For the best experience, open
https://m.newskannada.com
on your mobile browser.
Advertisement

ಮೊಬೈಲ್ ನಂಬರ್ ಕೊಡಲು ನಿರಾಕರಿಸಿದ ಯುವತಿ ಮೇಲೆ ಹಲ್ಲೆ; ಮೂವರು ಯುವಕರು ಅರೆಸ್ಟ್

ಜಿಲ್ಲೆಯ ರಬಕವಿ ಬಸ್ ನಿಲ್ದಾಣದಲ್ಲಿ ಯುವಕರ ಗುಂಪೊಂದು ವಿದ್ಯಾರ್ಥಿನಿಯರನ್ನು ಚುಡಾಯಿಸಿ, ಹಲ್ಲೆ ಮಾಡಿದ ಘಟನೆ ಬುಧವಾರ ನಡೆದದಿದ್ದು ತಡವಾಗಿ ಬೆಳಕಿಗೆ ಬಂದಿದೆ.
12:57 PM Mar 08, 2024 IST | Gayathri SG
ಮೊಬೈಲ್ ನಂಬರ್ ಕೊಡಲು ನಿರಾಕರಿಸಿದ ಯುವತಿ ಮೇಲೆ ಹಲ್ಲೆ  ಮೂವರು ಯುವಕರು ಅರೆಸ್ಟ್

ಬಾಗಲಕೋಟೆ: ಜಿಲ್ಲೆಯ ರಬಕವಿ ಬಸ್ ನಿಲ್ದಾಣದಲ್ಲಿ ಯುವಕರ ಗುಂಪೊಂದು ವಿದ್ಯಾರ್ಥಿನಿಯರನ್ನು ಚುಡಾಯಿಸಿ, ಹಲ್ಲೆ ಮಾಡಿದ ಘಟನೆ ಬುಧವಾರ ನಡೆದದಿದ್ದು ತಡವಾಗಿ ಬೆಳಕಿಗೆ ಬಂದಿದೆ.

Advertisement

ಹಲ್ಲೆಗೊಳಗಾದ ವಿದ್ಯಾರ್ಥಿನಿ (ಸ್ವಾತಿ ನಡಕಟ್ಟಿ) ಆಸ್ಪತ್ರೆಗೆ ದಾಖಲಾಗಿದ್ದಾಳೆ.  ಆರೋಪಿಗಳಾದ ಅನ್ವರ್ ಮಕಾಂದಾರ್, ಆಯನ್ ಪಟೇಲ್, ಜಾವೀದ್ ಅಲಿಹ್ಮದ್ ಎಂಬ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ಹಿನ್ನಲೆ: ಸ್ವಾತಿ ತನ್ನ ಸ್ನೇಹಿತೆಯರ ಜೊತೆ ಕಾಲೇಜಿಗೆ ತೆರಳಲು ಬಸ್​ಗಾಗಿ ಕಾಯುತ್ತಿದ್ದಳು. ಈ ವೇಳೆ ಬಂದ ಯುವಕರು ಯುವತಿಯನ್ನು ಚುಡಾಯಿಸಿದ್ದಾರೆ. ಹಾಗೂ ಹಲ್ಲೆ ಮಾಡಿದ್ದಾರೆ. ಬಸ್​ಗಾಗಿ ಕಾದು ನಿಂತಿದ್ದ ವಿದ್ಯಾರ್ಥಿನಿಯರ ಫೋಟೋ ಕ್ಲಿಕ್ಕಿಸಿ, ಬಳಿಕ ಅವರ ಬಳಿ ತೆರಳಿ ಮೊಬೈಲ್ ನಂಬರ್ ನೀಡುವಂತೆ ಪೀಡಿಸಿದ್ದಾರೆ. ನಂಬರ್ ಕೊಡಲು ನಿರಾಕರಿಸಿದ್ದಕ್ಕೆ ಸ್ವಾತಿ ಮೇಲೆ ಹಲ್ಲೆ ಮಾಡಿದ್ದಾರೆ.

Advertisement

ಈ ಘಟನೆ ಸಂಬಂಧ ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕರನ್ನು ತೇರದಾಳ ಪೊಲೀಸರು ಬಂಧಿಸಿದ್ದಾರೆ.

Advertisement
Tags :
Advertisement