For the best experience, open
https://m.newskannada.com
on your mobile browser.
Advertisement

ನೇಪಾಳದಲ್ಲಿ ಭೂಕಂಪನ: ಕನಿಷ್ಠ 70 ಮಂದಿ ಸಾವು

ನೇಪಾಳದ ಕಠ್ಮಂಡು, ಪಶ್ಚಿಮ ರುಕುಂ, ಜಾಜರಕೋಟ್ ಸೇರಿದಂತೆ ಹಲವೆಡೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆ ದಾಖಲಾಗಿದೆ. ಘಟನೆಯಲ್ಲಿ 70 ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.
07:21 AM Nov 04, 2023 IST | Gayathri SG
ನೇಪಾಳದಲ್ಲಿ ಭೂಕಂಪನ  ಕನಿಷ್ಠ 70 ಮಂದಿ ಸಾವು

ಕಠ್ಮಂಡು: ನೇಪಾಳದ ಕಠ್ಮಂಡು, ಪಶ್ಚಿಮ ರುಕುಂ, ಜಾಜರಕೋಟ್ ಸೇರಿದಂತೆ ಹಲವೆಡೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆ ದಾಖಲಾಗಿದೆ. ಘಟನೆಯಲ್ಲಿ 70 ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ದೆಹಲಿ-ಎನ್‌ಸಿಆರ್ ಪ್ರದೇಶ, ಬಿಹಾರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಪ್ರಬಲ ಕಂಪನಗಳು ಸಂಭವಿಸಿವೆ.

Advertisement

ಭೂಕಂಪನದ ರಾಷ್ಟ್ರೀಯ ಕೇಂದ್ರ ಪ್ರಕಾರ, ಭೂಕಂಪವು ಶುಕ್ರವಾರ ರಾತ್ರಿ 11:32 ಕ್ಕೆ 10 ಕಿಮೀ ಆಳದಲ್ಲಿ ಸಂಭವಿಸಿದೆ. ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರದ ಅಧಿಕಾರಿಗಳ ಪ್ರಕಾರ, ಭೂಕಂಪದ ಕೇಂದ್ರಬಿಂದು ನೇಪಾಳದ ಜಜರ್ಕೋಟ್ ಜಿಲ್ಲೆಯ ಲಾಮಿಡಾಂಡಾ ಪ್ರದೇಶದಲ್ಲಿದೆ. ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಸಂಭವಿಸಿದ ಸರಣಿ ಭೂಕಂಪಗಳ ಬೆನ್ನಲ್ಲೇ ಶುಕ್ರವಾರ ಭೂಕಂಪ ಸಂಭವಿಸಿದೆ.

Advertisement
Advertisement
Tags :
Advertisement