For the best experience, open
https://m.newskannada.com
on your mobile browser.
Advertisement

ಕೊರೊನಾ ವ್ಯಾಕ್ಸಿನ್ ಹಿಂಪಡೆದ ಅಸ್ಟ್ರಾಜೆನೆಕಾ : ಹೆಚ್ಚಿದ ಆತಂಕ

ಕೊರೊನಾ ವ್ಯಾಕ್ಸಿನ್ ಮತ್ತು ಕೋವಶೀಲ್ಡ್‌ ಪಡೆದವರಲ್ಲಿ ಅಡ್ಡಪರಿಣಾಮಗಳು ಕಾಣಿಸಿಕೊಳ್ಳುತ್ತವೆ ಎಂಬ ಮಾತಿಗೆ ಧಂಗಾಗಿರುವ ಜನರಿಗೆ ಇದೀಗ ಕೊರೊನಾ ವ್ಯಾಕ್ಸಿನ್ ಹಿಂಪಡೆದ ಅಸ್ಟ್ರಾಜೆನೆಕಾ ಇನ್ನೂ ಆತಂಕ ತಂದೊಡ್ಡಿದೆ.
08:44 AM May 08, 2024 IST | Nisarga K
ಕೊರೊನಾ ವ್ಯಾಕ್ಸಿನ್ ಹಿಂಪಡೆದ ಅಸ್ಟ್ರಾಜೆನೆಕಾ   ಹೆಚ್ಚಿದ ಆತಂಕ
ಕೊರೊನಾ ವ್ಯಾಕ್ಸಿನ್ ಹಿಂಪಡೆದ ಅಸ್ಟ್ರಾಜೆನೆಕಾ : ಹೆಚ್ಚಿದ ಆತಂಕ

ಬೆಂಗಳೂರು: ಕೊರೊನಾ ವ್ಯಾಕ್ಸಿನ್ ಮತ್ತು ಕೋವಶೀಲ್ಡ್‌ ಪಡೆದವರಲ್ಲಿ ಅಡ್ಡಪರಿಣಾಮಗಳು ಕಾಣಿಸಿಕೊಳ್ಳುತ್ತವೆ ಎಂಬ ಮಾತಿಗೆ ಧಂಗಾಗಿರುವ ಜನರಿಗೆ ಇದೀಗ ಕೊರೊನಾ ವ್ಯಾಕ್ಸಿನ್ ಹಿಂಪಡೆದ ಅಸ್ಟ್ರಾಜೆನೆಕಾ ಇನ್ನೂ ಆತಂಕ ತಂದೊಡ್ಡಿದೆ.

Advertisement

ತಾನು ಅಭಿವೃದ್ಧಿಪಡಿಸಿದ್ದ ಕೋವಿಶೀಲ್ಡ್​ ವ್ಯಾಕ್ಸಿನ್​​ನಿಂದ ಅಪರೂಪದ ಪ್ರಕರಣಗಳಲ್ಲಿ ಅಡ್ಡಪರಿಣಾಮ ಉಂಟು ಮಾಡಲಿದೆ ಎಂದು ಕೋರ್ಟ್​ಗೆ ದಾಖಲೆ ಸಲ್ಲಿಸಿದ ಬೆನ್ನಲ್ಲೇ, ಈ ನಿರ್ಧಾರಕ್ಕೆ ಬಂದಿದೆ. ಆದರೆ ಆರ್ಥಿಕ ಕಾರಣ ಹಿನ್ನೆಲೆಯಲ್ಲಿ ಜಾಗತಿಕವಾಗಿ ವ್ಯಾಕ್ಸಿನ್​ಗಳನ್ನು ವಾಪಸ್ ಪಡೆಯುತ್ತಿದ್ದೇವೆ ಎಂದು ಸಂಸ್ಥೆ ಹೇಳಿದೆ ಎಂದು ವರದಿಯಾಗಿದೆ.

ಲಸಿಕೆ ಇನ್ಮುಂದೆ ತಯಾರು ಮಾಡುವುದಿಲ್ಲ, ಜೊತೆಗೆ ಎಲ್ಲಿಯೂ ಕೂಡ ಸಪ್ಲೈ ಮಾಡುವುದಿಲ್ಲ ಎಂದು ಕಂಪನಿ ಹೇಳಿದೆ. ಲಸಿಕೆಯನ್ನು ವಾಪಸ್​ ಪಡೆದುಕೊಳ್ಳುತ್ತಿರೋದು ಸಂಪೂರ್ಣ ಕಾಕತಾಳೀಯ. ವ್ಯಾಕ್ಸಿನ್ ಪಡೆಯುವುದರಿಂದ ಟಿಟಿಎಸ್​ ಬರುತ್ತದೆ ಅನ್ನೋದನ್ನು ಅಲ್ಲಗಳೆದಿದೆ. ಅದಕ್ಕೂ, ವ್ಯಾಕ್ಸಿನ್ ಪಡೆಯುತ್ತಿರೋದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಫಾರ್ಮಾ ಕಂಪನಿ ಹೇಳಿದೆ ಎಂದು ವರದಿಯಾಗಿದೆ.

Advertisement

Advertisement
Tags :
Advertisement