For the best experience, open
https://m.newskannada.com
on your mobile browser.
Advertisement

ನಿವೃತ್ತಿ ಘೋಷಿಸಿದ ಬ್ಯಾಡ್ಮಿಂಟನ್ ತಾರೆ ಸಾಯಿ ಪ್ರಣೀತ್

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆ ಬಿ ಸಾಯಿ ಪ್ರಣೀತ್ ನಿವೃತ್ತಿ ಘೋಷಿಸಿದ್ದಾರೆ. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟಿದ್ದ ಸಾಯಿ ಇದೀಗ ದಿಢೀರ್ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.
10:25 AM Mar 05, 2024 IST | Ashitha S
ನಿವೃತ್ತಿ ಘೋಷಿಸಿದ ಬ್ಯಾಡ್ಮಿಂಟನ್ ತಾರೆ ಸಾಯಿ ಪ್ರಣೀತ್

ದೆಹಲಿ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆ ಬಿ ಸಾಯಿ ಪ್ರಣೀತ್ ನಿವೃತ್ತಿ ಘೋಷಿಸಿದ್ದಾರೆ. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟಿದ್ದ ಸಾಯಿ ಇದೀಗ ದಿಢೀರ್ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.

Advertisement

ಏಕೆಂದರೆ ಈ ವರ್ಷ ಪ್ಯಾರಿಸ್ ಒಲಿಂಪಿಕ್ಸ್ ನಡೆಯಲಿದ್ದು, ಇದಕ್ಕೂ ಮುನ್ನ 31 ವರ್ಷದ ಅನುಭವಿ ಆಟಗಾರ ಬ್ಯಾಡ್ಮಿಂಟನ್ ಕೋರ್ಟ್​​ಗೆ ವಿದಾಯ ಹೇಳಿರುವುದು ಭಾರತದ ಪಾಲಿಗೆ ಹಿನ್ನಡೆಯಾಗಿದೆ.

ಪ್ರಣೀತ್ 2019ರಲ್ಲಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಈ ಟೂರ್ನಿಯಲ್ಲಿ ಪದಕ ಗೆದ್ದ ದೇಶದ ಕೆಲವೇ ಆಟಗಾರರಲ್ಲಿ ಇವರು ಒಬ್ಬರು. ಆದರೆ, ಪ್ರಣೀತ್ ಚಿಕ್ಕ ವಯಸ್ಸಿನಲ್ಲೇ ವೃತ್ತಿ ಜೀವನಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಗಾಯದ ಸಮಸ್ಯೆ ಎಂದು ತಿಳಿಸಿದ್ದಾರೆ.

Advertisement

ಟೋಕಿಯೊ ಒಲಿಂಪಿಕ್ಸ್-2020 ರಲ್ಲಿ ಕಾಣಿಸಿಕೊಂಡಿದ್ದ ಪ್ರಣೀತ್ ಆ ಬಳಿಕ ಗಾಯದ ಸಮಸ್ಯೆಗೆ ಒಳಗಾಗಿದ್ದರು. ಇದೀಗ ಈ ಸಮಸ್ಯೆಯು ಬಿಗಡಾಯಿಸಿರುವ ಕಾರಣ ವೃತ್ತಿಜೀವನಕ್ಕೆ ವಿದಾಯ ಹೇಳುತ್ತಿರುವುದಾಗಿ ತಿಳಿಸಿದ್ದಾರೆ.

Advertisement
Tags :
Advertisement