ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಹಾವುಗಳ ರಕ್ಷಣೆಗೆ ಸಹಾಯವಾಣಿ ಬಿಡುಗಡೆ ಮಾಡಿದ ಬೆಂಗಳೂರು ಮಹಾನಗರ ಪಾಲಿಕೆ

ಹಾವುಗಳ ರಕ್ಷಣೆಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸಹಾಯವಾಣಿಯನ್ನು ಬಿಡುಗಡೆ ಮಾಡಿದೆ. ಈ ಕುರಿತು ಡಿಐಪಿಆರ್‌ ಕರ್ನಾಟಕ ಎಕ್ಸ್‌ ಖಾತೆಯಲ್ಲಿ ಮಾಹಿತಿಯನ್ನೂ ಹಂಚಿಕೊಂಡಿದೆ.
05:01 PM May 16, 2024 IST | Chaitra Kulal

ಬೆಂಗಳೂರು: ಹಾವುಗಳ ರಕ್ಷಣೆಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸಹಾಯವಾಣಿಯನ್ನು ಬಿಡುಗಡೆ ಮಾಡಿದೆ. ಈ ಕುರಿತು ಡಿಐಪಿಆರ್‌ ಕರ್ನಾಟಕ ಎಕ್ಸ್‌ ಖಾತೆಯಲ್ಲಿ ಮಾಹಿತಿಯನ್ನೂ ಹಂಚಿಕೊಂಡಿದೆ.

Advertisement

ಮೇ ತಿಂಗಳು ಉರಗಗಳ ಸಂತಾನೋತ್ಪತ್ತಿ ಸಮಯ. ಮುಖ್ಯವಾಗಿ ಸರ್ಪಗಳ ಮೊಟ್ಟೆಗಳು ಒಡೆದು ಮರಿಗಳು ಹೊರಬರುವ ಕಾಲವಾಗಿದೆ. ಈ ಸಮಯದಲ್ಲಿ ಹೆಚ್ಚು ಹಾವುಗಳು ಕಾಣಸಿಗುತ್ತದೆ. ಗಾಬರಿಗೊಳ್ಳದಿರಿ ಹಾಗೂ ಅದನ್ನು ಬಡಿದು ಕೊಲ್ಲದಿರಿ. ಹಾವುಗಳ ರಕ್ಷಣೆಗಾಗಿ ಬಿಬಿಎಂಪಿ ಸಹಾಯವಾಣಿ 9902794711 ಗೆ ಕರೆ ಮಾಡಿ ಎಂದು ಮಾಹಿತಿ ನೀಡಿದೆ.

1972ರ ವನ್ಯಜೀವಿ ಸಂರಕ್ಷಣೆ ಕಾಯ್ದೆ ಅನ್ವಯ ಹಾವುಗಳನ್ನು ಕೊಲ್ಲುವುದು, ಸ್ಥಳಾಂತರ ಮಾಡುವುದು, ಓಡಿಸುವುದು, ಸೆರೆ ಹಿಡಿಯುವುದು, ಬಲೆಗೆ ಬೀಳಿಸುವುದು, ದೇಹದ ಅಂಗಗಳನ್ನು ತೆಗೆಯುವುದು, ಮೊಟ್ಟೆಯ ಗೂಡು ನಾಶ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಮನುಷ್ಯ-ಹಾವುಗಳ ಸಂಘರ್ಷ ತಪ್ಪಿಸಲು ಅರಣ್ಯ ಇಲಾಖೆ ಅರಿವು ಕಾರ‍್ಯಕ್ರಮ ಜಾರಿಗೆ ತಂದಿದೆ.

Advertisement

Advertisement
Tags :
BANGALOREHelplineLatestNewsMahanagara CorporationNewsKarnatakasnake
Advertisement
Next Article