ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬೆಸೆಂಟ್ ಮಹಿಳಾ ಕಾಲೇಜು: ನ್ಯಾಕ್ ಪರಿವೀಕ್ಷಣಾ ತಂಡದ ಭೇಟಿ

Besant Women's College: NAAC inspection team visits
04:34 PM Dec 01, 2023 IST | Ramya Bolantoor

ಮಂಗಳೂರು: ನಗರದ ಪ್ರತಿಷ್ಟಿತ ಕಾಲೇಜುಗಳಲ್ಲಿ ಒಂದಾದ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ನ್ಯಾಕ್ ಪರಿವೀಕ್ಷಣಾ ತಂಡದ ಭೇಟಿಯು ನವೆಂಬರ್ 28 ಹಾಗೂ 29 ರಂದು ಜರುಗಿತು.

Advertisement

ನ್ಯಾಕ್ ಪರಿವೀಕ್ಷಣಾ ತಂಡದಲ್ಲಿ ಮಹಾತ್ಮಾಗಾಂಧಿ ಕಾಶಿ ವಿದ್ಯಾಪೀಠ, ವಾರಣಾಸಿಯ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ.ಕೃಪಾ ಶಂಕರ್, ಗುರುನಾನಕ್ ದೇವ್ ಮಹಾವಿದ್ಯಾಲಯ ಪಂಜಾಬ್ ನ ಸಮಾಜಶಾಸ್ತ್ರ ವಿಭಾಗದ ನಿಕಟಪೂರ್ವ ಮುಖ್ಯಸ್ಥರಾದ ಡಾ. ಪರಮ್ಜಿತ್ ಸಿಂಗ್ ಜಡ್ಜ್ ಹಾಗೂ ಸತಾಯೆ ಕಾಲೇಜು ಮಹಾರಾಷ್ಟ್ರದ ನಿಕಟಪೂರ್ವ ಪ್ರಾಂಶುಪಾಲೆ ಶ್ರೀಮತಿ ಕವಿತಾ ರೇಗ್ ಉಪಸ್ಥಿತರಿದ್ದರು.

ಎರಡು ದಿನಗಳ‌ ಸುದೀರ್ಘ ಪರಿವೀಕ್ಷಣೆಯ ಬಳಿಕ ಮಾತನಾಡಿದ ಡಾ. ಕೃಪಾ ಶಂಕರ್ ಮುಂಬರುವ ದಿನಗಳಲ್ಲಿ ಸಂಸ್ಥೆಯಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬೆಳಕು ಚೆಲ್ಲಿದರು ಹಾಗೂ ವಿದ್ಯಾರ್ಥಿಗಳ‌ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ಲಾಘಿಸಿದರು. ಬಳಿಕ ವೇದಿಕೆಯಲ್ಲಿ ಉಪಸ್ಥಿತರಿದ್ದ ನ್ಯಾಕ್ ಪರಿವೀಕ್ಷಣಾ ತಂಡದ ಸದಸ್ಯರೊಂದಿಗೆ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಪ್ರವೀಣ್ ಕುಮಾರ್ ಕೆ.ಸಿ ಹಾಗೂ ಆಂತರಿಕ ಗುಣಮಟ್ಟ ಖಾತರಿಕೋಶದ ಸಂಚಾಲಕರಾದ ಪ್ರೊ.ಸಯ್ಯದ್ ಖಾದರ್ ಅವರಿಗೆ ನ್ಯಾಕ್ ವರದಿಯನ್ನು ಹಸ್ತಾಂತರಿಸಿದರು.

Advertisement

ಈ ಕಾರ್ಯಕ್ರದಲ್ಲಿ ಡಬ್ಲ್ಯೂ.ಎನ್.ಇ.ಎಸ್ ನ ಅಧ್ಯಕ್ಷರಾದ ಮಣೇಲ್ ಅಣ್ಣಪ್ಪ ನಾಯಕ್, ಉಪಾಧ್ಯಕ್ಷೆ ಡಾ. ಮಂಜುಳಾ ಕೆ.ಟಿ, ನಿಕಟಪೂರ್ವ ಅಧ್ಯಕ್ಷರಾದ ಕುಡ್ಪಿ ಜಗದೀಶ್ ಶೆಣೈ, ಸಂಸ್ಥೆಯ ಆಡಳಿತಾಧಿಕಾರಿಯಾದ ಪ್ರೊ.ರಾಜಶೇಖರ್ ಹೆಬ್ಬಾರ್, ಕಾರ್ಯದರ್ಶಿ ಶ್ರೀ.ಜೀವನ್ ದಾಸ್, ಸಹಾಯಕ ಕಾರ್ಯದರ್ಶಿ ಡಾ॥ ಅರ್ಜುನ್ ನಾಯಕ್, ಸಂಧ್ಯಾ ಕಾಲೇಜಿನ ಸಂಚಾಲಕರಾದ ಶ್ರೀಯುತ ಸತೀಶ್ ಭಟ್, ಶ್ಯಾಮ್ ಸುಂದರ್ ಕಾಮತ್ ಹಾಗೂ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಆಂಗ್ಲ ವಿಭಾಗದ ಸಹ ಪ್ರಾಧ್ಯಾಪಕಿ ಮೀರಾ ಎಡ್ನಾ ಕೊಯಲ್ಲೋ ಕಾರ್ಯಕ್ರಮವನ್ನು ನಿರೂಪಿಸಿ, ವಾಣಿಜ್ಯ ವಿಭಾಗದ ಮುಖ್ಯಸ್ಥರಾಗದ ಪ್ರೊ.ಸಯ್ಯದ್ ಖಾದರ್ ವಂದಿಸಿದರು.

Advertisement
Tags :
LatestNewsNewsKannadawomenscollegeಬೆಸೆಂಟ್ಮಂಗಳೂರು
Advertisement
Next Article