ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬೆಂಗಳೂರು ಕಂಬಳ: ತಯಾರಾಗುತ್ತಿದೆ ಕರಾವಳಿ ಶೈಲಿಯ ಬೊಂಬಾಟ್‌ ಭೋಜನ

ಅರಮನೆ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಕರಾವಳಿಯ ಕೋಣಗಳ ಓಟದ ಸ್ಪರ್ಧೆ ರಾಜಧಾನಿಯಲ್ಲಿ ನಡೆಯುತ್ತಿದೆ. ಜೊತೆಗೆ ಸಾಂಸ್ಕೃತಿಕ ವೈಭವದ ಆಯೋಜನೆ ಹಾಗೂ ರುಚಿಕರ ಅಡುಗೆ ಸಿದ್ಧವಾಗುತ್ತಿದೆ.
03:30 PM Nov 25, 2023 IST | Ashika S

ಬೆಂಗಳೂರು: ಅರಮನೆ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಕರಾವಳಿಯ ಕೋಣಗಳ ಓಟದ ಸ್ಪರ್ಧೆ ಕಂಬಳ ರಾಜಧಾನಿಯಲ್ಲಿ ನಡೆಯುತ್ತಿದೆ. ಜೊತೆಗೆ ಸಾಂಸ್ಕೃತಿಕ ವೈಭವದ ಆಯೋಜನೆ ಹಾಗೂ ರುಚಿಕರ ಅಡುಗೆ ಸಿದ್ಧವಾಗುತ್ತಿದೆ.

Advertisement

ಬೆಂಗಳೂರು ಕಂಬಳಕ್ಕೆ ಆಗಮಿಸಿರುವ ಅತಿಥಿಗಳಿಗೆ, ಸ್ವಯಂ ಸೇವಕರಿಗೆ, ಪರಿಚಾರಕರಿಗೆ, ಕೋಣಗಳ ಯಜಮಾನರಿಗೆ ಸೇರಿ ಸಾವಿರಾರು ಮಂದಿಗೆ ದಿನಕ್ಕೆ ಮೂರು ಬಾರಿ ಎಂಬಂತೆ  ಮೂರೂ ದಿನವೂ ವಿಶೇಷ ಸಸ್ಯಾಹಾರ ಮತ್ತು ಮಾಂಸಾಹಾರ ಅಡುಗೆ ಸಿದ್ಧವಾಗುತ್ತಿದೆ.

ಬೆಂಗಳೂರಿನ ಸೋನಾ ಕೇಟರಿಂಗ್ ನ ಮಾಲೀಕ ಸೋನಾ ಗಣೇಶ್ ನಾಯಕ್ ಅವರ 150 ಸಿಬ್ಬಂದಿಗಳ ತಂಡವು ಭೋಜನ ತಯಾರು ಮಾಡುತ್ತಿದೆ.

Advertisement

ಬೆಳಗಿನ ಉಪಹಾರಕ್ಕೆ: ಮೂಡೆ ಸಾಂಬಾರ್, ಬನ್ಸ್, ದೋಸೆ, ಬಿಸ್ಕುಟ್ ಅಂಬಡೆ, ಪಲಾವ್ ಸೇರಿ ಹಲವು ಬಗೆಗಳ ತಿಂಡಿ ಮಾಡಲಾಗಿದೆ.

ಮಧ್ಯಾಹ್ನ ಊಟಕ್ಕೆ: ಕುಚ್ಚಲಕ್ಕಿ ಅನ್ನ, ಗಂಜಿ, ಚಿಕನ್ ಪುಳಿಮುಂಚಿ, ಕಬಾಬ್, ಮೀನು ಊಟ ಎಂದು  ಕರಾವಳಿ ಶೈಲಿಯ ಭೋಜನ ತಯಾರಾಗುತ್ತಿದ್ದು,  ಭೋಜನ ಪ್ರಿಯರ ಹೊಟ್ಟೆ ತಣಿಸಲಿದೆ.

ಒಂದು ಹೊತ್ತಿನ ಊಟಕ್ಕೆ ಐದು ಸಾವಿರ ಮೂಡೆ, ಹತ್ತು ಸಾವಿರ ಬಿಸ್ಕುಟ್ ಅಂಬಡೆ, 500 ಕೆಜಿ ಪಲಾವ್ ಮಾಡಲಾಗಿದ್ದರೆ, 1000 ಕೆಜಿ ಚಿಕನ್, 5000 ಬಂಗುಡೆ ಮೀನು, ಒಂದು ಟನ್‌ ಕುಚ್ಚಲಕ್ಕಿ ಬಳಸಲಾಗುತ್ತಿದೆ.

ವಿಶೇಷ ಏನೆಂದರೆ ಬಾಲಿವುಡ್ ಸೆಲೆಬ್ರಿಟಿಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಇಟಲಿಯಲ್ಲಿ ನಡೆದ ಮದುವೆಯಲ್ಲಿ ವಿಶೇಷ ಅಡುಗೆ ತಯಾರು ಮಾಡಿದ್ದು ಇದೆ ಬಾಣಸಿಗರ ತಂಡ.

Advertisement
Tags :
LatestNewsNewsKannadaಅರಮನೆ ಮೈದಾನಓಟದ ಸ್ಪರ್ಧೆಕಂಬಳಕರಾವಳಿಕೋಣ
Advertisement
Next Article