ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕನ್ನಡ ನಾಮಫಲಕ ಹಾಕದವರ ಟ್ರೇಡ್ ಲೈಸೆನ್ಸ್​ ರದ್ದು ಮಾಡಿದ ಬಿಬಿಎಂಪಿ

ಮೂಲಕ ಕನ್ನಡ ನಾಮಫಲಕ ಹಾಕದವರಿಗೆ ಬಿಬಿಎಂಪಿ ಶಾಕ್​ ನೀಡಿದ್ದು, ಕನ್ನಡ ನಾಮಫಲಕ  ಹಾಕದವರ ಟ್ರೇಡ್ ಲೈಸೆನ್ಸ್​ ರದ್ದು ಮಾಡಿದೆ. 
07:28 PM Mar 14, 2024 IST | Ashika S

ಬೆಂಗಳೂರು: ಮೂಲಕ ಕನ್ನಡ ನಾಮಫಲಕ ಹಾಕದವರಿಗೆ ಬಿಬಿಎಂಪಿ ಶಾಕ್​ ನೀಡಿದ್ದು, ಕನ್ನಡ ನಾಮಫಲಕ  ಹಾಕದವರ ಟ್ರೇಡ್ ಲೈಸೆನ್ಸ್​ ರದ್ದು ಮಾಡಿದೆ.

Advertisement

ಮಾಲ್ ಆಫ್ ಏಷ್ಯಾದ ಕೆಲವು ಮಳಿಗೆಗಳಿಗೆ ಬೀಗ ಹಾಕಲಾಗಿದೆ. ಕಾಲಾವಕಾಶ ನೀಡಿದರೂ ಉದ್ದಿಮೆದಾರರು ಕ್ಯಾರೆ ಎನ್ನದ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರಿಗೆ ಪಾಲಿಕೆ ಬಿಸಿ ಮುಟ್ಟಿಸಿದೆ.

ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಇರಬೇಕು ಅಂತ ನೀಡಿದ್ದ 2 ತಿಂಗಳ ಗಡುವು ಮುಗಿದು ಹೋಗಿದೆ. ಶೇ.60ರಷ್ಟು ಕನ್ನಡರಷ್ಟು ಕನ್ನಡವಿರದ ನಾಮಫಲಕಗಳನ್ನ ಹಾಕಿದವರ ವಿರುದ್ಧ ಇತ್ತೀಚೆಗೆ ರಾಜ್ಯಾದ್ಯಂತ ಎಲ್ಲ ನಗರಗಳಲ್ಲೂ ಕ್ರಮಕೈಗೊಳ್ಳಬೇಕಿತ್ತು.

Advertisement

ಕನ್ನಡ ನಾಮಫಲಕ ಅಳವಡಿಸದವರಿಗೆ ಬಿಬಿಎಂಪಿ ಈ ಹಿಂದೆ ಶಾಕ್ ನೀಡಿತ್ತು. ಶೇ. 60ರಷ್ಟು ಕನ್ನಡ ನಾಮಫಲಕ ಅಳವಡಿಸದಿದ್ದರೆ ಲೈಸೆನ್ಸ್ ರದ್ದು ಮಾಡುವ ಎಚ್ಚರಿಕೆ ನೀಡಿತ್ತು. ಈ ಸಂಬಂಧ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ವಿಕಾಸ್ ಕಿಶೋರ್ ಆದೇಶ ಹೊರಡಿಸಿದ್ದರು. ಅಂಗಡಿ ಲೈಸೆನ್ಸ್ ರದ್ದು ಮಾಡಿ ಬೀಗ ಹಾಕುವುದಾಗಿ ಬಿಬಿಎಂಪಿ ಎಚ್ಚರಿಕೆ ನೀಡಿತ್ತು.

ಈ ಬಗ್ಗೆ ಕನ್ನಡ ಚಳವಳಿ ವಾಟಾಳ್‌ ನಾಗರಾಜ್‌ ಅನ್ಯ ಭಾಷೆಯ ನಾಮಫಲಕಗಳನ್ನ ಕಿತ್ತು ಹಾಕುವುದಾಗಿ ಗುಡುಗಿದರೆ, ಕರವೇ ಅಧ್ಯಕ್ಷ ನಾರಾಯಣಗೌಡರು ಮಾರ್ಚ್‌ 5ರಂದು ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದರು.

Advertisement
Tags :
bengaluruLatetsNewsNewsKannadaಬಿಬಿಎಂಪಿ
Advertisement
Next Article