ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬೆಂಗಳೂರು ಕಂಬಳ: ಕನ್ನಡ ಸ್ವಲ್ಪ ಸ್ವಲ್ಪ ಬರ್ತದೆ ಎಂದ ಪೂಜಾ ಹೆಗ್ಡೆ

ಕಂಬಳ ಸ್ಥಳಕ್ಕೆ ನಟ ನಟಿಯರು ತಂಡೋಪತಂಡವಾಗಿ ಭೇಟಿ ನೀಡಿದ್ದಾರೆ. ನಟ ರಕ್ಷಿತ್ ಶೆಟ್ಟಿ, ಉಪೇಂದ್ರ, ಪೂಜಾ ಹೆಗ್ಡೆ, ರಮೇಶ್ ಅರವಿಂದ್, ಮುಖ್ಯಮಂತ್ರಿ ಚಂದ್ರು, ಬೃಂದಾ ಆಚಾರ್ಯ ಕಂಬಳ ಕಂಡು ಪುಳಕಿತರಾದರಲ್ಲದೇ ನೆರೆದ ಯುವಕರಿಗೆ ಹೊಸ ಹುಮ್ಮಸ್ಸು ನೀಡಿದರು.
08:38 PM Nov 26, 2023 IST | Ashika S

ಬೆಂಗಳೂರು:  ಕಂಬಳ ಸ್ಥಳಕ್ಕೆ ನಟ ನಟಿಯರು ತಂಡೋಪತಂಡವಾಗಿ ಭೇಟಿ ನೀಡಿದ್ದಾರೆ. ನಟ ರಕ್ಷಿತ್ ಶೆಟ್ಟಿ, ಉಪೇಂದ್ರ, ಪೂಜಾ ಹೆಗ್ಡೆ, ರಮೇಶ್ ಅರವಿಂದ್, ಮುಖ್ಯಮಂತ್ರಿ ಚಂದ್ರು, ಬೃಂದಾ ಆಚಾರ್ಯ ಕಂಬಳ ಕಂಡು ಪುಳಕಿತರಾದರಲ್ಲದೇ ನೆರೆದ ಯುವಕರಿಗೆ ಹೊಸ ಹುಮ್ಮಸ್ಸು ನೀಡಿದರು.

Advertisement

ಬೆಂಗಳೂರು ಕಂಬಳ ಕೂಟದಲ್ಲಿ 178 ಜೋಡಿ ಕೋಣಗಳು ಭಾಗಿಯಾಗಿದ್ದವು. ‘ಕಾಂತಾರ’ ಚಿತ್ರದಲ್ಲಿ ಸಿನಿ ಪ್ರಿಯರ ಮನಸ್ಸು ಗೆದ್ದಿದ್ದ ಕೋಣಗಳು ಜನರ ಮನಸು ಗೆಲ್ಲುವುದರ ಜೊತೆ ಜೊತೆಗೆ ಕರಾವಳಿಯ ವೈಭವವನ್ನ ಅನಾವರಣ ಮಾಡೋ ಮೂಲಕ ಚಿನ್ನದ ಪದಕವನ್ನ ಸಹ ಪಡೆದಕೊಂಡಿದೆ.

ಕಂಬಳ ಕಾರ್ಯಕ್ರಮ ಸ್ಥಳಕ್ಕೆ ಭೇಟಿ ನೀಡಿದ ನಟಿ ಪೂಜಾ ಊಟ ಆಯ್ತಾ ಎಂದು ಮೊದಲಿಗೆ ಕನ್ನಡದಲ್ಲಿ ಕೇಳಿದ್ದಾರೆ. ನಂತರ ನಂತರ ತುಳುವಿನಲ್ಲಿ ಮಾತನಾಡಬೇಕೇ ಎಂದು ಪ್ರಶ್ನಿಸಿದ್ದಾರೆ. ಆ ವೇಳೆ ಹೋ ಎಂದು ಯುವಕರು ಹರ್ಷೋದ್ಗಾರ ಮಾಡಿದ್ದಾರೆ. ನಂತರ ಕಾರ್ಯಕ್ರಮ ಈ ಕಂಬಳ ರಾಜ್ಯ ಮಟ್ಟದಿಂದ ಜಗದಗಲ ಹರಡಬೇಕು ಎಂದು ಹೇಳಿದರು.

Advertisement

ಅಲ್ಲದೆ ಮುಂದಿನ ವರ್ಷ ಬರಬೇಕೆ ಎಂದು ತುಳುವಿನಲ್ಲಿ ಪ್ರಶ್ನಿಸಿದರು. ಆಗ ಜನರು ಮತ್ತೊಮ್ಮೆ ಹೋ ಎಂದು ಜೋರಾಗಿ ಉದ್ಘಾರ ಹೊರಡಿಸಿದ್ದಾರೆ. ನಂತರ ಪೂಜಾ ಹೀಗೆ ಹೇಳಿದ್ದು ನಾನು ಬರುತ್ತೇನೆ ಆದರೆ ಮುಂದಿನ ವರ್ಷ ಇದಕ್ಕಿಂತ ದೊಡ್ಡ ಕಾರ್ಯಕ್ರಮ ಆಯೋಜಿಸಬೇಕು ಎಂದಿದ್ದಾರೆ. ಅಲ್ಲದೆ ನನಗೆ ಕನ್ನಡ ಸ್ವಲ್ಪ ಸ್ವಲ್ಪ ಬರ್ತದೆ. ಕಲಿತಾ ಇದೇನೆ ಎಂದು ತಮ್ಮ ಕನ್ನಡ ಭಾಷೆಯ ಮೇಲಿನ ಜ್ಞಾನವನ್ನು ಹೊರಹಾಕಿ ವೇದಿಕೆಯಿಂದ ಹೊರಟಿದ್ದಾರೆ.

Advertisement
Tags :
LatetsNewsNewsKannadaಉಪೇಂದ್ರಕಂಬಳಪೂಜಾ ಹೆಗ್ಡೆರಕ್ಷಿತ್ ಶೆಟ್ಟಿ
Advertisement
Next Article