For the best experience, open
https://m.newskannada.com
on your mobile browser.
Advertisement

ಮಹಿಳೆಯರ ಡಬಲ್ಸ್ ಪ್ರಶಸ್ತಿ ಗೆದ್ದ ಶುವೆ-ಮೆರ್ಟೆನ್ಸ್

ಆಸ್ಟ್ರೇಲಿಯನ್ ಓಪನ್‌ನ ಮಹಿಳೆಯರ ಡಬಲ್ಸ್ ಕಿರೀಟವನ್ನು ತೈವಾನ್‌ನ ಶಾಯ್ ಶುವೆ ಮತ್ತು ಬೆಲ್ಜಿಯಂನ ಎಲಿಸ್ ಮೆರ್ಟೆನ್ಸ್ ಮುಡಿಗೇರಿಸಿಕೊಂಡಿದ್ದಾರೆ.
04:23 PM Jan 28, 2024 IST | Ashitha S
ಮಹಿಳೆಯರ ಡಬಲ್ಸ್ ಪ್ರಶಸ್ತಿ ಗೆದ್ದ ಶುವೆ ಮೆರ್ಟೆನ್ಸ್

ಆಸ್ಟ್ರೇಲಿಯ: ಆಸ್ಟ್ರೇಲಿಯನ್ ಓಪನ್‌ನ ಮಹಿಳೆಯರ ಡಬಲ್ಸ್ ಕಿರೀಟವನ್ನು ತೈವಾನ್‌ನ ಶಾಯ್ ಶುವೆ ಮತ್ತು ಬೆಲ್ಜಿಯಂನ ಎಲಿಸ್ ಮೆರ್ಟೆನ್ಸ್ ಮುಡಿಗೇರಿಸಿಕೊಂಡಿದ್ದಾರೆ.

Advertisement

ಇಂದು ನಡೆದ ಫೈನಲ್ ಪಂದ್ಯದಲ್ಲಿ ಲಾಟ್ವಿಯನ್-ಉಕ್ರೇನಿಯನ್ ಜೋಡಿ ಜೆಲೆನಾ ಒಸ್ಟಾಪೆಂಕೊ ಮತ್ತು ಲ್ಯುಡ್‌ಮೈಲಾ ಕಿಚೆನೊಕ್ ಅವರನ್ನು 6-1 7-5 ಸೆಟ್​ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದರು. ಈ ಮೂಲಕ 2024 ರ ಮೊದಲ ಟ್ರೋಫಿಯನ್ನು ಶಾಯ್ ಶುವೆ-ಎಲಿಸ್ ಮೆರ್ಟೆನ್ಸ್ ತಮ್ಮದಾಗಿಸಿಕೊಂಡರು.

ಈ ಗೆಲುವಿನೊಂದಿಗೆ ಶಾಯ್ ಶುವೆ ಗ್ರ್ಯಾಂಡ್ ಸ್ಲಾಮ್ ಡಬಲ್ಸ್ ಪ್ರಶಸ್ತಿ ಗೆದ್ದ 2ನೇ ಹಿರಿಯ ಮಹಿಳೆ ಎನಿಸಿಕೊಂಡರು. ತೈವಾನ್ ಟೆನಿಸ್ ತಾರೆ ತಮ್ಮ 38ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದಾರೆ. ಇನ್ನು 2021 ರಲ್ಲಿ ವಿಂಬಲ್ಡನ್‌ನಲ್ಲಿ ಜಯಗಳಿಸಿದ ಲಿಸಾ ರೇಮಂಡ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

Advertisement

Advertisement
Tags :
Advertisement