For the best experience, open
https://m.newskannada.com
on your mobile browser.
Advertisement

ಪೂರ್ವ ಆಫ್ರಿಕಾದಲ್ಲಿ ಬಂಟ ಸಂಭ್ರಮ -2೦23 ಕಾರ್ಯಕ್ರಮ

ಬಂಟರ ಸಂಘ ಪೂರ್ವ ಆಫ್ರಿಕಾ ನೈರೋಬಿ ಕೀನ್ಯಾ ಇದರ ಮೊದಲನೇ ವಾರ್ಷಿಕೋತ್ಸವ ದಿನಾಂಕ ಅಕ್ಟೋಬರ್ 28ರಂದು ಹೋಟೆಲ್ ರೆಡ್ ಜಿಂಜರ್ 2ನೇ ಪಾರ್ಕ್ ಲ್ಯಾಂಡ್ಸ್ ಅವೆನ್ಯೂ ನೈರೋಬಿ ಕೀನ್ಯಾದಲ್ಲಿ ನಡೆಯಿತು.
07:51 PM Nov 01, 2023 IST | Gayathri SG
ಪೂರ್ವ ಆಫ್ರಿಕಾದಲ್ಲಿ ಬಂಟ ಸಂಭ್ರಮ  2೦23 ಕಾರ್ಯಕ್ರಮ

ಕೀನ್ಯಾ: ಬಂಟರ ಸಂಘ ಪೂರ್ವ ಆಫ್ರಿಕಾ ನೈರೋಬಿ ಕೀನ್ಯಾ ಇದರ ಮೊದಲನೇ ವಾರ್ಷಿಕೋತ್ಸವ ದಿನಾಂಕ ಅಕ್ಟೋಬರ್ 28ರಂದು ಹೋಟೆಲ್ ರೆಡ್ ಜಿಂಜರ್ 2ನೇ ಪಾರ್ಕ್ ಲ್ಯಾಂಡ್ಸ್ ಅವೆನ್ಯೂ ನೈರೋಬಿ ಕೀನ್ಯಾದಲ್ಲಿ ನಡೆಯಿತು.

Advertisement

ಸಂಘದ ಮಹಿಳಾ ಸದಸ್ಯೆಯರು ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಂಗಳೂರು ಮೀನನಾಥ ಖ್ಯಾತಿಯ ರಾಘವೇಂದ್ರ ರೈ ಕುಂಜತ್ತೂರು ಇವರಿಂದ ಹಾಗೂ ಸಂಘದ ಸದಸ್ಯರಿಂದ ಸಂಗೀತ, ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಅಕ್ಷಯ ರಾಜೇಶ್ ಶೆಟ್ಟಿ ಇವರ ಸನ್ಮಾನ ಪತ್ರ ವಾಚನ ದೊಂದಿಗೆ ನಟ ಹಾಗೂ ರಂಗಭೂಮಿ ಕಲಾವಿದರಾದ ರಾಘವೇಂದ್ರ ರೈ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಆರಂಭದಿಂದ ಕೊನೆಯವರೆಗೂ ತುಳು ಭಾಷೆಗೆ ಹೆಚ್ಚು ಪ್ರಾಧಾನ್ಯತೆ ನೀಡಿರುವುದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಮೂಡಾಯಿ ಆಫ್ರಿಕಾದ ಪೆರ್ಮೆದ ಬಂಟೆರ್ ಆಲ್ಬಮ್ ಹಾಡು ಬಿಡುಗಡೆಗೊಂಡಿತು.

ಶಾಂತಿ ಯಶವಂತ್ ಶೆಟ್ಟಿ, ಶುಭ ಶೈಲೇಶ್ ಶೆಟ್ಟಿ ಪ್ರಾರ್ಥನೆಯನ್ನು ಹಾಡಿದರು, ಸಂಘದ ಅಧ್ಯಕ್ಷರಾದ ಶೈಲೇಶ್ ಶೆಟ್ಟಿಯವರು ಸ್ವಾಗತಿಸಿ ಪ್ರಸ್ತಾವನೆಗೈದರು. ಸಂಘದ ಎಲ್ಲಾ ಸದಸ್ಯರಿಗೆ ಪ್ರಥಮ ವರ್ಷದ ಸವಿನೆನಪಿಗಾಗಿ ಶಾಲು ಹಾಗೂ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಸಪ್ನ ಅಶೋಕ್ ಭಂಡಾರಿ, ಗಾಯತ್ರಿ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಸಂದೀಪ್ ಸಾಮಾನಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಅಭಿಜಿತ್ ಸೂಡ ವಂದಿಸಿದರು.

Advertisement

Advertisement
Tags :
Advertisement