For the best experience, open
https://m.newskannada.com
on your mobile browser.
Advertisement

ಹಾರ್ನ್‌ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಚಾಕುವಿನಿಂದ ಹಲ್ಲೆ

ದಾರಿ ಬಿಡುವಂತೆ ಹಾರ್ನ್ ಮಾಡಿದನ್ನು ಪ್ರಶ್ನಿಸಿದ್ದಕ್ಕೆ ಚಾಕು ಇರಿದು ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೀಲಲಿಗೆ ಗ್ರಾಮದಲ್ಲಿ ನಡೆದಿದೆ.
03:57 PM Mar 24, 2024 IST | Chaitra Kulal
ಹಾರ್ನ್‌ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಚಾಕುವಿನಿಂದ ಹಲ್ಲೆ

ಆನೇಕಲ್: ದಾರಿ ಬಿಡುವಂತೆ ಹಾರ್ನ್ ಮಾಡಿದನ್ನು ಪ್ರಶ್ನಿಸಿದ್ದಕ್ಕೆ ಚಾಕು ಇರಿದು ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೀಲಲಿಗೆ ಗ್ರಾಮದಲ್ಲಿ ನಡೆದಿದೆ.

Advertisement

ಕಿತ್ತಗಾನಹಳ್ಳಿ ಗ್ರಾಮದ ಸುನೀಲ್ ಹಾಗೂ ಕಾರ್ತಿಕ್ ಚಾಕು ಇರಿತದಿಂದ ಗಾಯಗೊಂಡವರು. ಕಿಶೋರ್, ಶ್ರೀಧರ್, ವಾಲೆಮಂಜ, ಹೇಮಂತ್, ಮನೋಜ್, ತುಕಡಿ ಅಲಿಯಾಸ್‌ ವೆಂಕಟರಾಜು ಎಂಬುವವರು ಹಲ್ಲೆ ನಡೆಸಿದವರು.

ಕಿಶೋರ್‌ ಎಂಬಾತ ಇತ್ತೀಚೆಗೆ ಜೈಲಿನಿಂದ ಬಿಡುಗಡೆ ಆಗಿ ಹೊರಬಂದಿದ್ದನು. ಕಿಶೋರ್‌ ಸ್ನೇಹಿತ ಶ್ರೀಧರ್‌ ಟಿಟಿ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಟಿಟಿ ಚಾಲಕ ಮುಂದೆ ಸಾಗುತ್ತಿದ್ದ ಲಾರಿಗೆ ದಾರಿ ಬಿಡುವಂತೆ ಪದೇ ಪದೆ ಹಾರ್ನ್ ಮಾಡಿದ್ದನು. ಟಿಟಿ ವಾಹನದ ಹಿಂದೆ ಬರುತ್ತಿದ್ದ ಬೈಕ್ ಸವಾರ ಅಂಕಿತ್ ಎಂಬಾತ ಇದನ್ನೂ ಪ್ರಶ್ನೆ ಮಾಡಿದನು. ಆಗ ಟಿಟಿ ವಾಹನದಲ್ಲಿ ಶ್ರೀಧರ್ ಹೊರ ಬಂದು ಅಂಕಿತ್ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾನೆ.

Advertisement

ಸುನೀಲ್ ಹಾಗೂ ಕಾರ್ತಿಕ್ ಅವರ ಹೊಟ್ಟೆ, ತೊಡೆ ಭಾಗಕ್ಕೆ ಚಾಕು ಇರಿದು ಕಿಶೋರ್‌ ಗ್ಯಾಂಗ್‌ ಪರಾರಿಯಾಗಿದ್ದಾರೆ. ಗಾಯಾಳುಗಳನ್ನು ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರ್ಯನಗರ ಪೊಲೀಸರು ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.

Advertisement
Tags :
Advertisement