ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಉಡುಪಿಯಲ್ಲಿ ಕೆಂಡ ಹಾಯುವಾಗ ಬೆಂಕಿಗೆ ಬಿದ್ದ ಅಯ್ಯಪ್ಪ ಮಾಲಾಧಾರಿ

ಅಯ್ಯಪ್ಪ ಮಂದಿರದ ವಾರ್ಷಿಕೋತ್ಸವದ ಕೆಂಡ ಸೇವೆ ವೇಳೆ ಅಯ್ಯಪ್ಪ ಮಾಲಾಧಾರಿಯೊಬ್ಬ ಬೆಂಕಿಗೆ ಬಿದ್ದ ಘಟನೆ ಉಡುಪಿ ಮಲ್ಪೆಯಲ್ಲಿ ನಡೆದಿದೆ.
12:38 PM Jan 03, 2024 IST | Gayathri SG

ಉಡುಪಿ: ಅಯ್ಯಪ್ಪ ಮಂದಿರದ ವಾರ್ಷಿಕೋತ್ಸವದ ಕೆಂಡ ಸೇವೆ ವೇಳೆ ಅಯ್ಯಪ್ಪ ಮಾಲಾಧಾರಿಯೊಬ್ಬ ಬೆಂಕಿಗೆ ಬಿದ್ದ ಘಟನೆ ಉಡುಪಿ ಮಲ್ಪೆಯಲ್ಲಿ ನಡೆದಿದೆ.

Advertisement

ಅಯ್ಯಪ್ಪ ಮಂದಿರದ ವಾರ್ಷಿಕೋತ್ಸವದ ಕೆಂಡ ಸೇವೆಯು ಪ್ರತಿ ವರ್ಷದಂತೆ ಈ ಬಾರಿಯೂ ಅದ್ಧೂರಿಯಾಗಿ ನಡೆಯುತ್ತಿತ್ತು. ಸಾಂಪ್ರದಾಯಿಕವಾಗಿ ಮಾಲಾಧಾರಿಗಳು ಕೆಂಡದ ಮೇಲೆ ಹೋಗಲು ಪ್ರಾರಂಭ ಮಾಡಿದ್ದರು. ಮೊದಲು ಒಬ್ಬ ಮಾಲಾಧಾರಿ ಚೆನ್ನಾಗಿಯೇ ಕೆಂಡ ಹಾಯ್ದಿದ್ದಾರೆ. ಬಳಿಕ ಮತ್ತೊಬ್ಬ ಮಾಲಾಧಾರಿ ಕೆಂಡದ ಮೇಲೆ ಓಡಿ ಹೋಗಲು ಬಂದಿದ್ದಾರೆ.

ಮಾಲಾಧಾರಿ ಓಡಿ ಬರುತ್ತಿದ್ದಂತೆ ನೆಲಕ್ಕೆ ಎಡವಿ ನೇರವಾಗಿ ಬಂದು ಕೆಂಡದ ಮೇಲೆ ಬಿದ್ದಿದ್ದಾರೆ. ಮಾಲಾಧಾರಿ ಆಯತಪ್ಪಿ ಕೆಂಡದ ಮೇಲೆ ಬೀಳುತ್ತಿದ್ದಂತೆ ಉಳಿದ ಮಾಲಾಧಾರಿಗಳೆಲ್ಲ ಓಡಿ ಬಂದು ಅವರನ್ನು ಮೇಲೆತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ದೃಶ್ಯವನ್ನು ಕೆಂಡಲು ಹಾಯುವುದನ್ನು ನೋಡಲು ಬಂದಿದ್ದ ವ್ಯಕ್ತಿಯೊಬ್ಬರು ಸೆರೆ ಹಿಡಿದಿದ್ದಾರೆ.

Advertisement

Advertisement
Tags :
BreakingNewsLatestNewsNewsKannadaUDUPIಅಯ್ಯಪ್ಪ ಮಾಲಾಧಾರಿ
Advertisement
Next Article