For the best experience, open
https://m.newskannada.com
on your mobile browser.
Advertisement

ವೃದ್ಧ ದಂಪತಿ ಮೇಲೆ ಹಲ್ಲೆ ಪ್ರಕರಣ : ಪಾದ್ರಿಯನ್ನು ಬಂಧಿಸದ ಪೊಲೀಸರು

ಜಿಲ್ಲೆಯಲ್ಲಿ ಚರ್ಚ್ ಪಾದ್ರಿಯಿಂದ ವೃದ್ಧ ದಂಪತಿ ಮೇಲೆ ಹಲ್ಲೆ ಪ್ರಕರಣದಲ್ಲಿ ವೃದ್ಧ ದಂಪತಿಗಳಿಗೆ ಇನ್ನೂ ನ್ಯಾಯ ದೊರಕಿಲ್ಲ. ಕಳೆದ ಫೆ.29ರಂದು ವಿಟ್ಲ ಠಾಣಾ ವ್ಯಾಪ್ತಿಯ ಮಣೆಲದಲ್ಲಿ ಈ ಘಟನೆ ನಡೆದಿದ್ದು ವೃದ್ಧರೂ ಎಂದು ಲೆಕ್ಕಿಸದೆ ಪಾದ್ರಿ ನೆಲ್ಸನ್ ಒಲಿವೆರಾ ಹಿಗ್ಗಾ ಮುಗ್ಗಾ ಥಳಿಸಿದ್ದ ಆದರೆ ಆರೋಪಿ ಪಾದ್ರಿಯನ್ನ ಪೊಲೀಸರು ಘಟನೆ ನಡೆದು ಒಂದು ತಿಂಗಳಾದರೂ ಬಂಧಿಸಿಲ್ಲ. ಅಲ್ಲದೇ ಹಲ್ಲೆ ನಡೆಸಿದ ಪಾದ್ರಿ ಪರವಾಗಿ ಚರ್ಚ್‌ನ ಡಯಾಸಿಸ್ ಮಂದಿ ನಿಂತು 'ಕೃತ್ಯ ಎಸಗಿದ ಪಾದ್ರಿಯನ್ನ ರಕ್ಷಿಸಲಾಗುತ್ತಿದೆ'
12:22 PM Mar 27, 2024 IST | Nisarga K
ವೃದ್ಧ ದಂಪತಿ ಮೇಲೆ ಹಲ್ಲೆ ಪ್ರಕರಣ   ಪಾದ್ರಿಯನ್ನು ಬಂಧಿಸದ ಪೊಲೀಸರು
ವೃದ್ಧ ದಂಪತಿ ಮೇಲೆ ಹಲ್ಲೆ ಪ್ರಕರಣ : ಪಾದ್ರಿಯನ್ನು ಬಂಧಿಸದ ಪೊಲೀಸರು

ಮಂಗಳೂರು:  ಜಿಲ್ಲೆಯಲ್ಲಿ ಚರ್ಚ್ ಪಾದ್ರಿಯಿಂದ ವೃದ್ಧ ದಂಪತಿ ಮೇಲೆ ಹಲ್ಲೆ ಪ್ರಕರಣದಲ್ಲಿ ವೃದ್ಧ ದಂಪತಿಗಳಿಗೆ ಇನ್ನೂ ನ್ಯಾಯ ದೊರಕಿಲ್ಲ. ಕಳೆದ ಫೆ.29ರಂದು ವಿಟ್ಲ ಠಾಣಾ ವ್ಯಾಪ್ತಿಯ ಮಣೆಲದಲ್ಲಿ ಈ ಘಟನೆ ನಡೆದಿದ್ದು ವೃದ್ಧರೂ ಎಂದು ಲೆಕ್ಕಿಸದೆ ಪಾದ್ರಿ ನೆಲ್ಸನ್ ಒಲಿವೆರಾ ಹಿಗ್ಗಾ ಮುಗ್ಗಾ ಥಳಿಸಿದ್ದ ಆದರೆ ಆರೋಪಿ ಪಾದ್ರಿಯನ್ನ ಪೊಲೀಸರು ಘಟನೆ ನಡೆದು ಒಂದು ತಿಂಗಳಾದರೂ ಬಂಧಿಸಿಲ್ಲ. ಅಲ್ಲದೇ ಹಲ್ಲೆ ನಡೆಸಿದ ಪಾದ್ರಿ ಪರವಾಗಿ ಚರ್ಚ್‌ನ ಡಯಾಸಿಸ್ ಮಂದಿ ನಿಂತು "ಕೃತ್ಯ ಎಸಗಿದ ಪಾದ್ರಿಯನ್ನ ರಕ್ಷಿಸಲಾಗುತ್ತಿದೆ"

Advertisement

ಕೇವಲ ಕಣ್ಣಿಗೆ ಮಣ್ಣೆರೆಚಲು ಪಾದ್ರಿಯನ್ನ ಹುದ್ದೆಯಿಂದ ವಜಾ ಮಾಡಿದ್ದಾರೆ .ಘಟನೆ ನಡೆದು ತಿಂಗಾಳಾಗುತ್ತಾ ಬಂದರೂ ಪಾದ್ರಿ ಬಂಧನವಾಗಿಲ್ಲ .ಬದಲಾಗಿ ವೃದ್ಧ ದಂಪತಿಗಳನ್ನ ಟಾರ್ಗೆಟ್ ಮಾಡಲಾಗುತ್ತಿದೆ .ಪತ್ರಿಕಾಗೋಷ್ಠಿ ನಡೆಸಿ ವೃದ್ಧ ದಂಪತಿಗಳ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈ ಕುರಿತು ದೂರು ನೀಡಿದ ಕಾರಣಕ್ಕೆ ವೃದ್ಧ ದಂಪತಿಗಳನ್ನು ಅಘೋಷಿತ ಬಹಿಷ್ಕಾರ ಮಾಡಲಾಗಿದೆ.ವೃದ್ಧರ ಪರ ನಿಂತವರನ್ನು ಕೂಡ ಟಾರ್ಗೆಟ್ ಮಾಡುತ್ತಿದ್ದಾರೆ.ಇದು ಚರ್ಚ್ ನ ಹೆಸರು ಕೆಡಿಸಲು ನಡೆಸಿದ ಹುನ್ನಾರ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇಡೀ ಸಮುದಾಯವನ್ನ ವೃದ್ಧ ದಂಪತಿಗಳ ವಿರುದ್ಧ ಎತ್ತಿ ಕಟ್ಟುವ ಷಡ್ಯಂತ್ರ ಮಾಡಿದ್ದಾರೆ. ಚರ್ಚ್ ಡಯಾಸಿಸ್ ಮುಖ್ಯಸ್ಥರೇ ಪ್ರಕರಣವನ್ನ ಮುಚ್ಚಿ ಹಾಕುಲು ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ.

Advertisement

Advertisement
Tags :
Advertisement