For the best experience, open
https://m.newskannada.com
on your mobile browser.
Advertisement

ರಾಜ್ಯಾಧ್ಯಕ್ಷನಾದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ ಬಿ ವೈ ವಿಜಯೇಂದ್ರ

ರಾಜ್ಯಾಧ್ಯಕ್ಷನಾದ ಬಳಿಕ ಇಂದು ಮೊದಲ ಬಾರಿಗೆ ಮಂಗಳೂರಿಗೆ ಬಿ ವೈ ವಿಜಯೇಂದ್ರ ಆಗಮಿಸಿದ್ದು, ಭವ್ಯ ಸ್ವಾಗತದ ಮೂಲಕ ಅವರನ್ನು ಬರಮಾಡಿಕೊಳ್ಳಲಾಯಿತು.
02:12 PM Nov 22, 2023 IST | Gayathri SG
ರಾಜ್ಯಾಧ್ಯಕ್ಷನಾದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ ಬಿ ವೈ ವಿಜಯೇಂದ್ರ

ಮಂಗಳೂರು: ರಾಜ್ಯಾಧ್ಯಕ್ಷನಾದ ಬಳಿಕ ಇಂದು ಮೊದಲ ಬಾರಿಗೆ ಮಂಗಳೂರಿಗೆ ಬಿ ವೈ ವಿಜಯೇಂದ್ರ ಆಗಮಿಸಿದ್ದು, ಭವ್ಯ ಸ್ವಾಗತದ ಮೂಲಕ ಅವರನ್ನು ಬರಮಾಡಿಕೊಳ್ಳಲಾಯಿತು.

Advertisement

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಕಚೇರಿಯ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷರ ನೇಮಕ ಆಗಿಲ್ಲ ಅನ್ನೋ ಚರ್ಚೆ ಇತ್ತು. ಜೊತೆಗೆ ಸಾಕಷ್ಟು ಪೈಪೋಟಿ ಇದೆ ಭಿನ್ನಮತ ಇದೆ ಅನ್ನೋ ಚರ್ಚೆ ನಡಿಯುತ್ತಾ ಇತ್ತು. ಮಾತ್ರವಲ್ಲದೆ ಆಡಳಿತ ಪಕ್ಷದ ಕಾಂಗ್ರೆಸ್ ಮುಖಂಡರು ನಮ್ಮನ್ನ ಟೀಕೆ ಮಾಡ್ತಾಯಿದ್ದರು ಎಂದು ಹೇಳಿದರು.

ರಾಷ್ಟ್ರೀಯ ನಾಯಕರ ತೀರ್ಮಾನದ ಮೇರೆಗೆ ದೊಡ್ಡ ಜವಾಬ್ದಾರಿಯನ್ನ ನನಗೆ ನೀಡಿದ್ದಾರೆ. ನಮ್ಮ ಕರಾವಳಿ ಭಾಗದ ಎಲ್ಲಾ ಕಾರ್ಯಕರ್ತರಿಗೆ ನಾನು ಹೇಳೋದು ಏನು ಅಂದ್ರೆ, ರಾಜ್ಯಾಧ್ಯಕ್ಷ ಜವಾಬ್ದಾರಿಯುತ ಸ್ಥಾನ.
ನನ್ನ ಕರ್ತವ್ಯಯಿದೆ ಹಿಂದಿನ ಯಶಸ್ವಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಂತೆ ನನ್ನ ಜವಾಬ್ದಾರಿ ಕರ್ತವ್ಯ ನಿರ್ವಹಿಸುತ್ತೇನೆ ಎಂದರು.

Advertisement

ಜಿ 20 ಎಷ್ಟು ಅದ್ಭುತವಾಗಿ ನಡೆಯಿತು ನೀವು ನೋಡ್ತಾ ಇದ್ದಿರಿ. ಒಂದು ದಿನವೂ ನರೇಂದ್ರ ಮೋದಿಯವರು ರಜೆ ತೆಗೆದುಕೊಳ್ಳದೆ ದೇಶಕ್ಕೋಸ್ಕರ ಕೆಲಸ ಮಾಡುತ್ತಿದ್ದಾರೆ ಎಂದರು.

ಹಿಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ಟೀಕೆಯಿಂದ, ಭರವಸೆಗಳಿಂದ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದಿದೆ. ಇಡೀ ದೇಶದಲ್ಲಿ ತನ್ನ ಜನಪ್ರಿಯತೆ ಕಳೆದುಕೊಂಡ ಸರಕಾರ ಅದು ಕಾಂಗ್ರೆಸ್ ಸರಕಾರ. ರೈತ ವಿರೋಧಿ ಸರಕಾರ, ಬಡವರ ವಿರೋಧಿ ಸರಕಾರ, ದಲಿತ ವಿರೋಧಿ ಸರಕಾರ. ಕಾಂಗ್ರೆಸ್ ಗೆ ಮತ ಕೊಟ್ಟ ಜನರು ಪಶ್ಚತ್ತಾಪ ಪಡುತ್ತಿದ್ದಾರೆ. ಬರದ ಪರಿಸ್ಥಿತಿಯಿದೆ, ಸರಕಾರ ಯಾವ ರೀತಿ ನಡೆದುಕೊಳ್ಳಬೇಕು. ಕಾಂಗ್ರೆಸ್ ಸರಕಾರ ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರು.

ನಿನ್ನೆ ದಿನ ಕಾಂಗ್ರೆಸ್ ಪ್ರಮುಖರ ಸಭೆ ನಡೆಯಿತು. ರೈತರ ಪರವಾಗಿ ನಿರ್ಣಯ ತೆಗೆದುಕೊಳ್ತಾರೆ ಅನ್ನೋ ಭರವಸೆ ಇತ್ತು. ಆದರೆ ನಿನ್ನೆ ಅವರು ಲೋಕ ಸಭಾ ಚುನಾವಣೆ ಗೆಲ್ಲೊದಕ್ಕೆ ತಯಾರಿ ಮಾಡಿದ್ರು. ಇಂತಹ ಕಷ್ಟಕಾರ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಆದ್ಯತೆ ಏನು ಅಂದ್ರೆ ಬೋರ್ಡ್ ಅಧ್ಯಕ್ಷರನ್ನ ನೇಮಕ ಮಾಡುವಂತದ್ದು ಎಂದು ಅಸಮಧಾನ ಹೊರಹಾಕಿದರು.

ವಿದ್ಯುತ್ ವಿಚಾರವಾಗಿ ಮಾತನಾಡಿದ ಬಿ. ವೈ ವಿಜಯೇಂದ್ರ, ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ 7 ತಾಸು ರೈತರಿಗೆ ವಿದ್ಯುತ್ ನೀಡುವಲ್ಲಿ ನಮ್ಮ ಸರಕಾರ ಯಶಸ್ವಿಯಾಗಿತ್ತು. ಆದರೆ ಈಗಿನ ಸರಕಾರದಿಂದ ರೈತರು ಪರದಾಡುತ್ತಿದ್ದಾರೆ.ಹಿಂಗಾರು ಮುಂಗಾರು ಎಲ್ಲವೂ ವಿಫಲವಾಗಿದೆ. ರಾಜ್ಯ ಸರಕಾರದ ವಿದ್ಯುತ್ ಕಣ್ಣಾಮುಚ್ಚಳೆಯಿಂದ ರೈತರು ಪರದಾಡುತ್ತಿದ್ದಾರೆ. ಸರಕಾರ ಮೂಜು ಮಸ್ತಿಯಲ್ಲಿ ತೊಡಗಿದೆ. ಹೊಸ ಕಾರು ಖರೀದಿ ಬರಗಾಲದಲ್ಲಿ ಇವರಿಗೆ ಆದ್ಯತೆಯಾಗಿದೆ. ತಮ್ಮ ಜವಾಬ್ದಾರಿ ಮರೆತಿರುವ ರಾಜ್ಯ ಸರಕಾರಕ್ಕೆ, ಎಚ್ಚರಿಕೆ ಕೊಡುವ ಕೆಲಸ ಮುಂದಿನ ವಿಧಾನ ಸಭಾ ಅಧಿವೇಶನದಲ್ಲಿ ನೀಡುತ್ತೇವೆ ಎಂದರು.

ಈ ವೇಳೆ ಜಮೀರ್ ಅಹ್ಮದ್ ಖಾನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜಮೀರ್ ಅವರನ್ನ ರಸ್ತೆಯಲ್ಲಿ ನಾವು ಓಡಾಡೋಕೆ ಬಿಟ್ಟಿದ್ದೆ ಹೆಚ್ಚು. ಸಂವಿಧಾನ ಬದ್ಧ ಪೀಠಕ್ಕೆ ಜಾತಿ ಧರ್ಮದ ಬಣ್ಣವನ್ನ ಹಚ್ಚಿದ್ದಾರೆ. ಮುಂದಿನ ಅಧಿವೇಶನದಲ್ಲಿ ಜಮೀರ್ ಹೇಗೆ ಪಾಲ್ಗೊಳ್ಳುತ್ತಾರೆ ಎಂದು ನಾವು ನೋಡಿಕೊಳ್ಳುತ್ತೇವೆ. ಇದು ದಲಿತ ವಿರೋಧಿ ಸರಕಾರ ಅನ್ನೋದನ್ನ ನೀವು ಸಾಬೀತುಪಡಿಸಿದ್ದೀರಿ ಎಂದು ಜಮೀರ್ ಅಹ್ಮದ್ ಖಾನ್ ಅವರಿಗೆ ತಿರುಗೇಟು ನೀಡಿದರು.

ಸುದ್ದಿಗೋಷ್ಟಿ ಮುಗಿಸಿ ಚುನಾವಣಾ ಕಾರ್ಯಾಲಯದಿಂದ ತೆರದ ವಾಹನದಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಸಿ.ವಿ.ನಾಯಕ್ ಹಾಲ್ ನತ್ತ ವಿಜಯೇಂದ್ರ ಅವರಿಗೆ ಸಾವಿರಾರು ಕಾರ್ಯಕರ್ತರಿಂದ ರಸ್ತೆಯುದ್ದಕ್ಕೂ ಪುಷ್ಪ ವೃಷ್ಟಿ, ಬೊಂಬೆಯಾಟ, ಚೆಂಡೆ, ನಾಸೀಕ್ ಬ್ಯಾಂಡ್ ಮೂಲಕ ಮೆರವಣಿಗೆಯಲ್ಲಿ ತೆರಳುತ್ತಿದ್ದ ವೇಳೆ ಸಿ.ವಿ.ನಾಯಕ್ ಹಾಲ್ ಬಳಿ ಕ್ರೇನ್ ಮೂಲಕ 250 ಕೆ.ಜಿ ತೂಕದ ಸೇಬಿನ ಹಾರ ಹಾಕಿ ಅದ್ದೂರಿ ಸ್ವಾಗತ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಜಿಲ್ಲೆಯ ಬಿಜೆಪಿ ಶಾಸಕರು ಹಾಗೂ ಸಾವಿರಾರು ಬಿಜೆಪಿ ಕಾರ್ಯಕರ್ತರು, ಪ್ರಮುಖರು ಉಪಸ್ಥಿತರಿದ್ದರು.

Advertisement
Tags :
Advertisement