ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅಯೋಧ್ಯೆಯಲ್ಲಿ ಲ್ಯಾಂಡ್ ಆದ ವಿಮಾನದಲ್ಲಿ 'ರಾಮ, ಸೀತೆ, ಲಕ್ಷ್ಮಣ'

ಗುಜರಾತ್ ನ ಅಹಮದಾಬಾದ್ನಿಂದ ಗುರುವಾರ ಅಯೋಧ್ಯೆಗೆ ಆಗಮಿಸಿದ ಮೊದಲ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕರು ಶ್ರೀರಾಮ, ಲಕ್ಷ್ಮಣ, ಸೀತೆ ಮತ್ತು ಹನುಮಾನ್ ವೇಷ ಧರಿಸಿದ್ದರು.
04:55 PM Jan 11, 2024 IST | Ashitha S

ಅಯೋಧ್ಯೆ: ಗುಜರಾತ್ ನ ಅಹಮದಾಬಾದ್ನಿಂದ ಗುರುವಾರ ಅಯೋಧ್ಯೆಗೆ ಆಗಮಿಸಿದ ಮೊದಲ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕರು ಶ್ರೀರಾಮ, ಲಕ್ಷ್ಮಣ, ಸೀತೆ ಮತ್ತು ಹನುಮಾನ್ ವೇಷ ಧರಿಸಿದ್ದರು.

Advertisement

ಇಂದು ಬೆಳಗ್ಗೆ 9 ಗಂಟೆಗೆ ಅಹಮದಾಬಾದ್ನ ಸರ್ದಾರ್ ವಲ್ಲಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದ್ದಇಂಡಿಗೋ ವಿಮಾನದಲ್ಲಿ ಹಲವಾರು ಭಕ್ತರು ಭಗವಾನ್ ರಾಮ, ಲಕ್ಷ್ಮಣ ಮತ್ತು ಸೀತೆಯ ವೇಷಭೂಷಣ ಧರಿಸಿದ್ದರು.

ವೈರಲ್‌ ಆಗಿರುವ ವಿಡಿಯೋದಲ್ಲಿ, ಹಲವಾರು ಉತ್ಸಾಹಿ ಭಕ್ತರು ಭಗವಾನ್ ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಾನ್ ವೇಷ ಧರಿಸಿರುವುದನ್ನು ಕಾಣಬಹುದು. ಹಲವು ಭಕ್ತರು "ಜೈ ಶ್ರೀ ರಾಮ್" ಎಂದು ಘೋಷಣೆಗಳನ್ನು ಕೂಗುತ್ತಾ ಅಯೋಧ್ಯೆ ವಿಮಾನ ಏರಿದರು. ವಿಮಾನವು ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಬಂದಿಳಿಯಿತು.

Advertisement

Advertisement
Tags :
GOVERNMENTindiaLatestNewsNewsKannadaಅಯೋಧ್ಯೆನವದೆಹಲಿರಾಮಲಕ್ಷ್ಮಣಸೀತೆ
Advertisement
Next Article