For the best experience, open
https://m.newskannada.com
on your mobile browser.
Advertisement

ವಿಶ್ವಾಸಮತಯಾಚನೆಗೂ ಮುನ್ನ ಸ್ಪೀಕರ್‌ ಹುದ್ದೆ ಕಳೆದುಕೊಂಡ ಅವಧ್ ಬಿಹಾರಿ

ಬಿಹಾರದಲ್ಲಿ ಇಂದು ನಿತೀಶ್​ ಕುಮಾರ್ ನೇತೃತ್ವದ ಜೆಡಿಯು-ಬಿಜೆಪಿ ಮೈತ್ರಿ ಸರ್ಕಾರದ ವಿಶ್ವಾಸಮತ ಯಾಚನೆ ಆರಂಭವಾಗಿದೆ. ಅದಕ್ಕೂ ಮುನ್ನ ರಾಷ್ಟ್ರೀಯ ಜನತಾ ದಳದ ಸ್ಪೀಕರ್ ಅವಧ್ ಬಿಹಾರಿ ಚೌಧರಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಯಿತು.
02:43 PM Feb 12, 2024 IST | Ashitha S
ವಿಶ್ವಾಸಮತಯಾಚನೆಗೂ ಮುನ್ನ ಸ್ಪೀಕರ್‌ ಹುದ್ದೆ ಕಳೆದುಕೊಂಡ ಅವಧ್ ಬಿಹಾರಿ

ಬಿಹಾರ: ಬಿಹಾರದಲ್ಲಿ ಇಂದು ನಿತೀಶ್​ ಕುಮಾರ್ ನೇತೃತ್ವದ ಜೆಡಿಯು-ಬಿಜೆಪಿ ಮೈತ್ರಿ ಸರ್ಕಾರದ ವಿಶ್ವಾಸಮತ ಯಾಚನೆ ಆರಂಭವಾಗಿದೆ. ಅದಕ್ಕೂ ಮುನ್ನ ರಾಷ್ಟ್ರೀಯ ಜನತಾ ದಳದ ಸ್ಪೀಕರ್ ಅವಧ್ ಬಿಹಾರಿ ಚೌಧರಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಯಿತು.

Advertisement

ಬಿಹಾರ ವಿಧಾನಸಭಾ ಸ್ಪೀಕರ್ ಅವಧ್ ಬಿಹಾರಿ ಚೌಧರಿ ಅವರನ್ನು ಪದಚ್ಯುತಗೊಳಿಸಲಾಗಿದೆ. ಅವಧ್ ಬಿಹಾರಿ ಚೌಧರಿ ಅವರನ್ನು ಪದಚ್ಯುತಗೊಳಿಸಿರುವುದು ಮಹಾಮೈತ್ರಿಕೂಟಕ್ಕೆ ಹೊಡೆತವಾಗಿದೆ. ಎನ್‌ಡಿಎ ಸರ್ಕಾರ ರಚನೆಯಾದ ನಂತರ, ಜನವರಿ 28 ರಂದು, ಪ್ರಸ್ತುತ ಸ್ಪೀಕರ್ ಅವಧ್ ಬಿಹಾರಿ ಚೌಧರಿ ಅವರನ್ನು ಪದಚ್ಯುತಗೊಳಿಸುವ ಅವಿಶ್ವಾಸ ನಿರ್ಣಯಕ್ಕಾಗಿ 128 ಶಾಸಕರ ಸಹಿಗಳನ್ನು ವಿಧಾನಸಭೆ ಕಾರ್ಯದರ್ಶಿಗೆ ಸಲ್ಲಿಸಲಾಗಿತ್ತು.

ಇನ್ನುಆದಾಗ್ಯೂ ಚೌಧರಿ ಅವರು ತಮ್ಮ ಸ್ಥಾನದಿಂದ ಕೆಳಗಿಳಿಯಲು ನಿರಾಕರಿಸಿದ್ದರು. ಹೀಗಾಗಿ ಹೊಸ ಸರ್ಕಾರವು ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿತ್ತು.

Advertisement

ಬಿಜೆಪಿ ಶಾಸಕ ನಂದಕಿಶೋರ್ ಯಾದವ್ ಮಂಡಿಸಿದ ಅವಿಶ್ವಾಸ ನಿರ್ಣಯದ ಪರ 125 ಶಾಸಕರು ಮತ್ತು ವಿರುದ್ಧ 112 ಮಂದಿ ಮತ ಚಲಾಯಿಸಿದರು.

Advertisement
Tags :
Advertisement