For the best experience, open
https://m.newskannada.com
on your mobile browser.
Advertisement

ಇಂದಿನಿಂದ ರಾಜ್ಯದಲ್ಲಿ ಬಿಯರ್ ಬಾಟಲಿ ದರ ಏರಿಕೆ

ರಾಜ್ಯ ಬಜೆಟ್ ಗೂ ಮುನ್ನವೇ ರಾಜ್ಯ ಸರ್ಕಾರ ಮದ್ಯ ಪ್ರಿಯರಿಗೆ ಶಾಕ್ ಕೊಟ್ಟಿದೆ. ಬಿಯರ್ ಪ್ರಿಯರ ಜೇಬಿಗೆ ಮತ್ತೆ ಕತ್ತರಿ ಬಿದ್ದಿದೆ. ಕಳೆದ 7 ತಿಂಗಳಲ್ಲಿ ಬರೊಬ್ಬರಿ ಮೂರನೇ ಬಾರಿಗೆ ಬಿಯರ್ ದರದಲ್ಲಿ ಏರಿಕೆಯಾಗಿದೆ.  ಇಂದಿನಿಂದ ಬಿಯರ್ ಬಾಟಲಿ ದರ 10 ರೂಪಾಯಿಂದ 15 ರೂಪಾಯಿ ಹೆಚ್ಚಳವಾಗಲಿದೆ. ರಾಜ್ಯ ಸರ್ಕಾರ ಬಿಯರ್‌ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಶೇ.185 ರಿಂದ 195 ಕ್ಕೆ ಹೆಚ್ಚಳ ಮಾಡಿದೆ.
03:40 PM Feb 01, 2024 IST | Ashitha S
ಇಂದಿನಿಂದ ರಾಜ್ಯದಲ್ಲಿ ಬಿಯರ್ ಬಾಟಲಿ ದರ ಏರಿಕೆ

ಬೆಂಗಳೂರು:  ರಾಜ್ಯ ಬಜೆಟ್ ಗೂ ಮುನ್ನವೇ ರಾಜ್ಯ ಸರ್ಕಾರ ಮದ್ಯ ಪ್ರಿಯರಿಗೆ ಶಾಕ್ ಕೊಟ್ಟಿದೆ. ಬಿಯರ್ ಪ್ರಿಯರ ಜೇಬಿಗೆ ಮತ್ತೆ ಕತ್ತರಿ ಬಿದ್ದಿದೆ. ಕಳೆದ 7 ತಿಂಗಳಲ್ಲಿ ಬರೊಬ್ಬರಿ ಮೂರನೇ ಬಾರಿಗೆ ಬಿಯರ್ ದರದಲ್ಲಿ ಏರಿಕೆಯಾಗಿದೆ.  ಇಂದಿನಿಂದ ಬಿಯರ್ ಬಾಟಲಿ ದರ 10 ರೂಪಾಯಿಂದ 15 ರೂಪಾಯಿ ಹೆಚ್ಚಳವಾಗಲಿದೆ. ರಾಜ್ಯ ಸರ್ಕಾರ ಬಿಯರ್‌ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಶೇ.185 ರಿಂದ 195 ಕ್ಕೆ ಹೆಚ್ಚಳ ಮಾಡಿದೆ.

Advertisement

ರಾಜ್ಯ ಅಬಕಾರಿ‌ ಇಲಾಖೆ ಜನವರಿ 20ಕ್ಕೆ‌ ಸುಂಕ ಹೆಚ್ಚಳ ಕುರಿತಂತೆ ಕರಡನ್ನು ಪ್ರಕಟಿಸಿತ್ತು. ಕರ್ನಾಟಕ ಅಬಕಾರಿ ನಿಯಮ 1968 ತಿದ್ದುಪಡಿ ಮಾಡಲು ಕರಡು ಅಧಿಸೂಚನೆಯಲ್ಲಿ ಪ್ರಕಟ ಮಾಡಿತ್ತು. ಇದಕ್ಕೆ ರಾಜ್ಯ ಸರ್ಕಾರವು ಒಪ್ಪಿಗೆ ಸೂಚಿಸಿತ್ತು.

ಆದರೆ ನಿನ್ನೆ ಸುಂಕ ಏರಿಕೆಯ ಕುರಿತು ಅಬಕಾರಿ ಇಲಾಖೆ ಅಂತಿಮ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ತಯಾರಿಸುವ ಹಾಗೂ ಆಮದು ಮಾಡಿಕೊಳ್ಳುವ ಬಿಯರ್‌ನ ಮೇಲಿನ ಸುಂಕ ಹೆಚ್ಚು ಮಾಡಲಿದೆ. ಕಳೆದ 7 ತಿಂಗಳಲ್ಲಿ ಬರೊಬ್ಬರಿ ಮೂರನೇ ಬಾರಿಗೆ ಬಿಯರ್ ದರದಲ್ಲಿ ಏರಿಕೆಕಂಡಿದೆ.

Advertisement

Advertisement
Tags :
Advertisement