For the best experience, open
https://m.newskannada.com
on your mobile browser.
Advertisement

ಮಲ್ಪೆ ಬೀಚ್ ನ‌ ಸೊಬಗನ್ನು ಕೆಡಿಸುತ್ತಿವೆ ಬಿಯರ್ ಬಾಟಲ್, ಪ್ಲಾಸ್ಟಿಕ್ ತ್ಯಾಜ್ಯ

ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣ ಮಲ್ಪೆ ಬೀಚ್ ಇದೀಗ ಕಸದ ಕೊಂಪೆಯಾಗಿ ಮಾರ್ಪಡುತ್ತಿದೆ. ಎಲ್ಲೆಂದರಲ್ಲಿ ಬಿಸಾಡಿರುವ ಪ್ಲಾಸ್ಟಿಕ್ ಬಾಟಲ್, ಬಿಯರ್ ಬಾಟಲ್ ಹಾಗೂ ತ್ಯಾಜ್ಯ ರಾಶಿಯಿಂದ ಬೀಚ್ ನ ಅಂದ ಕೆಟ್ಟುಹೋಗಿದೆ.
11:13 AM May 07, 2024 IST | Nisarga K
ಮಲ್ಪೆ ಬೀಚ್ ನ‌ ಸೊಬಗನ್ನು ಕೆಡಿಸುತ್ತಿವೆ ಬಿಯರ್ ಬಾಟಲ್  ಪ್ಲಾಸ್ಟಿಕ್ ತ್ಯಾಜ್ಯ
ಮಲ್ಪೆ ಬೀಚ್ ನ‌ ಸೊಬಗನ್ನು ಕೆಡಿಸುತ್ತಿವೆ ಬಿಯರ್ ಬಾಟಲ್, ಪ್ಲಾಸ್ಟಿಕ್ ತ್ಯಾಜ್ಯ

ಉಡುಪಿ:  ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣ ಮಲ್ಪೆ ಬೀಚ್ ಇದೀಗ ಕಸದ ಕೊಂಪೆಯಾಗಿ ಮಾರ್ಪಡುತ್ತಿದೆ. ಎಲ್ಲೆಂದರಲ್ಲಿ ಬಿಸಾಡಿರುವ ಪ್ಲಾಸ್ಟಿಕ್ ಬಾಟಲ್, ಬಿಯರ್ ಬಾಟಲ್ ಹಾಗೂ ತ್ಯಾಜ್ಯ ರಾಶಿಯಿಂದ ಬೀಚ್ ನ ಅಂದ ಕೆಟ್ಟುಹೋಗಿದೆ.

Advertisement

ಮಲ್ಪೆಯ ಬೀಚ್ ಗೆ ಈಗ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ದಿನಕ್ಕೆ ಸಾವಿರಾರು ಜನರು ಬೀಚ್ ವಿಸಿಟ್ ಮಾಡುತ್ತಿದ್ದಾರೆ. ಆದ್ರೆ ಬೀಚ್ ನ ಬಲ ಭಾಗದ ಪ್ರದೇಶ ಕಸದಿಂದ ಕೂಡಿದ್ದು ನಿರ್ವಹಣೆ ಇಲ್ಲದೇ ಬೀಚ್ ಸೊರಗಿದೆ. ಒಂದು ಕಡೆ ವಾಟರ್ ಗೇಮ್ , ಪ್ಲೋಟಿಂಗ್ ಬ್ರಿಡ್ಜ್ ನ ಅಂದ ಕಂಡರೆ ಇನ್ನೊಂದು ಭಾಗದಲ್ಲಿ ಬಿಯರ್ ಬಾಟಲಿ, ಪ್ಲಾಸ್ಟಿಕ್ ಬಾಟಲಿ, ಬಲೆಗಳು ಹಾಗೂ ಕಸದಿಂದ ತುಂಬಿದ್ದು ಬೀಚ್ ನಲ್ಲಿ ಕಾಲಿಡಲು ಅಸಹ್ಯವಾಗುತ್ತಿದೆ.

ಸಂಜೆಯಾಗುತ್ತಲೇ ಈ ಭಾಗದಲ್ಲಿ ಯುವಕರ ತಂಡ ಪಾರ್ಟಿ ನಡೆಸುತ್ತಿದ್ದು, ಬಿಯರ್ ಬಾಟಲಿಗಳನ್ನು ಬೀಚ್ ಬದಿ ಬಿಸಾಡಿ ಹೋಗುತ್ತಿದ್ದಾರೆ.ಇದರಿಂದ ಇಂತಹ ಬಾಟಲಿಗಳು ಸಮುದ್ರಕ್ಕೆ ಸೇರುತ್ತಿದ್ದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ಆದಷ್ಟು ಬೇಗ ಬೀಚ್ ಅಭಿವೃದ್ದಿ ಸಮಿತಿ ಈ ಬಗ್ಗೆ ಕಾಳಜಿ ವಹಿಸಿ ಬೀಚ್ ಸ್ವಚ್ಚತೆಯತ್ತ ಗಮನ ಸೆಳೆಯಬೇಕಾಗಿದೆ.

Advertisement

Advertisement
Tags :
Advertisement