ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಹಿಳೆಯ ಮೇಲೆ ಹಲ್ಲೆ : ಬಿಎಂಟಿಸಿ ಕಂಡಕ್ಟರ್ ಬಂಧನ

ಬಿಎಂಟಿಸಿ ಬಸ್‌ನಲ್ಲಿ ಟಿಕೆಟ್ ಕೇಳಿದ ಮಹಿಳೆಯನ್ನು ಕಂಡಕ್ಟರ್‌ ಮನಬಂದಂತೆ ಥಳಿಸಿರುವ ಘಟನೆ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಬಗ್ಗೆ ಎಫ್‌ಐಆರ್‌ ದಾಖಲಾದ ಬೆನ್ನಲ್ಲೇ ಅಮಾನತಾಗಿದ್ದ ನಿರ್ವಾಹಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
07:40 PM Mar 26, 2024 IST | Chaitra Kulal

ಬೆಂಗಳೂರು: ಬಿಎಂಟಿಸಿ ಬಸ್‌ನಲ್ಲಿ ಟಿಕೆಟ್ ಕೇಳಿದ ಮಹಿಳೆಯನ್ನು ಕಂಡಕ್ಟರ್‌ ಮನಬಂದಂತೆ ಥಳಿಸಿರುವ ಘಟನೆ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಬಗ್ಗೆ ಎಫ್‌ಐಆರ್‌ ದಾಖಲಾದ ಬೆನ್ನಲ್ಲೇ ಅಮಾನತಾಗಿದ್ದ ನಿರ್ವಾಹಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ತನ್ಜಿಲಾ ಇಸ್ಮಾಯಿಲ್ ಹಲ್ಲೆಗೊಳಗಾದ ಮಹಿಳೆ. ನಿರ್ವಾಹಕ ಬಸವರಾಜ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಳೇಕಳ್ಳಿಯಿಂದ ಶಿವಾಜಿನಗರಕ್ಕೆ ಹೊರಟಿದ್ದ ಮಹಿಳೆ, ಬಿಳೇಕಳ್ಳಿ ಬಳಿ ಟಿಕೆಟ್ ಕೇಳಿದ್ದಾಳೆ. ಆ ವೇಳೆ ಕಂಡಕ್ಟರ್ ಕೊಟ್ಟಿರಲಿಲ್ಲ. ಮತ್ತೆ ಡೈರಿ‌ ಸರ್ಕಲ್ ಬಳಿ ಟಿಕೆಟ್ ಕೇಳಿದಾಗ ಗಲಾಟೆಯಾಗಿದೆ. ಈ ವೇಳೆ ಮಹಿಳೆ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸುವ ಮೂಲಕ ಕಂಡಕ್ಟರ್ ಅಟ್ಟಹಾಸ ಮೆರೆದಿದ್ದಾನೆ.

ಘಟನೆ ಸಂಬಂಧ ಐಪಿಸಿ 354A ಅಡಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕಂಡಕ್ಟರ್‌ ವಿರುದ್ಧ ಪ್ರಕರಣ ದಾಖಲಾಗಿತ್ತು. ಬೆನ್ನಲ್ಲೇ ಹಲ್ಲೆ ಮಾಡಿದ ನಿರ್ವಾಹಕ ಬಸವರಾಜ್‌ನ ಅಮಾನತು ಮಾಡಿ ಬಿಎಂಟಿಸಿ ಆದೇಶ ಹೊರಡಿಸಿತ್ತು. ಡಿಪೋ ನಂಬರ್ 34ಕ್ಕೆ‌ ಸೇರಿದ ಬಸ್‌ನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆದಿತ್ತು. ಹೀಗಾಗಿ ಕರ್ತವ್ಯದಲ್ಲಿದ್ದ ವೇಳೆ ಕಂಡಕ್ಟರ್‌ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

Advertisement

Advertisement
Tags :
attackBMTCFIRLatestNewsNewsKarnatakaPOLICE
Advertisement
Next Article