ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಇನ್ಮುಂದೆ ಪಿಟ್​ಬುಲ್​, ಬುಲ್​ ಡಾಗ್​ ಸೇರಿ 23 ತಳಿಗಳನ್ನು ಸಾಕಂಗಿಲ್ಲ!

ದೇಶದಾದ್ಯಂತ ಆಕ್ರಮಣಕಾರಿ ಶ್ವಾನ ದಾಳಿಯ ಪ್ರಕರಣಗಳು ಹೆಚ್ಚುತ್ತಿವೆ. ಈ ಪ್ರಕರಣಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 23 ನಾಯಿ ತಳಿಯನ್ನು ನಿಷೇಧಿಸಿದೆ. ಹಾಗಾಗಿ ಪಟ್ಟಿ ಮಾಡಿರುವ 23 ಶ್ವಾನಗಳ ಆಮದು, ಮಾರಾಟ, ಸಂತಾನೋತ್ಪತ್ತಿ ಮೇಲೂ ನಿಷೇಧ ಹೇರಿದೆ.
11:24 AM Mar 14, 2024 IST | Ashitha S

ದೆಹಲಿ:  ದೇಶದಾದ್ಯಂತ ಆಕ್ರಮಣಕಾರಿ ಶ್ವಾನ ದಾಳಿಯ ಪ್ರಕರಣಗಳು ಹೆಚ್ಚುತ್ತಿವೆ. ಈ ಪ್ರಕರಣಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 23 ನಾಯಿ ತಳಿಯನ್ನು ನಿಷೇಧಿಸಿದೆ. ಹಾಗಾಗಿ ಪಟ್ಟಿ ಮಾಡಿರುವ 23 ಶ್ವಾನಗಳ ಆಮದು, ಮಾರಾಟ, ಸಂತಾನೋತ್ಪತ್ತಿ ಮೇಲೂ ನಿಷೇಧ ಹೇರಿದೆ.

Advertisement

ರಾಟ್ವೀಲರ್​, ಪಿಟ್​ಬುಲ್​, ಟೆರಿಯರ್​, ವುಲ್ಫ್​ಡಾಗ್​, ರಷ್ಯನ್​ ಶೆಫರ್ಡ್​, ಮ್ಯಾಸ್ಟಿಫ್ಸ್​ ಶ್ವಾನಗಳು ಸೇರಿದಂತೆ 23 ಶ್ವಾನಗಳನ್ನು ಸಾಕುವಂತಿಲ್ಲ ಎಂಬ ನಿಷೇಧವನ್ನು ಜಾರಿಗೊಳಿಸಿದೆ. ಈ ಶ್ವಾನಗಳು ಅಪಾಯಕಾರಿ ಎಂದು ಹೇಳಿದೆ.

ದೆಹಲಿ ಹೈಕೋರ್ಟ್​ ಆದೇಶಕ್ಕೆ ಸರಿಯಾಗಿ ಪ್ರಾಣಿ ಕಲ್ಯಾಣ ಸಂಸ್ಥೆಗಳ ಜಂಟಿ ಸಮಿತಿಯ ವರದಿಯನ್ನು ಅನುಸರಿಸಿ ಈ ನಿರ್ಣಯ ಕೈಗೊಂಡಿದೆ. ಇದರಲ್ಲಿ ಮಿಶ್ರತಳಿಗಳು ಸೇರಿವೆ. ಇದರ ಜೊತೆಗೆ ಪಶುಸಂಗೋಪನೆ ಅಯುಕ್ತರ ಅಧ್ಯಕ್ಷತೆಯಲ್ಲಿ ರಚಿಸಲಾದ ತಜ್ಞರ ಸಮಿತಿಯು ಅಪಾಯಕಾರಿ ನಾಯಿಗಳ ಆಮದನ್ನು ನಿಷೇಧಿಸಲು ಶಿಫಾರಸು ಮಾಡಿದೆ.

Advertisement

ಪಿಟ್‌ಬುಲ್ ಟೆರಿಯರ್, ಟೋಸಾ ಇನು, ಅಮೇರಿಕನ್ ಸ್ಟಾಫರ್ಡ್‌ಶೈರ್ ಟೆರಿಯರ್, ಫಿಲಾ ಬ್ರೆಸಿಲಿರೊ, ಡೊಗೊ ಅರ್ಜೆಂಟಿನೋ, ಅಮೇರಿಕನ್ ಬುಲ್‌ಡಾಗ್, ಬೋರ್‌ಬೋಲ್, ಕಂಗಲ್, ಸೆಂಟ್ರಲ್ ಏಷ್ಯನ್ ಶೆಫರ್ಡ್ ಡಾಗ್, ಕಕೇಶಿಯನ್ ಶೆಫರ್ಡ್ ಡಾಗ್, ಸೌತ್ ರಷ್ಯನ್ ಶೆಫರ್ಡ್, ಟೊರ್ನ್‌ಜಾಕ್, ಟೊಸಪ್ಲಾನಿನಾಕ್, ಮಾಸ್ಟಿಫ್ಸ್, ರೊಟ್‌ವೀಲರ್, ಟೆರಿಯರ್‌ಗಳು, ರೊಡೇಸಿಯನ್ ರಿಡ್ಜ್‌ಬ್ಯಾಕ್, ವುಲ್ಫ್ ಡಾಗ್ಸ್, ಕೆನಾರಿಯೊ, ಅಕ್ಬಾಶ್ ಡಾಗ್, ಮಾಸ್ಕೋ ಗಾರ್ಡ್ ಡಾಗ್, ಕೇನ್ ಕೊರ್ಸೊ  ಇವು ಇಷ್ಟು ನಿಷೇಧಿತ ಶ್ವಾನದ ತಳಿಗಳು

Advertisement
Tags :
ಡಾಗ್​
Advertisement
Next Article