿ ಚೀತಾಗಳ ಜನನ ಸಂತಸಕ್ಕೆ ಕಾರಣವಾಗಿದೆ. ಇತ್ತೀಚಿಗೆ ಭಾರತಕ್ಕೆ ಬಂದ ದಕ್ಷಿಣ ಆಫ್ರಿಕಾದ ಹೆಣ್ಣು ಚೀತಾಗಳು ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದ್ದವು. ಹೀಗಿರುವಾಗ ನಮೀಬಿಯಾದ ಚೀತಾ ಮೂರು ಮರಿಗಳಿಗೆ ಜನ್ಮ ನೀಡಿದ್ದು ನಿಟ್ಟುಸಿರು ಬಿಡುವಂತೆ ಮಾಡಿದೆ.

Advertisement

ಕೇಂದ್ರ ಸಚಿವ ಭೂಪೇಂದ್ರ ಯಾದವ್ ಹಂಚಿಕೊಂಡ ವಿಡಿಯೋವನ್ನು ಹಲವು ಪ್ರಾಣಿಪ್ರಿಯರು ಹಂಚಿಕೊಂಡಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕುನೋ ರಾಷ್ಟ್ರೀಯ ಉದ್ಯಾನವನದ ಅರಣ್ಯ ಸಿಬ್ಬಂದಿಗಳು ಶುಭಾಶಯಗಳನ್ನ ತಿಳಿಸಿದ್ದಾರೆ.‌

Advertisement
Tags :
Advertisement