For the best experience, open
https://m.newskannada.com
on your mobile browser.
Advertisement

ಈ ಬಾರಿಯೂ ನಿಜವಾಯ್ತು ಬಾಬಾ ವಂಗಾ ಅವರ ಭವಿಷ್ಯವಾಣಿ : 2024ಕ್ಕೆ ನೀಡಿದ್ದ ಎಚ್ಚರಿ ಏನು

ಕುರುಡು ಬಲ್ಗೇರಿಯನ್ ಅತೀಂದ್ರಿಯ ಖ್ಯಾತಿಯ ಬಾಬಾ ವಂಗಾ ಅವರು ನೀಡಿದ ಅನೇಕ ಭವಿಷ್ಯಗಳು ನಿಜವಾಗಿದೆ. ಈ ಹಿಂದೆ 9/11, ಚೆರ್ನೋಬಿಲ್ ದುರಂತ ಮತ್ತು ರಾಜಕುಮಾರಿ ಡಯಾನಾ ಸಾವಿನ ಬಗ್ಗೆ ನಿಖರವಾಗಿ ಭವಿಷ್ಯ ನುಡಿದಿದ್ದ ಇವರು 2023ರಲ್ಲಿ ನಡೆಯಲಿರುವ ಅನೇಕ ಘಟನೆಗಳ ಬಗ್ಗೆ ಭವಿಷ್ಯ ನುಡಿದಿದ್ದರು. ಇದೀಗ ಅವರು 2024 ರ ಬಗ್ಗೆ ನುಡಿದಿದ್ದ ಭವಿಷ್ಯವು ಕೂಡ ನಿಜವಾಗುತ್ತಿದೆ.
03:34 PM Apr 04, 2024 IST | Nisarga K
ಈ ಬಾರಿಯೂ ನಿಜವಾಯ್ತು ಬಾಬಾ ವಂಗಾ ಅವರ ಭವಿಷ್ಯವಾಣಿ   2024ಕ್ಕೆ ನೀಡಿದ್ದ ಎಚ್ಚರಿ ಏನು
ಈ ಬಾರಿಯೂ ನಿಜವಾಯ್ತು ಬಾಬಾ ವಂಗಾ ಅವರ ಭವಿಷ್ಯವಾಣಿ : 2024ಕ್ಕೆ ನೀಡಿದ್ದ ಎಚ್ಚರಿ ಏನು

ಜಪಾನ್‌: ಕುರುಡು ಬಲ್ಗೇರಿಯನ್ ಅತೀಂದ್ರಿಯ ಖ್ಯಾತಿಯ ಬಾಬಾ ವಂಗಾ ಅವರು ನೀಡಿದ ಅನೇಕ ಭವಿಷ್ಯಗಳು ನಿಜವಾಗಿದೆ. ಈ ಹಿಂದೆ 9/11, ಚೆರ್ನೋಬಿಲ್ ದುರಂತ ಮತ್ತು ರಾಜಕುಮಾರಿ ಡಯಾನಾ ಸಾವಿನ ಬಗ್ಗೆ ನಿಖರವಾಗಿ ಭವಿಷ್ಯ ನುಡಿದಿದ್ದ ಇವರು 2023ರಲ್ಲಿ ನಡೆಯಲಿರುವ ಅನೇಕ ಘಟನೆಗಳ ಬಗ್ಗೆ ಭವಿಷ್ಯ ನುಡಿದಿದ್ದರು. ಇದೀಗ ಅವರು 2024 ರ ಬಗ್ಗೆ ನುಡಿದಿದ್ದ ಭವಿಷ್ಯವು ಕೂಡ ನಿಜವಾಗುತ್ತಿದೆ.

Advertisement

ಬಾಬ ವಂಗಾ ಅವರು ಈ ವರ್ಷ ನೈಸರ್ಗಿಕ ವಿಕೋಪಗಳು ಸಂಭವಿಸಬಹುದು ಎಂದು ಊಹಿಸಿದ್ದರು. ಸೈನ್ಸ್ ಅಡ್ವಾನ್ಸ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಜಾಗತಿಕ ಸೂರ್ಯನ ಶಾಖದ ಅಲೆಗಳು 67% ದಷ್ಟು ಹೆಚ್ಚಾಗಲಿದೆ. 40 ವರ್ಷಗಳ ಹಿಂದೆ ದಾಖಲಾದ ತಾಪಮಾನಕ್ಕೆ ಹೋಲಿಸಿದರೆ ಈ ಶಾಖದ ಅಲೆಗಳು ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಅದರಂತೆಯೆ ದಿನದಿನಕ್ಕೆ ಬಿಸಿಲಿನ ಧಗೆ ಹೆಚ್ಚಾಗುತ್ತಿದ್ದು ಹವಮಾನ ಇಲಾಖೆ ಈಗಾಗಲೇ ಹಲವು ಬಾರಿ ಎಚ್ಚರಿಕೆ ನೀಡಿದೆ.

ಅವರ ಸೈಬರ್‌ ದಾಳಿಗಳ ಕುರಿತು ಭವಿಷ್ಯವಾಣಿ,
ಅವರ ಕಾಲದಲ್ಲಿ ಕಂಪ್ಯೂಟರ್‌ಗಳ ಆರಂಭವಾಗಿತ್ತಷ್ಟೆ ಅಲ್ಲದೆ ಇವರು 1996 ರಲ್ಲೇ ಸಾವನಪ್ಪಿದ್ದಾರೆ. ಆ ಸಮಯದಲ್ಲೇ ಸೈಬರ್‌ ಕ್ರೈಮ್‌ಗಳ ಬಗ್ಗೆ ಭವಿಷ್ಯ ನುಡಿದಿದ್ದರು.ಜಾಗತಿಕ ಮಟ್ಟದಲ್ಲಿ ಸೈಬರ್ ದಾಳಿ ಮೂಲಕ ಭದ್ರತಾ ಅಪಾಯ ಇದೆ ಎಂದಿದ್ದರು. ಇತ್ತೀಚೆಗೆ, AT&T “ಡಾರ್ಕ್ ವೆಬ್” ನಲ್ಲಿ ಪತ್ತೆಯಾದ ಡೇಟಾಸೆಟ್ ಸುಮಾರು ಪ್ರಸ್ತುತ 7.6 ಮಿಲಿಯನ್ ಮತ್ತು ಹಳೆಯ 65.4 ಮಿಲಿಯನ್ ಖಾತೆದಾರರಿಗೆ ಸೇರಿದ ಸಾಮಾಜಿಕ ಭದ್ರತೆ ಸಂಖ್ಯೆಗಳು ಮತ್ತು ಪಾಸ್‌ವರ್ಡ್‌ಗಳು ಲೀಕ್​​ ಆಗಿದೆ. ಈ ಬಗ್ಗೆ ತನಿಖೆ ಕೂಡ ನಡೆಸುತ್ತಿದ್ದಾರೆ.ಕಳೆದ 12 ತಿಂಗಳುಗಳಲ್ಲಿ, Apple, Meta ಮತ್ತು X ನಂತಹ ಪ್ರಮುಖ ಕಂಪನಿಗಳು ಸೈಬರ್‌ ಸುರಕ್ಷತೆಯ ಉಲ್ಲಂಘನೆಯ ಎಲ್ಲಾ ನಿದರ್ಶನಗಳನ್ನು ಬಹಿರಂಗಪಡಿಸಿವೆ.

Advertisement

ಆರ್ಥಿಕ ಬಿಕ್ಕಟ್ಟು
ಜಾಗತಿಕ ಆರ್ಥಿಕ ಬೆಳವಣಿಗೆಗೆ ಹೊಡೆತ, ರಾಜಕೀಯ ಉದ್ವಿಗ್ನತೆ, ಸಾಲದ ಪ್ರಮಾಣ ಹೆಚ್ಚಾಗುವ ಬಗ್ಗೆ ಭವಿಷ್ಯ ನುಡಿದಿದ್ದರು. ಇದು ಈಗಾಗಲೇ ಸಂಭವಿಸಿದೆ.ಈಗಾಗಲೇ ಈ ವರ್ಷ ಅಮೆರಿಕ ನಿರಂತರ ಹಣದುಬ್ಬರವನ್ನು ಎದುರಿಸುತ್ತಿದೆ. 2023ರ ವರೆಗೂ US ಆರ್ಥಿಕತೆಯು ವಿಶ್ವದಲ್ಲೇ ಅತಿ ದೊಡ್ಡದಾಗಿದೆ. 2022ರಲ್ಲಿ ಶೇಕಡಾ 1.9 ರಿಂದ 2.5 ರಷ್ಟು ವಿಸ್ತರಿಸಿಕೊಂಡಿತು. ಪ್ರಸ್ತುತ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಅಮೆರಿಕದ ಆರ್ಥಿಕತೆ ಮಂದಗತಿಯಲ್ಲಿ ಸಾಗಿದೆ. ಜಪಾನ್ ಕೂಡ ಇದೇ ಸಂಕಟ ಅನುಭವಿಸುತ್ತಿದೆ. ಚೀನಾ ಕೂಡ ಇದರಿಂದ ಹೊರತಾಗಿಲ್ಲ.

ಭಯೋತ್ಪಾದನೆ, ಶಸ್ತ್ರಾಸ್ತ್ರಗಳ ಪರೀಕ್ಷೆ
ಬಾಬಾ ಅವರು ಯೂರೋಪ್‌ನಲ್ಲಿ ನಡೆಯುವ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.ಜೈವಿಕ ಶಸ್ತ್ರಾಸ್ತ್ರಗಳ ಪರೀಕ್ಷೆಯಲ್ಲಿ ತೊಡಗಿರುವ ಅಥವಾ ದಾಳಿಗಳನ್ನು ಪ್ರಾರಂಭಿಸುವ ದೇಶಗಳ ಬಗ್ಗೆ ಮಾಹಿತಿ ನೀಡಿದ್ದಾರೆ.ಇಂದು ಇಸ್ರೇಲ್-ಹಮಾಸ್ ಸಂಘರ್ಷ ಮತ್ತು ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ದೊಡ್ಡ ಸಮಸ್ಯೆಯಾಗಿದೆ.

ವೈದ್ಯಕೀಯ ಬೆಳವಣಿಗೆ ಮಟ್ಟ,

ಬಾಬಾ ವಂಗಾ ಅವರು 2024 ರಲ್ಲಿ ಆಲ್ಝೈಮರ್ ಮತ್ತು ಕ್ಯಾನ್ಸರ್ ಸೇರಿದಂತೆ ಗುಣಪಡಿಸಲಾಗದ ಕಾಯಿಲೆಗಳಿಗೆ ಔಷಧಿ ಬರಲಿದೆ ಎಂದು ಭವಿಷ್ಯ ನುಡಿದಿದ್ದರು.ಶ್ವಾಸಕೋಶದ ಕ್ಯಾನ್ಸರ್ ಲಸಿಕೆ ಅಭಿವೃದ್ಧಿಯಲ್ಲಿ ಪ್ರಗತಿ ಕಂಡಿದೆ ಎಂದು ಇತ್ತೀಚಿನ ವರದಿಗಳು ಹೇಳಿವೆ. ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ ವಿವಿ ತಿಳಿಸಿರುವಂತೆ DNA ಆಧಾರಿತ ಶ್ವಾಸಕೋಶದ ಕ್ಯಾನ್ಸರ್ ಲಸಿಕೆಗೆ ಔಷಧಿ ಕಂಡು ಹಿಡಿಯಲಾಗಿದೆ.DNA ಆಧಾರಿತ ಶ್ವಾಸಕೋಶದ ಕ್ಯಾನ್ಸರ್ ಲಸಿಕೆಗಾಗಿ 3000 ಡೋಸ್‌ಗಳ ಆರಂಭಿಕ ತಯಾರಿಕೆ ಬೇಕಾದ ಎಲ್ಲ ವೆಚ್ಚವನ್ನು ನೀಡಿದೆ.

Advertisement
Tags :
Advertisement