ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಹೊಸ ಕಥೆ ಮೂಲಕ ಮತ್ತೆ ಒಟಿಟಿಗೆ ಬರಲಿದೆ ಆ್ಯನಿಮೇಟೆಡ್ ಬಾಹುಬಲಿ - ಕ್ರೌನ್​ ಆಫ್​ ಬ್ಲಡ್​

ಬಾಕ್ಸ್​ ಆಫೀಸ್​ನಲ್ಲಿ ಇತಿಹಾಸ ಸೃಷ್ಟಿಸಿದ್ದ ‘ಬಾಹುಬಲಿ 1’ ಮತ್ತು ‘ಬಾಹುಬಲಿ 2’ ಸಿನಿಮಾಗಳ ಆ್ಯನಿಮೇಟೆಡ್​ ಸೀರಿಸ್​ ಬರುತ್ತಿದೆ. ಇದಕ್ಕೆ ‘ಬಾಹುಬಲಿ: ಕ್ರೌನ್​ ಆಫ್​ ಬ್ಲಡ್​’ ಎಂದು ಶೀರ್ಷಿಕೆ ಇಡಲಾಗಿದೆ.
08:02 PM May 03, 2024 IST | Ashika S

ಬೆಂಗಳೂರು: ಬಾಕ್ಸ್​ ಆಫೀಸ್​ನಲ್ಲಿ ಇತಿಹಾಸ ಸೃಷ್ಟಿಸಿದ್ದ ‘ಬಾಹುಬಲಿ 1’ ಮತ್ತು ‘ಬಾಹುಬಲಿ 2’ ಸಿನಿಮಾಗಳ ಆ್ಯನಿಮೇಟೆಡ್​ ಸೀರಿಸ್​ ಬರುತ್ತಿದೆ. ಇದಕ್ಕೆ ‘ಬಾಹುಬಲಿ: ಕ್ರೌನ್​ ಆಫ್​ ಬ್ಲಡ್​’ ಎಂದು ಶೀರ್ಷಿಕೆ ಇಡಲಾಗಿದೆ.

Advertisement

ಇದರ ಟ್ರೇಲರ್​ ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರಿಗೆ ಝಲಕ್​ ತೋರಿಸಲಾಗಿದ್ದು,  ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​ ಮೂಲಕ ‘ಬಾಹುಬಲಿ: ಕ್ರೌನ್​ ಆಫ್​ ಬ್ಲಡ್​’ ಪ್ರಸಾರ ಆಗಲಿದೆ.

ಆ್ಯನಿಮೇಟೆಡ್​ ಸೀರಿಸ್​ಗಳು ಮಕ್ಕಳಿಗೆ ಮಾತ್ರವಲ್ಲ. ಎಲ್ಲ ವರ್ಗದ ಪ್ರೇಕ್ಷಕರಿಗೂ ಆಸಕ್ತಿ ಮೂಡಿಸುವಂತೆ ‘ಬಾಹುಬಲಿ: ಕ್ರೌನ್​ ಆಫ್​ ಬ್ಲಡ್​’ ಮೂಡಿಬಂದಿದೆ ಎಂಬುದಕ್ಕೆ ಟ್ರೇಲರ್​ ಸಾಕ್ಷಿ ಒದಗಿಸುತ್ತಿದೆ.

Advertisement

‘ಗ್ರಾಫಿಕ್ ಇಂಡಿಯಾ’ ಮತ್ತು ‘ಆರ್ಕ ಮೀಡಿಯಾ ವರ್ಕ್ಸ್’ ಸಂಸ್ಥೆಗಳ ಮೂಲಕ ರಾಜಮೌಳಿ, ಶೋಭು ಯರ್ಲಗಡ್ಡ, ದೇವರಾಜನ್ ಅವರು ಇದನ್ನು ನಿರ್ಮಾಣ ಮಾಡಿದ್ದಾರೆ. ಜೀವನ್ ಜೆ. ಕಾಂಗ್ ಹಾಗೂ ನವೀನ್ ಜಾನ್ ಅವರ ನಿರ್ದೇಶನ ಈ ಸೀರಿಸ್​ಗೆ ಇದೆ.

ಕನ್ನಡ, ತೆಲುಗು, ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ‘ಬಾಹುಬಲಿ: ಕ್ರೌನ್​ ಆಫ್​ ಬ್ಲಡ್​’ ಆ್ಯನಿಮೇಟೆಡ್​ ಸೀರಿಸ್​ ಸಿದ್ಧವಾಗಿದೆ. ಮೇ 17ರಿಂದ ‘ಡಿಸ್ನಿ ಪ್ಲಸ್​ ಹಾಟ್‌ಸ್ಟಾರ್‌’ ಒಟಿಟಿ ಮೂಲಕ ಇದರ ಪ್ರಸಾರ ಆಗಲಿದೆ.

Advertisement
Tags :
BaahubaliCrown of BloodLatestNewsNewsKarnataka
Advertisement
Next Article