ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪ.ಬಂಗಾಳದಲ್ಲಿ ರಾಹುಲ್ ಗಾಂಧಿ ಸಭೆಗೆ ಅನುಮತಿ ಇಲ್ಲ

ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ದಿನಕ್ಕೊಂದು ಕಂಟಕ ಉಂಟಾಗಿದೆ. ಅಸ್ಸಾಂನಲ್ಲಿ ಈ ಯಾತ್ರೆಯನ್ನು ಯಶಸ್ವಿಯಾಗಿ ಮುಂದುವರಿಸಲು ಸಾಧ್ಯವಾಗಿಲ್ಲ. ಇದೀಗ ಅಸ್ಸಾಂನಿಂದ ಪಶ್ಚಿಮ ಬಂಗಾಳಕ್ಕೆ ನ್ಯಾಯ್ ಯಾತ್ರೆ ಬಂದಿದೆ. ಇದೀಗ ಅಲ್ಲಿಯೂ ಸಮಸ್ಯೆ ಎದುರಾಗಿದೆ. ಯಾತ್ರೆಯ ಎರಡನೇ ದಿನ ನಡೆಸಬೇಕಿದ್ದ ಸಾರ್ವಜನಿಕ ಸಭೆಯನ್ನು ರದ್ದುಗೊಳಿಸಬೇಕಾಗಿದೆ. ಈ ಸಭೆಗೆ ಅಲ್ಲಿನ ಪೊಲೀಸರು ಅನುಮತಿ ನೀಡುತ್ತಿಲ್ಲ ಎಂದು ಕಾಂಗ್ರೆಸ್​​ ಆರೋಪಿಸಿದೆ.
03:54 PM Jan 26, 2024 IST | Ashitha S

ದೆಹಲಿ: ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ದಿನಕ್ಕೊಂದು ಕಂಟಕ ಉಂಟಾಗಿದೆ. ಅಸ್ಸಾಂನಲ್ಲಿ ಈ ಯಾತ್ರೆಯನ್ನು ಯಶಸ್ವಿಯಾಗಿ ಮುಂದುವರಿಸಲು ಸಾಧ್ಯವಾಗಿಲ್ಲ. ಇದೀಗ ಅಸ್ಸಾಂನಿಂದ ಪಶ್ಚಿಮ ಬಂಗಾಳಕ್ಕೆ ನ್ಯಾಯ್ ಯಾತ್ರೆ ಬಂದಿದೆ. ಇದೀಗ ಅಲ್ಲಿಯೂ ಸಮಸ್ಯೆ ಎದುರಾಗಿದೆ. ಯಾತ್ರೆಯ ಎರಡನೇ ದಿನ ನಡೆಸಬೇಕಿದ್ದ ಸಾರ್ವಜನಿಕ ಸಭೆಯನ್ನು ರದ್ದುಗೊಳಿಸಬೇಕಾಗಿದೆ. ಈ ಸಭೆಗೆ ಅಲ್ಲಿನ ಪೊಲೀಸರು ಅನುಮತಿ ನೀಡುತ್ತಿಲ್ಲ ಎಂದು ಕಾಂಗ್ರೆಸ್​​ ಆರೋಪಿಸಿದೆ.

Advertisement

ಸಿಲಿಗುರಿಯಲ್ಲಿ ರಾಹುಲ್​​ ಗಾಂಧಿ ಅವರು ಎರಡು ಸಭೆಗಳನ್ನು ನಡೆಸಬೇಕಿತ್ತು. ಆದರೆ ಪಶ್ಚಿಮ ಬಂಗಾಳ ಪೊಲೀಸರು, ಪೊಲೀಸ್ ಪರೀಕ್ಷೆ ನಡೆಯುತ್ತಿದೆ, ಆ ಕಾರಣಕ್ಕೆ ಸಭೆಗೆ ಅವಕಾಶವಿಲ್ಲ ಎಂದಿದ್ದಾರೆ. ಇದರಿಂದ ಸಭೆ ರದ್ದಾಗಿದೆ ಎಂದು ಕಾಂಗ್ರೆಸ್​​​ ನಾಯಕ ಅಧೀರ್ ಚೌಧರಿ ಹೇಳಿದ್ದಾರೆ. ಸಭೆ ರದ್ದಾಗಿದ್ದರು, ಯಾತ್ರೆ ಮಾತ್ರ ಈಗಾಗಲೇ ನಿಗದಿ ಮಾಡಿರುವ ಮಾರ್ಗದಲ್ಲಿಯೇ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಇನ್ನು ಜ.27ರಿಂದ ನ್ಯಾಯ ಯಾತ್ರೆ ದೆಹಲಿಯಿಂದ ಆರಂಭವಾಗಲಿದೆ. ಈ ಯಾತ್ರೆಯಲ್ಲೂ ರಾಹುಲ್​​​ ಗಾಂಧಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಗುಲಾಂ ಮಿರ್ ಹೇಳಿದ್ದಾರೆ.

Advertisement

Advertisement
Tags :
indiaLatestNewsNewsKannadaಪ.ಬಂಗಾಳಬೆಂಗಳೂರುರಾಹುಲ್ ಗಾಂಧಿಸಭೆ
Advertisement
Next Article