For the best experience, open
https://m.newskannada.com
on your mobile browser.
Advertisement

ಮೊಬೈಲ್ ವಿಚಾರಕ್ಕೆ ಹಲ್ಲೆ: ಆರೋಪಿಗಳು ವಶಕ್ಕೆ

ಮೊಬೈಲ್ ವಿಚಾರಕ್ಕೆ ಸ್ನೇಹಿತರ ನಡುವೆ ಗಲಾಟೆಯಾಗಿ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಬಾಪೂಜಿನಗರದ ಮಧುರ ಬಾರ್ ಬಳಿ ನಡೆದಿದೆ.
06:46 PM May 18, 2024 IST | Chaitra Kulal
ಮೊಬೈಲ್ ವಿಚಾರಕ್ಕೆ ಹಲ್ಲೆ  ಆರೋಪಿಗಳು ವಶಕ್ಕೆ

ಬೆಂಗಳೂರು: ಮೊಬೈಲ್ ವಿಚಾರಕ್ಕೆ ಸ್ನೇಹಿತರ ನಡುವೆ ಗಲಾಟೆಯಾಗಿ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಬಾಪೂಜಿನಗರದ ಮಧುರ ಬಾರ್ ಬಳಿ ನಡೆದಿದೆ.

Advertisement

ಮನೋಜ್, ತರುಣ್, ಕಿರಣ್ ಸೇರಿ ಓರ್ವ ಅಪ್ರಾಪ್ತನನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮನೋಜ್ ಎಂಬಾತ ತಿಂಗಳ ಹಿಂದೆ ವಿಜಯ್ ಮೊಬೈಲ್ ಕಸಿದು ವಾಪಸ್ ಕೊಟ್ಟು ತಮಾಷೆ ಮಾಡಿದ್ದರು.

ಕಳೆದ ವಾರ ಒಂದೇ ಬಾರ್​ನಲ್ಲಿ ಮದ್ಯಪಾನ ಮಾಡಲು ಮನೋಜ್ ಮತ್ತು ವಿಜಯ್ ಸೇರಿದ್ದರು. ಈ ವೇಳೆ ವಿಜಯ್ ಮೊಬೈಲ್ ಕಸಿದುಕೊಂಡಿದ್ದ ವಿಚಾರ ಪ್ರಸ್ತಾಪಿಸಿ ತಮಾಷೆ ಮಾಡಿದ್ದನು.

Advertisement

ಕೋಪಗೊಂಡ ಮನೋಜ್ ಮೂವರನ್ನು ಕರೆದುಕೊಂಡು ಬಂದು ತನಗೆ ಅವಮಾನ ಮಾಡುತ್ತೀಯ ಎಂದು ಮಚ್ಚಿನಿಂದ ವಿಜಯ್​ ಮೇಲೆ ಮನೋಜ್ ಹಲ್ಲೆ ಮಾಡಿದ್ದಾನೆ.

ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿಜಯ್ ಬ್ಯಾಟರಾಯನಪುರ ಪೊಲೀಸರಿಗೆ ದೂರು ನೀಡಿದ್ದಾನೆ. ವಿಜಯ್ ದೂರಿನ ಆಧಾರದ ಮೇಲೆ ಓರ್ವ ಅಪ್ರಾಪ್ತ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

Advertisement
Tags :
Advertisement