For the best experience, open
https://m.newskannada.com
on your mobile browser.
Advertisement

ಆರ್‌ಸಿಬಿ vs ಸಿಎಸ್‌ಕೆ ಫ್ಯಾನ್ಸ್‌ ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ ಇದು ಪ್ಲೇ ಆಫ್ ದೃಷ್ಟಿಯಿಂದ ಮಹತ್ವದ ಪಂದ್ಯವಾಗಿದ್ದು, ಗೆಲುವಿಗಾಗಿ ಉಭಯ ತಂಡಗಳು ರೋಚಕ ಹಣಾಹಣಿ ನಡೆಸುವ ನಿರೀಕ್ಷೆ ಇದೆ.
08:02 PM May 16, 2024 IST | Chaitra Kulal
ಆರ್‌ಸಿಬಿ vs ಸಿಎಸ್‌ಕೆ ಫ್ಯಾನ್ಸ್‌ ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು

ಬೆಂಗಳೂರು: ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ ಇದು ಪ್ಲೇ ಆಫ್ ದೃಷ್ಟಿಯಿಂದ ಮಹತ್ವದ ಪಂದ್ಯವಾಗಿದ್ದು, ಗೆಲುವಿಗಾಗಿ ಉಭಯ ತಂಡಗಳು ರೋಚಕ ಹಣಾಹಣಿ ನಡೆಸುವ ನಿರೀಕ್ಷೆ ಇದೆ.

Advertisement

ವಿರಾಟ್ ಕೊಹ್ಲಿ, ಎಂಎಸ್ ಧೋನಿ ಮೈದಾನಕ್ಕೆ ಇಳಿಯುವ ಕಾರಣ ಪಂದ್ಯವನ್ನು ಮೈದಾನದಲ್ಲಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಇದೇ ಕಾರಣಕ್ಕೆ ಈ ಪಂದ್ಯದ ಟಿಕೆಟ್‌ಗಳು ಕೆಲವೇ ಕ್ಷಣಗಳಲ್ಲಿ ಮಾರಾಟವಾಗಿವೆ. ಆದರೆ, ಆನ್‌ಲೈನ್‌ ಟಿಕೆಟ್ ಮಾರಾಟದ ಹೆಸರಿನಲ್ಲಿ ವಂಚನೆ ಮಾಡುವ ಜಾಲ ಹುಟ್ಟಿಕೊಂಡಿದೆ.

ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಟಿಕೆಟ್ ಖರೀದಿ ಮಾಡಲು ಹೋಗಿ ವ್ಯಕ್ತಿಯೊಬ್ಬ ಬರೋಬ್ಬರಿ ₹3 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಈ ಬಗ್ಗೆ ಬೆಂಗಳೂರು ಪೊಲೀಸರು ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

Advertisement

ಹಗರಣಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಅಧಿಕೃತ ವೆಬ್‌ಸೈಟ್‌ ಮೂಲಕ ಮಾತ್ರ ಟಿಕೆಟ್ ಖರೀದಿಸಲು ಅಧಿಕಾರಿಗಳು ಕ್ರಿಕೆಟ್ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

Advertisement
Tags :
Advertisement