ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

"ಆರ್‌ಸಿಬಿ ರಾಂಗ್ ಪಾಸ್​ವರ್ಡ್" : ಅರ್ಥ ಆಯ್ತಾ ಅಂತ ಕೇಳ್ತಿದ್ದಾರೆ ಅಪ್ಪು ಪತ್ನಿ

ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರ ಮೂಲಕವೂ ಆರ್​ಸಿಬಿ ಈ ಒಂದು ಪ್ರಮೋಷನ್ ಕೆಲಸ ಮಾಡಿದೆ.
01:09 PM Mar 14, 2024 IST | Ashitha S

ಬೆಂಗಳೂರು: ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರ ಮೂಲಕವೂ ಆರ್​ಸಿಬಿ ಈ ಒಂದು ಪ್ರಮೋಷನ್ ಕೆಲಸ ಮಾಡಿದೆ.

Advertisement

ಹೊಸದಾಗಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರ ವಿಡಿಯೋ ಒಂದನ್ನು ಆರ್​ಸಿಬಿ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಎನ್ ಮಾಡ್ತಿದ್ದಾರೆ ಅರ್ಥ ಆಯ್ತಾ? ಎಂದು ಕ್ಯಾಪ್ಶನ್ ಹಾಕಿ ಆರ್​​ಸಿಬಿ ಪೋಸ್ಟ್ ಶೇರ್ ಮಾಡಿದ್ದಾರೆ. ಈ ಪೋಸ್ಟ್​ನಲ್ಲಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಮೂಲಕ ಆರ್​ಸಿಬಿ ಯ ಬಾಂಗಲೋರ್ ಬೆಂಗಳೂರು ಆಗಿ ಬದಲಾಗುವ ಸೂಚನೆ ಕೊಟ್ಟಿದ್ದಾರೆ.

ಅಶ್ವಿನಿ ಪುನೀತ್​ರಾಜ್​ಕುಮಾರ್ ಅವರು ರಾಯಲ್ ಚಾಲೆಂಜರ್ಸ್ ಬಾಂಗಲೋರ್ ಎಂದು ಲ್ಯಾಪ್​​ಟಾಪ್​ನಲ್ಲಿ ಪಾಸ್​ವರ್ಡ್ ಹಾಕುತ್ತಾರೆ. ಆದರೆ ಅದು ರಾಂಗ್ ಆಗಿ ತೋರಿಸುತ್ತದೆ. ಅಲ್ಲಿ ಕೆಳಗಡೆ ಹೊಸ ಪಾಸ್​ವರ್ಡ್ ಹಳೆಯ ಪಾಸ್​ವರ್ಡ್​ನಂತೆಯೇ ಇರಬಾರದು ಎನ್ನುವ ಒಂದು ಸಲಹೆ ಪಾಪ್​ ಅಪ್ ಆಗುತ್ತದೆ.

Advertisement

ನಂತರ ಅಶ್ಚಿನಿ ಅವರು ಒಮ್ಮೆ ಟೈಪಿಂಗ್ ನಿಲ್ಲಿಸಿ ಸುತ್ತಲೂ ನೋಡುತ್ತಾರೆ. ಆಗ ಅಪ್ಪು ಗ್ರೌಂಡ್​ನಲ್ಲಿ ಆರ್​ಸಿಬಿ ಫ್ಲ್ಯಾಗ್ ಹಿಡಿದು ಹೋಗುವ ಹಳೆಯ ಫೋಟೋ ಫ್ರೇಮ್ ಕಾಣಿಸುತ್ತದೆ. ಇದನ್ನು ನೋಡಿ ಅಶ್ವಿನಿ ಅವರು ಮುಗುಳ್ನಗುತ್ತಾರೆ.

ನಂತರ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಬಾಂಗಲೋರ್ ಎನ್ನುವ ಸ್ಪೆಲ್ಲಿಂಗ್​ನ್ನು ಬ್ಯಾಕ್​ಸ್ಪೇಸ್ ಕೊಟ್ಟು ಅಳಿಸುತ್ತಾರೆ. ಆ ನಂತರ ಅವರು ಅರ್ಥ ಆಯ್ತಾ ಎಂದು ಸ್ಮೈಲ್ ಮಾಡುತ್ತಾರೆ. ಇದನ್ನು ನೋಡಿ ಆರ್​ಸಿಬಿ ಅಭಿಮಾನಿಗಳು ಅರ್ಥ ಮಾಡಿಕೊಂಡಿದ್ದಾರೆ.

ಈ ಮೂಲಕ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಬಾಂಗಲೋರ್ ಬೆಂಗಳೂರು ಆಗಿ ಬದಲಾಗುವ ಹಿಂಟ್ ಕೊಟ್ಟಿದ್ದಾರೆ. ಇನ್ನು ಕಳೆದ ದಿನ ಇದರಂತೆ ರಿಷಭ್‌ಶೆಟ್ಟಿ ಕೂಡ ಹಿಂಟ್‌ ಕೊಟ್ಟಿದ್ದಾರೆ.

Advertisement
Tags :
indiaKARNATAKALatestNewsNewsKannadaRCBನವದೆಹಲಿಬೆಂಗಳೂರು
Advertisement
Next Article