ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬೈಕ್ ಟ್ಯಾಕ್ಸಿ ವಿರುದ್ಧ ಆಟೋ ಕ್ಯಾಬ್ ಚಾಲಕರ ಆಕ್ರೋಶ: ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ

ಇದೀಗ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ವಿರುದ್ಧ ಆಟೋ ಕ್ಯಾಬ್ ಚಾಲಕರು ಸಿಡಿದೆದ್ದಿದ್ದಾರೆ. ಅಗ್ರಿಗೇಟರ್ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ನೀಡಿದ್ದ ಮನವಿ ಮೇರೆಗೆ ಬ್ಯಾನ್ ಆಗಿರುವ ಬೈಕ್ ಟ್ಯಾಕ್ಸಿಗೆ ಈಗ ಕೇಂದ್ರ  ಒಪ್ಪಿಗೆ ನೀಡಿದೆ.
12:07 PM Feb 24, 2024 IST | Ashika S

ಬೆಂಗಳೂರು: ಇದೀಗ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ವಿರುದ್ಧ ಆಟೋ ಕ್ಯಾಬ್ ಚಾಲಕರು ಸಿಡಿದೆದ್ದಿದ್ದಾರೆ. ಅಗ್ರಿಗೇಟರ್ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ನೀಡಿದ್ದ ಮನವಿ ಮೇರೆಗೆ ಬ್ಯಾನ್ ಆಗಿರುವ ಬೈಕ್ ಟ್ಯಾಕ್ಸಿಗೆ ಈಗ ಕೇಂದ್ರ  ಒಪ್ಪಿಗೆ ನೀಡಿದೆ.

Advertisement

ವೈಟ್ ಬೋರ್ಡ್‍ನಲ್ಲಿ ಬೈಕ್ ಟ್ಯಾಕ್ಸಿ ನಡೆಸಲು ಅನುಮತಿ ನೀಡುವಂತೆ ಕೇಂದ್ರ ಸಾರಿಗೆ ಇಲಾಖೆ ರಾಜ್ಯ ಸಾರಿಗೆ ಇಲಾಖೆಗೆ ಸಲಹೆ ನೀಡಿತ್ತು ಇದು ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ರೊಚ್ಚಿಗೆದ್ದ ಆಟೋ ಕ್ಯಾಬ್ ಚಾಲಕರು ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು.  ಒಂದು ವೇಳೆ ಅನುಮತಿ ನೀಡಿದ್ರೆ ಉಗ್ರವಾದ ಹೋರಾಟ ಮಾಡ್ತೀವಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ರಾಜ್ಯ ಸಾರಿಗೆ ಇಲಾಖೆಯ ನಿಯಮ ಪ್ರಕಾರ, ವೈಟ್ ಬೋರ್ಡ್ ಟು ವೀಲರ್ ಇರೋದು ಸ್ವಂತಕ್ಕೆ ಬಳಕೆಗೆ ಮಾತ್ರ. ರಾಜ್ಯ ಸಾರಿಗೆ ಇಲಾಖೆ ಕರ್ನಾಟಕದಲ್ಲಿ ವೈಟ್ ಬೋರ್ಡ್ ಹಾಕಿ ಬೈಕ್ ಟ್ಯಾಕ್ಸಿ ನಡೆಸುವುದನ್ನು ಬ್ಯಾನ್ ಮಾಡಿದೆ.

Advertisement

ಆದರೆ ಹಿಂದಿನ ಬಿಜೆಪಿ ಸರ್ಕಾರ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳಲ್ಲಿ ಬೈಕ್ ಟ್ಯಾಕ್ಸಿ ನಡೆಸಬಹುದು ಎಂದು ಅನುಮತಿ ನೀಡಿತ್ತು. ಆದರೆ ಇದರಿಂದ ಸಿಟ್ಟಿಗೆದ್ದ ರಾಜ್ಯ ಆಟೋ ಕ್ಯಾಬ್ ಚಾಲಕರು, ಕಳೆದ ವಾರ ಸಿಎಂ ಜೊತೆ ನಡೆದ ಸಭೆಯಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳನ್ನು ಬ್ಯಾನ್ ಮಾಡಬೇಕು ಎಂದು ಮನವಿ ಮಾಡಿದ್ರು. ಇದಕ್ಕೆ ಮಣಿದ ಸರ್ಕಾರ ಬೈಕ್ ಟ್ಯಾಕ್ಸಿ ಬ್ಯಾನ್ ಮಾಡಲು ಸಾರಿಗೆ ಇಲಾಖೆಯಿಂದ ವರದಿಯನ್ನು ತರಿಸಿಕೊಂಡಿದ್ದಾರಂತೆ.

ಈ ಹೊತ್ತಲ್ಲಿ ಕೇಂದ್ರ ಸಾರಿಗೆ ಇಲಾಖೆ ರಾಜ್ಯ ಸಾರಿಗೆ ಇಲಾಖೆಗೆ ಪತ್ರ ಕಳಿಸಿ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಕಾಂಟ್ರಾಕ್ಟ್ ಕ್ಯಾರೆಜ್ ಅಡಿಯಲ್ಲಿ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಬಹುದು ಎಂದಿದೆ. ಇದು ಆಟೋ ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದಕ್ಕೂ ಇದು ಸರ್ಕಾರದ ನಿರ್ಧಾರದ ಮೇಲೆ ನಿಂತಿದೆ ಹಾಗಾಗಿ ಬೈಕ್ ಟ್ಯಾಕ್ಸಿಗೆ ಅನುಮತಿ ಸಿಗೊತ್ತೋ ಇಲ್ಲವೋ ಎಂಬುದು ಕಾದುನೋಡಬೆಕಾಗಿದೆ.

Advertisement
Tags :
LatetsNewsNewsKannadaಅಗ್ರಿಗೇಟರ್ಕಂಪನಿಟ್ಯಾಕ್ಸಿಬೈಕ್
Advertisement
Next Article