For the best experience, open
https://m.newskannada.com
on your mobile browser.
Advertisement

ಕಳ್ಳತನದ ವೇಳೆ ಎಟಿಎಂಗೆ ಬೆಂಕಿ, ₹4.5 ಲಕ್ಷ ರು. ಭಸ್ಮ!

ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬ ಗಾದೆಯಂತೆ ಕಳ್ಳತನದ ವೇಳೆ ಎಟಿಎಂಗೆ ಬೆಂಕಿ  ತಗುಲಿ  ₹4.5 ಲಕ್ಷ ರೂ ಸುಟ್ಟು  ಭಷ್ಮವಾಗಿದೆ.   
12:44 PM Dec 08, 2023 IST | Ramya Bolantoor
ಕಳ್ಳತನದ ವೇಳೆ ಎಟಿಎಂಗೆ ಬೆಂಕಿ  ₹4 5 ಲಕ್ಷ ರು  ಭಸ್ಮ

ನೆಲಮಂಗಲ:  ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬ ಗಾದೆಯಂತೆ ಕಳ್ಳತನದ ವೇಳೆ ಎಟಿಎಂಗೆ ಬೆಂಕಿ  ತಗುಲಿ  ₹4.5 ಲಕ್ಷ ರೂ ಸುಟ್ಟು  ಭಷ್ಮವಾಗಿದೆ.   ಕಳ್ಳರು ಎಟಿಎಂನಲ್ಲಿದ್ದ ಹಣ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅರಿಶಿನಕುಂಟೆ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.

Advertisement

ಗುರುವಾರ ಬೆಳಗಿನ ಜಾವ ಸುಮಾರು 1.50 ರ ವೇಳೆಯಲ್ಲಿ ಅರಿಶಿನಕುಂಟೆ ಗ್ರಾಮದ ಖಾಸಗಿ ಬ್ಯಾಂಕ್ ಎಟಿಎಂಗೆ ನುಗ್ಗಿದ ಇಬ್ಬರು ಕಳ್ಳರು ಗ್ಯಾಸ್ ಕಟರ್ ಬಳಕೆ ಮಾಡಿಕೊಂಡು ಕಳ್ಳತನಕ್ಕೆ ಯತ್ನಿಸಿದ್ದಾರೆ.  ಗ್ಯಾಸ್ ಕಟರ್‌ನಲ್ಲಿ ಎಟಿಎಂ ಯಂತ್ರವನ್ನು ಕತ್ತರಿಸುತ್ತಿದ್ದ ವೇಳೆ ಮುಂಬೈನ ಬ್ಯಾಂಕ್ ಕಚೇರಿಗೆ ಸಂದೇಶ ತಲುಪಿದೆ. ತಕ್ಷಣವೇ ಬ್ಯಾಂಕ್ ಸಿಬ್ಬಂದಿಗಳು ಸ್ಥಳೀಯ ಬ್ಯಾಂಕ್ ಮ್ಯಾನೇಜರ್‌ಗೆ ಕರೆ ಮಾಡಿ ವಿಚಾರ ತಿಳಿಸಿದರು. ತಕ್ಷಣ ಬ್ಯಾಂಕ್ ಮ್ಯಾನೇಜರ್‌ ಕಟ್ಟಡದ ಮಾಲೀಕರಿಗೆ ಕರೆ ಮಾಡಿ ವಿಚಾರ ತಿಳಿಸಿದರು. ಸುಮಾರು 4 ಲಕ್ಷದ 60 ಸಾವಿರ ರೂ. ನಗದು ಸುಟ್ಟು ಹೋಗಿದೆ.

ಕಳ್ಳರ ಓಡಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Advertisement

Advertisement
Tags :
Advertisement