For the best experience, open
https://m.newskannada.com
on your mobile browser.
Advertisement

‘T20 ವಿಶ್ವಕಪ್​​ಗೆ ಆಯ್ಕೆಯಾಗಲು ಕೊಹ್ಲಿ ಐಪಿಎಲ್ ಆಡಲೇಬೇಕು’:ಬಿಸಿಸಿಐ

ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಕೇವಲ 2 ವಾರಗಳು ಮಾತ್ರ ಬಾಕಿ ಇವೆ. ಈ ಬೆನ್ನಲ್ಲೇ ನಡೆಯಲಿರೋ ಟಿ20 ವಿಶ್ವಕಪ್​​ಗೆ ಕಮ್​ಬ್ಯಾಕ್​ ಮಾಡಲು ಸ್ಟಾರ್​ ಬ್ಯಾಟರ್​​ ವಿರಾಟ್​ ಕೊಹ್ಲಿಗೆ ಆರ್​​​ಸಿಬಿ ಪರ ಆಡುವುದು ಕಡ್ಡಾಯವಾಗಿದೆ. ಕಿಂಗ್​​ ಪಾಲಿಗೆ ಈ ಬಾರಿ ಐಪಿಎಲ್​​ ನಿರ್ಣಾಯಕ ಎನ್ನಲಾಗಿದೆ.
05:01 PM Mar 12, 2024 IST | Ashitha S
‘t20 ವಿಶ್ವಕಪ್​​ಗೆ ಆಯ್ಕೆಯಾಗಲು ಕೊಹ್ಲಿ ಐಪಿಎಲ್ ಆಡಲೇಬೇಕು’ ಬಿಸಿಸಿಐ

‌ಮುಂಬೈ: ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಕೇವಲ 2 ವಾರಗಳು ಮಾತ್ರ ಬಾಕಿ ಇವೆ. ಈ ಬೆನ್ನಲ್ಲೇ ನಡೆಯಲಿರೋ ಟಿ20 ವಿಶ್ವಕಪ್​​ಗೆ ಕಮ್​ಬ್ಯಾಕ್​ ಮಾಡಲು ಸ್ಟಾರ್​ ಬ್ಯಾಟರ್​​ ವಿರಾಟ್​ ಕೊಹ್ಲಿಗೆ ಆರ್​​​ಸಿಬಿ ಪರ ಆಡುವುದು ಕಡ್ಡಾಯವಾಗಿದೆ. ಕಿಂಗ್​​ ಪಾಲಿಗೆ ಈ ಬಾರಿ ಐಪಿಎಲ್​​ ನಿರ್ಣಾಯಕ ಎನ್ನಲಾಗಿದೆ.

Advertisement

ಆರ್‌ಸಿಬಿ ಮಾಜಿ ಕ್ಯಾಪ್ಟನ್​ ವಿರಾಟ್ ಕೊಹ್ಲಿ ಈ ಬಾರಿ ಐಪಿಎಲ್‌ ಆಡುತ್ತಾರೋ ಇಲ್ಲವೋ ಅನ್ನೋ ಅನುಮಾನ ಇದೆ. ಈ ಬಗ್ಗೆ ಬಿಸಿಸಿಐ ಅಧಿಕಾರಿ ಅಚ್ಚರಿ ಹೇಳಿಕೆಯೊಂದು ನೀಡಿದ್ದಾರೆ.

"ನಮಗೆ ಇರೋ ಮಾಹಿತಿ ಪ್ರಕಾರ ವಿರಾಟ್ ಕೊಹ್ಲಿ ಐಪಿಎಲ್ ಆಡುತ್ತಾರೆ. ಆದರೆ ಯಾವಾಗ ಆರ್​​ಸಿಬಿ ಕ್ಯಾಂಪ್​ ಸೇರಿಕೊಳ್ಳಲಿದ್ದಾರೆ ಅನ್ನೋ ಮಾಹಿತಿ ನಮಗಿಲ್ಲ, ಇದು ಆರ್‌ಸಿಬಿ ಫ್ರಾಂಚೈಸಿಗೆ ಬಿಟ್ಟದ್ದು. ಕೊಹ್ಲಿ ರೆಸ್ಟ್​ನಲ್ಲಿರೋ ಕಾರಣ ಈ ಬಗ್ಗೆ ನಾವೇನು ಕೇಳಿಲ್ಲ. ಆದರೆ, ಖಂಡಿತವಾಗಲೂ ಟಿ20 ವಿಶ್ವಕಪ್‌ಗೆ ಆಟಗಾರರನ್ನು ಆಯ್ಕೆ ಮಾಡಲು ಐಪಿಎಲ್​​ ದೊಡ್ಡ ಪಾತ್ರವಹಿಸಲಿದೆ" ಎಂದಿದೆ ಬಿಸಿಸಿಐ.

Advertisement

Advertisement
Tags :
Advertisement