ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬನಶಂಕರಿ ದೇವಸ್ಥಾನದಲ್ಲಿ ಅಡಿಕೆ ತಟ್ಟೆಗಳು ಬ್ಯಾನ್

ಬನಶಂಕರಿ ದೇವಸ್ಥಾನದಲ್ಲಿ  ಅಮ್ಮನವರಿಗೆ ತುಪ್ಪದ ದೀಪ ಹಚ್ಚಲು ಅಡಿಕೆ ತಟ್ಟೆಗಳನ್ನ ಬಳಕೆ ಮಾಡುತ್ತಿದ್ದು,  ಇದ್ರಿಂದ ಸಾಕಷ್ಟು ಘನತ್ಯಾಜ್ಯ ಉಂಟಾಗುತ್ತಿತ್ತು.
09:53 AM Feb 14, 2024 IST | Ashika S

ಬೆಂಗಳೂರು: ಬನಶಂಕರಿ ದೇವಸ್ಥಾನದಲ್ಲಿ  ಅಮ್ಮನವರಿಗೆ ತುಪ್ಪದ ದೀಪ ಹಚ್ಚಲು ಅಡಿಕೆ ತಟ್ಟೆಗಳನ್ನ ಬಳಕೆ ಮಾಡುತ್ತಿದ್ದು,  ಇದ್ರಿಂದ ಸಾಕಷ್ಟು ಘನತ್ಯಾಜ್ಯ ಉಂಟಾಗುತ್ತಿತ್ತು.

Advertisement

ಈ ಕಾರಣದಿಂದಾಗಿ ಅಡಿಕೆ ತಟ್ಟೆಗಳನ್ನ ಬ್ಯಾನ್ ಮಾಡಿದ್ದು, ಕಸದಿಂದ ರಸಮಾಡಲು ಬನಶಂಕರಿ ದೇವಸ್ಥಾನದ ಆಡಳಿತ ಮಂಡಳಿ ಮುಂದಾಗಿದೆ.

ದೇವಸ್ಥಾನದಲ್ಲಿ ಸಾವಿರಾರು ಜನ ಭಕ್ತಾಧಿಗಳು  ತಾಯಿಗೆ ಅಡಿಕೆ ತಟ್ಟೆಗಳನ್ನ ಬಳಕೆ ಮಾಡಿ ತುಪ್ಪದ ದೀಪಗಳನ್ನ ಹಚ್ಚಿ ಪೂಜೆ ಸಲ್ಲಿಸುತ್ತಾರೆ.‌ ಈ ಅಡಿಕೆ ತಟ್ಟೆಗಳನ್ನ ಬಳಕೆ ಮಾಡಿ ದೇವಸ್ಥಾನದಲ್ಲಿಯೇ ಬಿಟ್ಟು ಹೋಗುತ್ತಿದ್ದಾರೆ,  ಇದರಿಂದ ದೇವಸ್ಥಾನದಲ್ಲಿ ಸಾಕಷ್ಟು ಘನತ್ಯಾಜ್ಯ ಉಂಟಾಗುತ್ತಿತ್ತು‌‌. ಇದೀಗಾ ಈ ಅಡಿಕೆ ತಟ್ಟೆ ಹಾಗೂ ಪ್ಲಾಸ್ಟಿಕ್ ನಂತಹ ವಸ್ತುಗಳನ್ನ ದೇವಸ್ಥಾನದ ಆಡಳಿತ ಮಂಡಳಿ ಬ್ಯಾನ್ ಮಾಡಿದೆ.

Advertisement

ಭಕ್ತರು ಸಹ ಅಡಿಕೆ ತಟ್ಟೆಗಳನ್ನ ಬಿಟ್ಟು, ಮನೆಗಳಿಂದಲೇ ತಟ್ಟೆ, ಬಟ್ಟಲುಗಳನ್ನ ತಂದು ತಾಯಿಗೆ ತುಪ್ಪದ ದೀಪಾ ಹಚ್ಚುತ್ತಿದ್ದಾರೆ. ಇದರಿಂದ ದೇವಸ್ಥಾನದ ಸುತ್ತಲೂ ಕಸದ ಸಮಸ್ಯೆ ನಿವಾರಣೆಯಾಗಿದೆ.

ಮತ್ತೊಂದು ಕಡೆ ದೇವಸ್ಥಾನದಲ್ಲಿ ಸಂಗ್ರಹಣೆಯಾಗುವ ಕಸದಿಂದ ಗೊಬ್ಬರ ತಯಾರಿಸಲು ದೇವಸ್ಥಾನ ಆಡಳಿತ ಮಂಡಳಿ ಮುಂದಾಗಿದೆ.

ದೇವಸ್ಥಾನದಲ್ಲಿ ಪ್ರತಿದಿನ ಪೂಜೆಗೆ ಬಳಸುವ ಹೂ, ಉಳಿದ ಅನ್ನ ಸಾಂಬಾರ್, ಅನ್ನದಾಸೋಹಕ್ಕ ಬಳಕೆ ಮಾಡಿದ ನಂತರ ತರಕಾರಿಗಳ ವೇಸ್ಟೇಜ್ ಅನ್ನ ಕಸಕ್ಕೆ ಹಾಕಲಾಗುತ್ತಿತ್ತು. ಆದ್ರೀಗಾ ಉಳಿದ ಹೂವು, ಹಣ್ಣು, ಭಕ್ತಾಧಿಗಳು ಊಟ ಮಾಡಿ ಉಳಿದ ಅನ್ನ- ಸಾಂಬಾರ್, ಇವೆಲ್ಲವನ್ನ ಸಂಗ್ರಹಿಸಿ ಗೊಬ್ಬರ ತಯಾರಿಸಲಾಗುತ್ತಿದ್ದು, ಈ ಗೊಬ್ಬರವನ್ನ ಒಂದು ಕೆಜಿಗೆ 20 ರೂ ನಂತೆ ಜನರಿಗೆ ಮಾರಾಟ ಮಾಡಲಾಗುತ್ತಿದೆ. ಜೊತೆಗೆ ದೇವಸ್ಥಾನದ ಸುತ್ತಲೂ ಸಧ್ಯ ಕಸದ ಸಮಸ್ಯೆ ಕಡಿಮೆಯಾಗಿದೆ.

Advertisement
Tags :
LatetsNewsNewsKannadaಅಡಿಕೆ ತಟ್ಟೆಘನತ್ಯಾಜ್ಯಬನಶಂಕರಿ ದೇವಸ್ಥಾನ
Advertisement
Next Article