For the best experience, open
https://m.newskannada.com
on your mobile browser.
Advertisement

ಹೊಸ ಉದ್ಯಮವೊಂದಕ್ಕೆ ಕೈ ಹಾಕಿದ ಅಶ್ವಿನಿ ಪುನೀತ್ ರಾಜ್‌ಕುಮಾರ್

ಡಾ.ರಾಜ್‌ಕುಮಾರ್  ಅವರ ಹುಟ್ಟುಹಬ್ಬದಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೊಸ ಉದ್ಯಮವೊಂದಕ್ಕೆ ಕೈ ಹಾಕಿದ್ದಾರೆ.
03:26 PM Apr 24, 2024 IST | Ashika S
ಹೊಸ ಉದ್ಯಮವೊಂದಕ್ಕೆ ಕೈ ಹಾಕಿದ ಅಶ್ವಿನಿ ಪುನೀತ್ ರಾಜ್‌ಕುಮಾರ್

ಬೆಂಗಳೂರು: ಡಾ.ರಾಜ್‌ಕುಮಾರ್  ಅವರ ಹುಟ್ಟುಹಬ್ಬದಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೊಸ ಉದ್ಯಮವೊಂದಕ್ಕೆ ಕೈ ಹಾಕಿದ್ದಾರೆ.

Advertisement

ಅಪ್ಪಾಜಿ ಹುಟ್ಟುಹಬ್ಬದ ಸವಿನೆನಪಿನಲ್ಲಿ ಎಂದು ಅಣ್ಣಾವ್ರರನ್ನು ಅಶ್ವಿನಿ ಸ್ಮರಿಸಿದ್ದಾರೆ. ಇಂದು ಅಪ್ಪಾಜಿಯವರ 95ನೇ ಜನ್ಮದಿನಾಚರಣೆಯ ಅಂಗವಾಗಿ ಹಾಗೂ ಗಂಧದಗುಡಿ ಚಿತ್ರದ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಶುಭಸುದ್ದಿ ತಿಳಿಸಿದ್ದಾರೆ.

ಹೊಸ ಉದ್ಯಮದ ಕುರಿತು ಪುನೀತ್ ಪತ್ನಿ ಅಶ್ವಿನಿ  ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.

Advertisement

ಅಪ್ಪು ಅವರ ‘ಗಂಧದಗುಡಿ ಅಗರಬತ್ತಿ’ಯ  ಶುಭಾರಂಭದೊಂದಿಗೆ ಸ್ಮರಿಸೋಣ ಎಂದು ಅಶ್ವಿನಿ ಪುನೀತ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಬೆಳಗ್ಗೆ ಡಾ.ರಾಜ್ ಕುಟುಂಬಸ್ಥರು ಕಂಠೀರವ ಸ್ಟುಡಿಯೋದಲ್ಲಿರುವ ಸ್ಮಾರಕಕ್ಕೆ ಆಗಮಿಸಿ, ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಪುನೀತ್ ಪತ್ನಿ ಅಶ್ವಿನಿ, ರಾಘವೇಂದ್ರ ರಾಜ್‌ಕುಮಾರ್ ಮತ್ತು ಡಾ.ರಾಜ್‌ಕುಮಾರ್ ಹೆಣ್ಣು ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಕುಟುಂಸ್ಥರು ಪೂಜೆಯಲ್ಲಿ ಭಾಗಿಯಾಗಿದ್ದಾರೆ.

Advertisement
Tags :
Advertisement