For the best experience, open
https://m.newskannada.com
on your mobile browser.
Advertisement

ಮದುವೆಯಾದ ನಾಲ್ಕೇ ವರ್ಷಕ್ಕೆ ವಿಚ್ಛೇದನ ಪಡೆದುಕೊಂಡ ಯಶ್‌ ಹೀರೋಯಿನ್‌!

ಸಿನಿಮಾ ರಂಗದಲ್ಲಿ ಮತ್ತೊಂದು ವಿಚ್ಛೇದನ ಖಚಿತವಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.
10:37 PM May 07, 2024 IST | Ashitha S
ಮದುವೆಯಾದ ನಾಲ್ಕೇ ವರ್ಷಕ್ಕೆ ವಿಚ್ಛೇದನ ಪಡೆದುಕೊಂಡ ಯಶ್‌ ಹೀರೋಯಿನ್‌

ಕೇರಳ: ಸಿನಿಮಾ ರಂಗದಲ್ಲಿ ಮತ್ತೊಂದು ವಿಚ್ಛೇದನ ಖಚಿತವಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.

Advertisement

ಹೌದು, ಯಶ್‌ ಅಭಿನಯದ ಮೊದಲಾಸಲ ಸಿನಿಮಾದ ಮೂಲಕ ಕನ್ನಡ ಸಿನಿರಸಿಕರಿಗೆ ಪರಿಚಯವಾಗಿದ್ದ ಮುದ್ದುಮುಖದ ಬೆಡಗಿ ಈ ಕುರಿತಾಗಿ ಇನ್ಸ್‌ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಪತಿಯಿಂದ ಬೇರೆಯಾಗಿರುವುದನ್ನು ನಟಿ ಭಾಮಾ ಖಚಿತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಮಲಯಾಳಿಗಳ ನೆಚ್ಚಿನ ನಟಿ ಭಾಮಾ ಅವರು ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ನಾನು ಸಿಂಗಲ್ ಮದರ್ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

ಭಾಮಾ ಮತ್ತು ಅರುಣ್ ಜಗದೀಶ್ 2020ರಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಮದುವೆಯ ನಂತರ ಭಾಮಾ ಚಿತ್ರರಂಗದಿಂದ ದೂರವೇ ಉಳಿದಿದ್ದರು.

ಇದಕ್ಕೂ ಮುನ್ನ ಭಾಮಾ ತನ್ನ ಪತಿಯೊಂದಿಗೆ ಮಗಳ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಭಾಮಾ ಇತ್ತೀಚೆಗೆ ಅಷ್ಟೊಂದು ಚಿತ್ರಗಳನ್ನು ಹಂಚಿಕೊಂಡಿರಲಿಲ್ಲ.

ತನ್ನ ಪತಿಯ ಚಿತ್ರಗಳನ್ನು ತೆಗೆದುಹಾಕಿದ ನಂತರ, ನಟಿ ತನ್ನ ಹೆಸರನ್ನು ಭಾಮಾ ಅರುಣ್‌ರಿಂದ, ಭಾಮಾ ಎಂದು ಬದಲಾಯಿಸಿದ್ದರು. "ನಾನು ಸಿಂಗಲ್‌ ಮದರ್‌ ಆಗುವವರೆಗೂ ನಾನು ಇಷ್ಟು ಬಲಶಾಲಿ ಎಂದು ನನಗೆ ತಿಳಿದಿರಲಿಲ್ಲ. "ಬಲಶಾಲಿಯಾಗಿರುವುದು ನನಗೆ ಮತ್ತು ನನ್ನ ಮಗಳಿಗೆ ಇರುವ ಒಂದೇ ದಾರಿ" ಎಂದು ಮಗುವಿನೊಂದಿಗೆ ಪೋಸ್ಟ್‌ನಲ್ಲಿ ಭಾಮಾ ಬರೆದುಕೊಂಡಿದ್ದಾರೆ.

ಆದರೆ ಭಾಮಾ ಅಧಿಕೃತವಾಗಿ ಪತಿಯಿಂದ ಬೇರ್ಪಟ್ಟಿದ್ದಾರೆಯೇ ಎಂಬುದನ್ನು ಪೋಸ್ಟ್ ಸ್ಪಷ್ಟಪಡಿಸಿಲ್ಲ. ಭಾಮಾ ಕುರುಪ್‌ ಅವರ ಹುಟ್ಟೂರು ಕೊಟ್ಟಾಯಂನಲ್ಲಿ ಅದ್ದೂರಿಯಾಗಿ ವಿವಾಹ ಸಮಾರಂಭ ನೆರವೇರಿತ್ತು. ಆದರೆ, ನಾಲ್ಕೇ ವರ್ಷಗಳಲ್ಲಿ ಮದುವೆ ಮುರಿದುಬಿದ್ದಿದೆ ಎಂದು ಕೆಲ ಮೂಲಗಳು ವರದಿ ಮಾಡಿವೆ.

Advertisement
Tags :
Advertisement