ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬೇಸಿಗೆಯಲ್ಲಿ ನೀರಿನಿಂದ ಕಾಮಾಲೆ ಬರಬಹುದು ಎಚ್ಚರ

ಈ ಬಾರಿಯ ಬೇಸಿಗೆ ಕಠಿಣವಾಗಿರಲಿದೆ ಕಾರಣ ಬರದಿಂದ ಕುಡಿಯುವ ನೀರಿಗೂ ತಾತ್ವಾರವುಂಟಾಗಿದ್ದು, ಹೀಗಾಗಿ ನೀರು ಸೇವಿಸುವ ಮುನ್ನ ಎಚ್ಚರವಾಗಿರುವುದು ಬಹುಮುಖ್ಯವಾಗಿದೆ. ಬರದಿಂದಾಗಿ ನೀರು ಕಲುಷಿತಗೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು, ಆದಷ್ಟು ನೀರನ್ನು ಕುದಿಸಿ ಆರಿಸಿ ಕುಡಿಯುವುದು ಅಗತ್ಯವಾಗಿದೆ.
09:38 PM Mar 06, 2024 IST | Ashika S

ಈ ಬಾರಿಯ ಬೇಸಿಗೆ ಕಠಿಣವಾಗಿರಲಿದೆ ಕಾರಣ ಬರದಿಂದ ಕುಡಿಯುವ ನೀರಿಗೂ ತಾತ್ವಾರವುಂಟಾಗಿದ್ದು, ಹೀಗಾಗಿ ನೀರು ಸೇವಿಸುವ ಮುನ್ನ ಎಚ್ಚರವಾಗಿರುವುದು ಬಹುಮುಖ್ಯವಾಗಿದೆ. ಬರದಿಂದಾಗಿ ನೀರು ಕಲುಷಿತಗೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು, ಆದಷ್ಟು ನೀರನ್ನು ಕುದಿಸಿ ಆರಿಸಿ ಕುಡಿಯುವುದು ಅಗತ್ಯವಾಗಿದೆ.

Advertisement

ಬೇಸಿಗೆಯಲ್ಲಿ ಕಲುಷಿತ ನೀರಿನಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ  ವಹಿಸಬೇಕಾಗಿದೆ.  ಬಹಳಷ್ಟು ಜನಕ್ಕೆ ಕಾಮಾಲೆ ರೋಗದ ಚಿಹ್ನೆಗಳು ಗೊತ್ತಾಗುವುದಿಲ್ಲ ಹೀಗಾಗಿ ಅವರು ಯಾವುದೋ ಒಂದು ಮಾತ್ರೆ ಸೇವಿಸಿ ತೆಪ್ಪಗಾಗುತ್ತಾರೆ. ಉಲ್ಭಣಗೊಂಡಾಗ ಆಸ್ಪತ್ರೆಗೆ ತೆರಳುತ್ತಾರೆ. ಆದ್ದರಿಂದ ಮೊದಲಿಗೆ ರೋಗದ ಲಕ್ಷಣಗಳನ್ನು ತಿಳಿದುಕೊಂಡರೆ ಬಹುಬೇಗ ಚಿಕಿತ್ಸೆ ಪಡೆದು ವಾಸಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಜ್ವರ, ಚಳಿ, ತಲೆನೋವು, ಆಯಾಸ, ದೇಹ ಪೂರ್ಣ ನಿಶ್ಯಕ್ತಿ, ಕೀಲು ನೋವು ಇದರ ಜೊತೆಗೆ ವಾಕರಿಕೆ, ವಾಂತಿ, ಹಸಿವು  ಇಲ್ಲದಿರುವುದು, ಹಳದಿ ಬಣ್ಣದ ಮೂತ್ರ ಹೋಗುವುದು. ಕಣ್ಣು, ಚರ್ಮ, ಉಗುರುಗಳು ಹಳದಿಯಾಗಿರುವುದು ಕಂಡು ಬರುತ್ತದೆ. ಇದಿಷ್ಟನ್ನು ಗಮನಿಸಿದರೆ ಅದು  ಕಾಮಾಲೆ ರೋಗ ಎಂಬುದು ಮನದಟ್ಟಾಗಿ ಬಿಡುತ್ತದೆ.

Advertisement

ವೈದ್ಯರ ಪ್ರಕಾರ ಯಕೃತಿನ (ಲಿವರ್) ಸೋಂಕಿನಿಂದ  ಕಾಮಾಲೆ  ಬರುತ್ತದೆಯಂತೆ. ರೋಗದ ಸೋಂಕಿಗೆ ಹಲವಾರು ವೈರಾಣುಗಳು ಕಾರಣವಾಗಿದ್ದು, ಆ ಪೈಕಿ ಸೌಮ್ಯ ಸ್ವರೂಪದ ಎ ವೈರಾಣುವಿನಿಂದ ಹಿಡಿದು ತೀವ್ರ ಸ್ವರೂಪದ ಬಿ ವೈರಾಣು ಹಾಗೂ ಸಿ, ಡಿ, ಇ ಮತ್ತು ಜಿ ವೈರಾಣುವಿನಿಂದ ರೋಗಕ್ಕೆ ತುತ್ತಾಗಬಹುದು. ಕಾಮಾಲೆ ರೋಗವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಜನಸಾಂದ್ರತೆ ಜಾಸ್ತಿ ಇರುವಲ್ಲಿ ಮತ್ತು ವೈಯಕ್ತಿಕ ಹಾಗೂ ಪರಿಸರ ನೈರ್ಮಲ್ಯ ಕೊರತೆ ಇರುವ ಕಡೆ ಸಾಂಕ್ರಾಮಿಕ ರೋಗವಾಗಿ ಕಾಣಿಸಿಕೊಳ್ಳುತ್ತಿರುವುದು ಇತ್ತೀಚಿಗಿನ ದಿನಗಳಲ್ಲಿ ಕಂಡು ಬರುತ್ತಿದೆ.

ಈ ರೋಗ ಹರಡಲು  ವಯಸ್ಸಿನ ಮತ್ತು ಲಿಂಗ ತಾರತಮ್ಯವಿಲ್ಲ. ಆದರೆ ಹೆಚ್ಚಾಗಿ ಮಕ್ಕಳು ಹಾಗೂ ವಯಸ್ಕರಲ್ಲಿ ಕಂಡು  ಬರುತ್ತದೆ. ಈ ರೋಗದಿಂದ ನರಳುತ್ತಿರುವ ರೋಗಿಗಳು ಕಾಮಾಲೆ ರೋಗ ಲಕ್ಷಣಗಳು ಕಂಡುಬರುವ ಎರಡು ವಾರ ಮೊದಲು, ಕಂಡು ಬಂದ ಒಂದು ವಾರದವರೆಗೂ ರೋಗಾಣುವನ್ನು ಮಲದ ಮೂಲಕ ಹೊರಹಾಕುತ್ತಾರೆ. ಇಂತಹ ರೋಗಿಗಳ ಮಲವು ಕುಡಿಯುವ ನೀರು, ತಿನ್ನುವ ಆಹಾರವನ್ನು ಕಲುಷಿತಗೊಳಿಸಿದರೆ ಇಂತಹ ಆಹಾರವನ್ನು ಸೇವಿಸಿದ ಈ ರೋಗದ ವಿರುದ್ದ ನಿರೋಧಕ ಶಕ್ತಿ ಇಲ್ಲದ ವ್ಯಕ್ತಿಗಳಿಗೆ ಸಾಮಾನ್ಯವಾಗಿ 25 ರಿಂದ 35 ದಿನಗಳ ನಂತರ ರೋಗ ಲಕ್ಷಣಗಳು ಕಂಡು ಬರಬಹುದು. ಅಪರೂಪದಲ್ಲಿ ಕೆಲವೊಮ್ಮೆ ರಕ್ತದ ಮೂಲಕವೂ ಈ ಕಾಮಾಲೆ ರೋಗವು ಹರಡಬಲ್ಲದು. ಒಮ್ಮೆ ಈ ರೋಗದಿಂದ ನರಳಿದವರು ಶೇ. 95 ರಷ್ಟು ನಿರೋಧಕ ಶಕ್ತಿಯನ್ನು ಪಡೆಯುತ್ತಾರೆ. ಶೇ. 5 ರಷ್ಟು ಜನರು ಪುನಃ ಈ ರೋಗಕ್ಕೆ ತುತ್ತಾಗಬಹುದು.

ಕಾಮಾಲೆ ರೋಗಕ್ಕೆ ತುತ್ತಾದ ರೋಗಿಗಳು ತಜ್ಞ ವೈದ್ಯರಿಂದ ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆದು ವೈದ್ಯರ ಸಲಹೆ  ಸೂಚನೆಯನ್ನು ಪಾಲಿಸುವುದು ಅಗತ್ಯ. ರೋಗಿಗಳನ್ನು ಪ್ರತ್ಯೇಕವಾಗಿಸುವುದು ಹಾಗೂ ಉಪಯೋಗಿಸುವ ಪಾತ್ರೆ ಬಟ್ಟೆ ಬರೆಗಳನ್ನು ಕ್ರಿಮಿ ನಾಶಕದಿಂದ ಶುದ್ದೀಕರಿಸುವುದು, ಮಲ ಮೂತ್ರವನ್ನು ಕ್ರಿಮಿನಾಶಕ ಹಾಕಿ ವಿಲೇವಾರಿ ಮಾಡುವುದು. ಸುರಕ್ಷಿತ ನೀರಿನ ಸರಬರಾಜು, ಆಹಾರ ಮತ್ತು ಪ್ರತಿಯೊಬ್ಬರೂ ಶೌಚಾಲಯ ವ್ಯವಸ್ಥೆ ಬಳಸುವುದು ಅಗತ್ಯ.

ವೈಯಕ್ತಿಕ ನೈರ್ಮಲ್ಯ ಪಾಲನೆ, ಮಲ ಮೂತ್ರ ವಿಸರ್ಜನೆಗೆ ಹೋಗಿ ಬಂದಾಗ ಸಾಬೂನಿನಿಂದ ಕೈಕಾಲು  ತೊಳೆಯುವುದು, ಆಹಾರ ಪಾನೀಯ ಸ್ವೀಕರಿಸುವ ಮೊದಲು ಕೈಕಾಲು ಮುಖ ತೊಳೆಯುವುದನ್ನು ಮಾಡಬೇಕು. ಶುದ್ದೀಕರಿಸಿದ ಸಿರೆಂಜ್ ಸೂಜಿ ಬಳಸುವುದು. ಸಾರ್ವಜನಿಕ ನೈರ್ಮಲ್ಯ ವ್ಯವಸ್ಥೆ ಪಾಲನೆ. ಮನೆಗಳಲ್ಲಿ, ಊಟ ಉಪಹಾರ ಮಂದಿರಗಳಲ್ಲಿ ಚೆನ್ನಾಗಿ ಕುದಿಸಿ ಆರಿಸಿದ ನೀರನ್ನೇ ಉಪಯೋಗಿಸುವುದು. ಸಾರ್ವಜನಿಕ ಸ್ಥಳಗಳಲ್ಲಿ ತೆರೆದಿಟ್ಟ ಪಾನೀಯ ಹಾಗೂ ಹಣ್ಣು ಹಂಪಲು, ತರಕಾರಿಗಳನ್ನು ಉಪಯೋಗಿಸಬಾರದು. ಕೊಳೆತ ಆಹಾರ, ಮೀನು, ಮಾಂಸ, ಐಸ್‌ಕ್ರೀಂ, ಶೀತಲೀಕರಿಸಿದ ಆಹಾರ ಇತ್ಯಾದಿಗಳನ್ನು ಉಪಯೋಗಿಸಬಾರದು. ಸಾರ್ವಜನಿಕ ನೀರು ಸರಬರಾಜು ವ್ಯವಸ್ಥೆಯಲ್ಲಿ ಸೂಪರ್ ಕ್ಲೋರಿನೇಶನ್ ಮಾಡುವುದು ಅಗತ್ಯವಾಗಿದೆ.

Advertisement
Tags :
HELTHYLatetsNewsNewsKannadaನೀರು
Advertisement
Next Article