ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಇಬ್ಬರು ಮಕ್ಕಳಿಗೆ ಕೋಟಿ ಷೇರುಗಳ ದಾನ ಮಾಡಿದ ಅಜೀಮ್ ಪ್ರೇಮ್​ಜಿ

ವಿಪ್ರೋ ಸಂಸ್ಥೆಯ ಮಾಜಿ ಛೇರ್ಮನ್ ಅಜೀಮ್ ಎಚ್ ಪ್ರೇಮ್​ಜಿ ಭಾರತದ ಅತಿದೊಡ್ಡ ದಾನವಂತರಲ್ಲಿ ಒಬ್ಬರು. ತಮ್ಮ ಸಂಪಾದನೆಯ ಬಹುಭಾಗವನ್ನು ಅವರು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುತ್ತಾರೆ. ಇದೀಗ ಅವರು ತಮ್ಮ ಇಬ್ಬರು ಮಕ್ಕಳಿಗೆ 483 ಕೋಟಿ ರೂ ಮೌಲ್ಯದ ಷೇರುಗಳನ್ನು ದಾನವಾಗಿ ವರ್ಗಾಯಿಸಿದ್ದಾರೆ.
04:08 PM Jan 25, 2024 IST | Ashitha S

ನವದೆಹಲಿ: ವಿಪ್ರೋ ಸಂಸ್ಥೆಯ ಮಾಜಿ ಛೇರ್ಮನ್ ಅಜೀಮ್ ಎಚ್ ಪ್ರೇಮ್​ಜಿ ಭಾರತದ ಅತಿದೊಡ್ಡ ದಾನವಂತರಲ್ಲಿ ಒಬ್ಬರು. ತಮ್ಮ ಸಂಪಾದನೆಯ ಬಹುಭಾಗವನ್ನು ಅವರು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುತ್ತಾರೆ. ಇದೀಗ ಅವರು ತಮ್ಮ ಇಬ್ಬರು ಮಕ್ಕಳಿಗೆ 483 ಕೋಟಿ ರೂ ಮೌಲ್ಯದ ಷೇರುಗಳನ್ನು ದಾನವಾಗಿ ವರ್ಗಾಯಿಸಿದ್ದಾರೆ.

Advertisement

ಎನ್​ಎಸ್​ಇ ಸಲ್ಲಿಸಿದ ಫೈಲಿಂಗ್​ನಲ್ಲಿ ವಿಪ್ರೋ ಈ ಮಾಹಿತಿ ನೀಡಿದೆ. ಅದರ ಪ್ರಕಾರ ಅಜೀಮ್ ಪ್ರೇಮ್​ಜಿ ತಮಗೆ ಸೇರಿದ ಷೇರುಪಾಲಿನ ಪೈಕಿ 1,02,30,180 (ಸುಮಾರು 1 ಕೋಟಿ) ಷೇರುಗಳನ್ನು ತಮ್ಮಿಬ್ಬರು ಮಕ್ಕಳಾದ ರಿಷದ್ ಪ್ರೇಮ್​ಜಿ ಮತ್ತು ತಾರಿಖ್ ಪ್ರೇಮ್​ಜಿ ಅವರಿಗೆ ದಾನವಾಗಿ ನೀಡಿದ್ದಾರೆ.

ಅಜೀಮ್ ಪ್ರೇಮ್​ಜಿ ತಮ್ಮ ಇಬ್ಬರೂ ಮಕ್ಕಳಿಗೆ ಸಮಾನವಾಗಿ, ಅಂದರೆ ತಲಾ 51,15,090 ಈಕ್ವಿಟಿ ಷೇರುಗಳನ್ನು ನೀಡಿದ್ದಾರೆ. ಸದ್ಯ ಒಂದು ಷೇರಿನ ಮೌಲ್ಯ 468 ರೂನಿಂದ 479 ರೂವರೆಗೆ ಇದೆ. ಒಟ್ಟು ಮೌಲ್ಯ 480 ಕೋಟಿ ರೂ ಆಸುಪಾಸು ಇದೆ.

Advertisement

ಇನ್ನು ಅಜೀಮ್ ಪ್ರೇಮ್​ಜಿ ಅವರ ಹಿರಿಯ ಮಗ ರಿಷದ್ ಪ್ರೇಮ್​ಜಿ ಇತ್ತೀಚೆಗಷ್ಟೇ ವಿಪ್ರೋ ಛೇರ್ಮನ್ ಆಗಿ ನೇಮಕವಾಗಿದ್ದಾರೆ. ಕಿರಿಯ ಮಗ ತಾರಿಕ್ ಪ್ರೇಮ್​ಜಿ ಅವರು ವಿಪ್ರೋದ ದಾನದತ್ತಿ ವಿಭಾಗದ ಮುಖ್ಯಸ್ಥರಾಗಿದ್ದಾರೆ.

ಇನ್ನು ಅಜೀಮ್ ಪ್ರೇಮ್​ಜಿ ಅವರು ಫಿಲಾಂತ್ರೋಫಿಗೆ ಅಥವಾ ದಾನ ದತ್ತಿಗಳಿಗೆ ಹೆಚ್ಚು ಹಣ ನೀಡುತ್ತಾರೆ. ಉದಾರ ದಾನಗಳಿಗೆ ಹೆಸರುವಾಸಿ. ಭಾರತದಲ್ಲಿ ಅತಿದೊಡ್ಡ ಫಿಲಾಂತ್ರೋಫಿಸ್ಟ್​ಗಳಲ್ಲಿ ಅವರೂ ಒಬ್ಬರು. ಇವರ ದಾನ ಧರ್ಮ ಕಾರ್ಯಗಳ ಹಿಂದಿನ ರೂವಾರಿ ಅವರ ಎರಡನೇ ಮಗ ತಾರೀಖ್ ಪ್ರೇಮ್​ಜಿ ಅವರೆಯೇ. ಅಜೀಮ್ ಪ್ರೇಮ್​ಜಿ ಫೌಂಡೇಶನ್​ನಲ್ಲಿದ್ದಾರೆ ಇವರು.

 

 

Advertisement
Tags :
indiaLatestNewsಅಜೀಮ್ ಪ್ರೇಮ್​ಜಿನವದೆಹಲಿವಿಪ್ರೋ ಸಂಸ್ಥೆಷೇರು
Advertisement
Next Article