ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬಾಯ್‌ಫ್ರೆಂಡ್‌ ಜೊತೆಗೆ ಸೇರಿ ಮಗುವಿನ ಮೇಲೆ ತಾಯಿಯಿಂದ ಹಲ್ಲೆ!

ಹೆತ್ತ ತಾಯಿ ತನ್ನ 4 ವರ್ಷ ಮಗುವಿನ ಮೇಲೆ ಅಮಾನುಷ ಕೃತ್ಯವೆಸಗಿರುವ ಘಟನೆ ಗಿರಿನಗರದಲ್ಲಿ ಬೆಳಕಿಗೆ ಬಂದಿದೆ. ಬಾಯ್ ಫ್ರೆಂಡ್ ಜೊತೆ ಸೇರಿ ತಾಯಿ ತನ್ನ ಮಗುವಿನ ಮೇಲೆ ದಿನನಿತ್ಯ ಹಲ್ಲೆ ಮಾಡುತ್ತಾ ಬಂದಿದ್ದಾಳೆ.
01:34 PM Mar 03, 2024 IST | Ashitha S

ಬೆಂಗಳೂರು: ಹೆತ್ತ ತಾಯಿ ತನ್ನ 4 ವರ್ಷ ಮಗುವಿನ ಮೇಲೆ ಅಮಾನುಷ ಕೃತ್ಯವೆಸಗಿರುವ ಘಟನೆ ಗಿರಿನಗರದಲ್ಲಿ ಬೆಳಕಿಗೆ ಬಂದಿದೆ. ಬಾಯ್ ಫ್ರೆಂಡ್ ಜೊತೆ ಸೇರಿ ತಾಯಿ ತನ್ನ ಮಗುವಿನ ಮೇಲೆ ದಿನನಿತ್ಯ ಹಲ್ಲೆ ಮಾಡುತ್ತಾ ಬಂದಿದ್ದಾಳೆ.

Advertisement

ತಾಯಿಯ ಹಲ್ಲೆಯಿಂದ ಮಗುವಿನ ದೇಹದ ಮೇಲೆಲ್ಲಾ ಗಾಯಗಳಾಗಿವೆ. ತಾಯಿ ಬೆಳಗ್ಗೆ ಕೆಲಸಕ್ಕೆ ಹೋಗುವಾಗ ಮಗುವನ್ನು ಮನೆಯಲ್ಲಿ ಬಿಟ್ಟು ಬೀಗ ಹಾಕಿ ಹೋದರೆ, ರಾತ್ರಿ ಬರೋವರೆಗೂ ಕೂಡಿ ಹಾಕಿರೋದು ಬೆಳಕಿಗೆ ಬಂದಿದೆ.

ಎರಡು ವಾರಗಳ ಹಿಂದೆ ನಡೆದಿರುವ ಘಟನೆ ಇದಾಗಿದೆ. ಮಹಿಳೆಯನ್ನು ಶಾರಿನ್ ಎಂದು ಗುರುತಿಸಲಾಗಿದೆ. ಈಕೆಗೆ ಶಂಕರ್​ ಎಂಬಾತನ ಜೊತೆಗೆ ಈಗಾಗಲೇ ವಿವಾಹವಾಗಿದ್ದು, ಆದರೆ ಮಹಿಳೆ ಗಂಡನ ಜೊತೆಗೆ ವಾಸಿಸುತ್ತಿಲ್ಲ. ಹಣಕಾಸಿನ ತೊಂದರೆಯಿಂದ ಮಗುವನ್ನ ಮನೆಯಲ್ಲೇ ಕೂಡಿಹಾಕಿ ಹೋಗುತ್ತಿದ್ದಳು. ಕೆಲಸ ಹುಡುಕಲು ಮನೆಯಲ್ಲಿ ಮಗುವನ್ನ ಬಿಟ್ಟು ಹೋಗಿರುವುದಾಗಿ ತಾಯಿ ಹೇಳಿದ್ದಾಳೆ.

Advertisement

ಇನ್ನು ಮಧ್ಯಾಹ್ನ ಮಗುವಿಗೆ ಊಟ ಕೊಡೋಕೆ ಅಂತಾ ಮಹಿಳೆಯ ಫ್ರೆಂಡ್ ಮನೆಗೆ ಬರುತ್ತಿದ್ದನಂತೆ. ಆದರೆ ಮಗುವಿನ ಮೈಮೇಲೆಲ್ಲಾ ಪೂರ್ತಿ ಗಾಯಗಳಾಗಿದ್ದು, ತಾಯಿ ಮತ್ತು ಅಂಕಲ್​ ನನಗೆ ಹಲ್ಲೆ ಮಾಡುವುದಾಗಿ ಮಗು ಹೇಳಿಕೊಂಡಿದೆ. ಇನ್ನು ಈ ಘಟನೆ ಸಂಬಂಧ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ನಾಗವೇಣಿ ಮಗುವಿನ ರಕ್ಷಣೆ ಮಾಡಿದ್ದಾರೆ. ಸದ್ಯ ಶಿಶು ಮಂದಿರದಲ್ಲಿ ಮಗುವಿನ ಪಾಲನೆ ಮಾಡಲಾಗುತ್ತಿದೆ. ಕೌನ್ಸಿಲಿಂಗ್ ವೇಳೆ ತಾಯಿ ಜೊತೆ ಹೋಗಲು ಮಗು ನಿರಾಕರಿಸಿದೆ. ನಾಳೆ ಮತ್ತೊಂದು ಸುತ್ತಿನ ಕೌನ್ಸಿಲಿಂಗ್ ಗಾಗಿ CWC ತಾಯಿಗೆ ನೋಟಿಸ್ ನೀಡಿದೆ.

Advertisement
Tags :
ASSAULTcrimeindiaLatestNewsNewsKannadaತಾಯಿಬೆಂಗಳೂರುಹಲ್ಲೆ
Advertisement
Next Article