For the best experience, open
https://m.newskannada.com
on your mobile browser.
Advertisement

ಮಲೇಷಿಯಾದ ಬ್ಯೂಟಿ ಕ್ವೀನ್​ಗೆ ಅವಮಾನ: ಕಿರೀಟ ವಾಪಸ್ !

2023ರಲ್ಲಿ ಉಂಡುಕ್ ನ್ಗಡೌ ಜೊಹೋರ್ ಎಂಬಾಕೆ ಮಲೇಷ್ಯಾದ ಸೌಂದರ್ಯ ರಾಣಿ ಎಂಬ ಬಿರುದು ಪಡೆದುಕೊಂಡಿದ್ದರು. ಆದರೆ ಇದೀಗ ಮಲೇಷಿಯಾದ ಬ್ಯೂಟಿ ಕ್ವೀನ್​ಗೆ ಕೊಟ್ಟಿದ್ದ ಕಿರೀಟವನ್ನು ವಾಪಸ್​ ಪಡೆದುಕೊಳ್ಳಲಾಗಿದೆ.
08:27 PM Apr 12, 2024 IST | Ashitha S
ಮಲೇಷಿಯಾದ ಬ್ಯೂಟಿ ಕ್ವೀನ್​ಗೆ ಅವಮಾನ  ಕಿರೀಟ ವಾಪಸ್

ಮಲೇಷ್ಯಾ: 2023ರಲ್ಲಿ ಉಂಡುಕ್ ನ್ಗಡೌ ಜೊಹೋರ್ ಎಂಬಾಕೆ ಮಲೇಷ್ಯಾದ ಸೌಂದರ್ಯ ರಾಣಿ ಎಂಬ ಬಿರುದು ಪಡೆದುಕೊಂಡಿದ್ದರು. ಆದರೆ ಇದೀಗ ಮಲೇಷಿಯಾದ ಬ್ಯೂಟಿ ಕ್ವೀನ್​ಗೆ ಕೊಟ್ಟಿದ್ದ ಕಿರೀಟವನ್ನು ವಾಪಸ್​ ಪಡೆದುಕೊಳ್ಳಲಾಗಿದೆ.

Advertisement

ಉಂಡುಕ್ ನ್ಗಡೌ ಜೊಹೋರ್ ಅವರು ರಜೆಯ ನಿಮಿತ್ತ ಕುಟುಂಬಸ್ಥರ ಜೊತೆ ಥಾಯ್ಲೆಂಡ್‌ಗೆ ಹೋಗಿದ್ದರು. ರಜೆಯಲ್ಲಿ ಸಖತ್​ ಎಂಜಾಯ್​ ಮಾಡುತ್ತಿದ್ದ ಮಲೇಷಿಯಾದ ಬ್ಯೂಟಿ ಕ್ವೀನ್ ತಾನು ಪೋಸ್ಟ್​ ಮಾಡಿದ ವಿಡಿಯೋದಿಂದ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದ್ದಾಳೆ. ಮಲೇಷಿಯಾದ ಬ್ಯೂಟಿ ಕ್ವೀನ್ ಆಗಿರೋ ಉಂಡುಕ್ ನ್ಗಡೌ ಜೊಹೋರ್ ಜೊತೆ ಕೆಲ ಪುರುಷರು ಅಶ್ಲೀಲವಾಗಿ ಡ್ಯಾನ್ಸ್​ ಮಾಡಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಮಲೇಷಿಯಾದ ಬ್ಯೂಟಿ ಕ್ವೀನ್ ಹೀಗೆ ಅಶ್ಲೀಲವಾಗಿ ಪುರುಷರ ಜೊತೆ ಡ್ಯಾನ್ಸ್​ ಮಾಡುವುದು ಸರಿಯಲ್ಲ ಎಂದು ಕಾಮೆಂಟ್​ ಮಾಡಿದ್ದರು. ಇದಾದ ಬಳಿಕ ಮಲೇಷಿಯಾದ ಬ್ಯೂಟಿ ಕ್ವೀನ್ ಪಟ್ಟದಿಂದ ಕೆಳಗಿಳಿಸಲಾಗಿದೆ. ಜೊತೆಗೆ ಆಕೆಗೆ ಕೊಟ್ಟಿದ್ದ ಕಿರೀಟವನ್ನು ವಾಪಸ್​ ಪಡೆದುಕೊಳ್ಳಲಾಗಿದಿಯಂತೆ. ಇನ್ನು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಉಂಡುಕ್ ನ್ಗಡೌ ಜೊಹೋರ್, ನಾನು ನನ್ನ ಸ್ವಂತ ಇಚ್ಛೆಯಿಂದ ಉಂದುಕ್ ನ್ಗಡೌ ಸ್ಪರ್ಧೆಗೆ ಸೇರಿಕೊಂಡೆ. ಯಾವುದೇ ಬಲವಂತವಿಲ್ಲದೆ ಈ ಪ್ರಶಸ್ತಿಯನ್ನು ಹಿಂದಿರುಗಿಸಿದೆ. ನನ್ನ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ನಾನು ಈ ಕಿರೀಟಕ್ಕೆ ಪರಿಪೂರ್ಣಳಲ್ಲ ಎಂದು ಹೇಳಿಕೊಂಡಿದ್ದಾರೆ.

Advertisement

Advertisement
Tags :
Advertisement