ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

24ನೇ ವಯಸ್ಸಿಗೆ ಕರ್ನಾಟಕದ ಕಿರಿಯ ಸಿವಿಲ್ ನ್ಯಾಯಾಧೀಶೆಯಾದ‌ ನಮೃತ ಎಸ್‌. ಹೊಸಮಠ

ರಾಜ್ಯದ ನೂತನ ಸಿವಿಲ್‌ ನ್ಯಾಯಾಧೀಶರಾಗಿ 33 ಯುವ ವಕೀಲರು ಆಯ್ಕೆಯಾಗಿದ್ದಾರೆ. ಕರ್ನಾಟಕ ನ್ಯಾಯಾಂಗ ಸೇವೆಗಳ ನಿಯಮಗಳು 2004 ಮತ್ತು ತಿದ್ದುಪಡಿ ನಿಯಮಗಳು 2011, 2015 ಮತ್ತು 2016ರ ಅನ್ವಯ 2023ರ ಮಾರ್ಚ್‌ 9 ರಂದು ಸಿವಲ್‌ ನ್ಯಾಯಾಧೀಶರನ್ನು ನೇರ ನೇಮಕಾತಿಯ ಮೂಲಕ ನೇಮಕ ಮಾಡಿಕೊಳ್ಳುವ ಸಂಬಂಧ ಅಧಿ ಸೂಚನೆ ಹೊರಡಿಸಲಾಗಿದೆ.
03:07 PM Feb 26, 2024 IST | Ashitha S

ಬೆಂಗಳೂರು: 24ನೇ ವಯಸ್ಸಿಗೆ ಕರ್ನಾಟಕದ ಅತ್ಯಂತ ಕಿರಿಯ ಸಿವಿಲ್ ನ್ಯಾಯಾಧೀಶೆಯಾಗಿ ನಮೃತ ಎಸ್‌. ಹೊಸಮಠ ಅವರು ನೇಮಗೊಂಡಿದ್ದಾರೆ.  ಹೌದು. . .ರಾಜ್ಯದ ನೂತನ ಸಿವಿಲ್‌ ನ್ಯಾಯಾಧೀಶರಾಗಿ 33 ಯುವ ವಕೀಲರು ಆಯ್ಕೆಯಾಗಿದ್ದಾರೆ. ಕರ್ನಾಟಕ ನ್ಯಾಯಾಂಗ ಸೇವೆಗಳ ನಿಯಮಗಳು 2004 ಮತ್ತು ತಿದ್ದುಪಡಿ ನಿಯಮಗಳು 2011, 2015 ಮತ್ತು 2016ರ ಅನ್ವಯ 2023ರ ಮಾರ್ಚ್‌ 9 ರಂದು ಸಿವಲ್‌ ನ್ಯಾಯಾಧೀಶರನ್ನು ನೇರ ನೇಮಕಾತಿಯ ಮೂಲಕ ನೇಮಕ ಮಾಡಿಕೊಳ್ಳುವ ಸಂಬಂಧ ಅಧಿ ಸೂಚನೆ ಹೊರಡಿಸಲಾಗಿದೆ.

Advertisement

ಇನ್ನು 2023ರ ನವೆಂಬರ್‌ ನಲ್ಲಿ ನಡೆದಿದ್ದ ಸ್ವರ್ಧಾತ್ಮಕ ಪರೀಕ್ಷೆ ಹಾಗೂ 2024ರ ಜನವರಿಯಲ್ಲಿ ನಡೆದ ಮೌಖಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಆಧರಿಸಿ ಮೆರಿಟ್‌ ಮೇಲೆ 33 ಮಧಿ ಅಭ್ಯರ್ಥಿಗಳನ್ನು ಸಿವಿಲ್‌ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ ಎಂದು ಸಿವಿಲ್‌ ನ್ಯಾಯಾಧೀಶರ ನೇಮಕಾತಿ ಸಮಿತಿಯ ಕಾರ್ಯದರ್ಶಿಯೂ ಆದ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಕೆ. ಎಸ್‌ ಭರತ್‌ ಕುಮಾರ್‌ ಅವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ಇನ್ನು ರಾಜ್ಯದ ಅತ್ಯಂತ ಕಿರಿಯ ನ್ಯಾಯಾಧೀಶೆಯಾಗಿ ಬೆಂಗಳೂರು ಉತ್ತರದ ಸುಬ್ರಹ್ಮಣ್ಯನಗರ ಶ್ರೀರಾಮಪುರಂ ನ 24 ವರ್ಷದ ನಮ್ರತಾ ಎಸ್.‌ ಹೊಸಮಠ್‌ ಗಮನಾರ್ಹ ಸಾಧನೆ ಮಾಡಿದ್ದಾರೆ. ಈ ಮೂಲಕ ನಮ್ರತಾ ಎಸ್.‌ ಹೊಸಮಠ್‌ ರಾಜ್ಯದ ಅತ್ಯಂತ ಕಿರಿಯ ನ್ಯಾಯಾಧೀಶೆ ಎನ್ನಲಾಗಿದೆ.

Advertisement

ನಮ್ರತಾ ಎಸ್.‌ ಹೊಸಮಠ್‌ ಅವರು ತಮ್ಮ ಎಸ್ಎಸ್ಎಲ್ಸಿ ಶಿಕ್ಷಣವನ್ನು ಶ್ರೀ ವಿದ್ಯಾ ಮಂದಿರ ಎಜುಕೇಶನ್ ಸೊಸೈಟಿ, ಮಲ್ಲೇಶ್ವರಂ, ಬೆಂಗಳೂರು ಇಲ್ಲಿ ಪೂರ್ಣ ಗೊಳಿಸಿದ್ದಾರೆ. ಬಳಿಕ, ಪಿಯುಸಿ - ಪಿಸಿಎಂಬಿ ಕೋರ್ಸ್ ಶ್ರೀ ವಿದ್ಯಾ ಮಂದಿರ ಎಜುಕೇಶನ್ ಸೊಸೈಟಿ, ನಂತರ ಬಿ.ಎ.ಎಲ್.ಎಲ್.ಬಿ. ವಿಶ್ವವಿದ್ಯಾಲಯ ಕಾನೂನು ಕಾಲೇಜು, ಬೆಂಗಳೂರು ವಿಶ್ವವಿದ್ಯಾಲಯ (5 ವರ್ಷದ ಕೋರ್ಸ್)(2017-2022) ಪೂರ್ಣಗೊಳಿದರು. ಪ್ರಸ್ತುತ ಗೌರವಾನ್ವಿತ ನ್ಯಾಯಮೂರ್ತಿ ಡಾ.ಎಚ್.ಬಿ.ಪ್ರಭಾಕರ ಶಾಸ್ತ್ರಿ ಅವರ ಅಡಿಯಲ್ಲಿ ಕರ್ನಾಟಕ ಹೈಕೋರ್ಟ್ನಲ್ಲಿ ಕಾನೂನು ಗುಮಾಸ್ತ ಮತ್ತು ಸಂಶೋಧನಾ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

24ನೇ ವಯಸ್ಸಿನಲ್ಲಿ ಪ್ರಥಮ ಪ್ರಯತ್ನದಲ್ಲಿ ಕರ್ನಾಟಕ ಸಿವಿಲ್ ನ್ಯಾಯಾಧೀಶೆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಲ್ಲಿ ನಮೃತ ಅವರ ಯಶಸ್ಸು, ಪರಿಶ್ರಮ ಅವರ ವೃತ್ತಿಯ ಮೇಲಿನ ಉತ್ಸಾಹಕ್ಕೆ ಸಾಕ್ಷಿಯಾಗಿದೆ.

ಇನ್ನು ಕರಾವಳಿಯ ಕುವರ ಅನಿಲ್ ಜಾನ್ ಸಿಕ್ವೇರಾ ಅವರು 25ನೇ ವಯಸ್ಸಿನಲ್ಲಿ ಕರ್ನಾಟಕದ ಕಿರಿಯ ಸಿವಿಲ್ ನ್ಯಾಯಾಧೀಶರಾಗಿ ಕೂಡಾ ನೇಮಕಗೊಂಡಿದ್ದಾರೆ. .ಬಂಟ್ವಾಳ ತಾ| ಬೋರಿಮಾರ್‌ನ ಅನಿಲ್‌ ಜಾನ್‌ ಸಿಕ್ವೇರಾ ಅವರು 2023ರ ಕರ್ನಾಟಕ ಸಿವಿಲ್‌ ನ್ಯಾಯಾಧೀಶರ ಪರೀಕ್ಷೆಯಲ್ಲಿ 25ನೇ ವಯಸ್ಸಿನಲ್ಲಿ ಪ್ರಿಲಿಮ್ಸ್‌, ಮೇನ್ಸ್‌ ಮತ್ತು ಸಂದರ್ಶನದಲ್ಲಿ ತೇರ್ಗಡೆಯಾಗಿರುವುದು ಗಮನಾರ್ಹ. ಈ ಹಿಂದೆ 25ನೇ ವಯಸ್ಸಿನ ಅನಿಲ್ ಜಾನ್ ಸಿಕ್ವೇರಾ ಅವರು  ಕರ್ನಾಟಕದ ಅತ್ಯಂತ ಕಿರಿಯ ಸಿವಿಲ್ ನ್ಯಾಯಾಧೀಶರಾಗಿ ನೇಮಕೊಂಡಿರುವುದಾಗಿ ವರದಿಯಾಗಿತ್ತು.  ಆದರೆ 24 ನೇ ವಯಸ್ಸಿಗೆ ಕರ್ನಾಟಕದ ಅತೀ ಕಿರಿಯ ಸಿವಿಲ್ ನ್ಯಾಯಾಧೀಶೆಯಾಗಿ ನಮೃತ ಎಸ್‌. ಹೊಸಮಠ ಅವರು ಸಾಧನೆಗೈದಿರುವುದು ತಿಳಿದುಬಂದಿದೆ.

Read More:
1.

ಮಂಗಳೂರು: 25 ನೇ ವಯಸ್ಸಿಗೆ ಕರ್ನಾಟಕದ ಸಿವಿಲ್ ನ್ಯಾಯಾಧೀಶರಾದ ಅನಿಲ್ ಜೋನ್ ಸಿಕ್ವೇರಾ

 

Advertisement
Tags :
BreakingNewsCivil JudgeGOVERNMENTindiaKARNATAKALatestNewsNamrita S. HosamathaNewsKannadaನಮೃತ ಎಸ್‌. ಹೊಸಮಠಬೆಂಗಳೂರು
Advertisement
Next Article