For the best experience, open
https://m.newskannada.com
on your mobile browser.
Advertisement

ʼಆರ್​ಸಿಬಿʼ ತಂಡವನ್ನು ಬೇರೆಯವರಿಗೆ ಮಾರಿಬಿಡಿ ಎಂದ ಟೆನಿಸ್​ ದಿಗ್ಗಜ

ಕನ್ನಡಿಗರ ನೆಚ್ಚಿನ ತಂಡ ಎನಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಶೋಚನೀಯ ಪ್ರದರ್ಶನ ಕಂಡು ಭಾರತದ ಟೆನಿಸ್​ ದಿಗ್ಗಜ ಮಹೇಶ್‌ ಭೂಪತಿ ಬೇಸರ ವ್ಯಕ್ತಪಡಿಸಿದ್ದು, ದಯವಿಟ್ಟು ತಂಡವನ್ನು ಹೊಸ ಮಾಲಿಕರಿಗೆ ಮಾರಿ ಬಿಡಿ ಎಂದು ಹೇಳಿದ್ದಾರೆ.
10:28 AM Apr 16, 2024 IST | Ashitha S
ʼಆರ್​ಸಿಬಿʼ ತಂಡವನ್ನು ಬೇರೆಯವರಿಗೆ ಮಾರಿಬಿಡಿ ಎಂದ ಟೆನಿಸ್​ ದಿಗ್ಗಜ

ಬೆಂಗಳೂರು: ಕನ್ನಡಿಗರ ನೆಚ್ಚಿನ ತಂಡ ಎನಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಶೋಚನೀಯ ಪ್ರದರ್ಶನ ಕಂಡು ಭಾರತದ ಟೆನಿಸ್​ ದಿಗ್ಗಜ ಮಹೇಶ್‌ ಭೂಪತಿ ಬೇಸರ ವ್ಯಕ್ತಪಡಿಸಿದ್ದು, ದಯವಿಟ್ಟು ತಂಡವನ್ನು ಹೊಸ ಮಾಲಿಕರಿಗೆ ಮಾರಿ ಬಿಡಿ ಎಂದು ಹೇಳಿದ್ದಾರೆ.

Advertisement

ʼಕ್ರೀಡೆ, ಐಪಿಎಲ್, ಅಭಿಮಾನಿಗಳು ಮತ್ತು ಆಟಗಾರರ ಸಲುವಾಗಿ ಬಿಸಿಸಿಐ ಇತರ ತಂಡಗಳು ಮಾಡಿದ ರೀತಿಯಲ್ಲಿ ಕ್ರೀಡಾ ಫ್ರಾಂಚೈಸಿಯನ್ನು ನಿರ್ಮಿಸಲು ಕಾಳಜಿವಹಿಸುವ ಹೊಸ ಮಾಲೀಕರಿಗೆ ಆರ್​ಸಿಬಿ ತಂಡವನ್ನು ಮಾರಾಟ ಮಾಡುವ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆʼ ಎಂದು ಮಹೇಶ್‌ ಭೂಪತಿ ಟ್ವಿಟರ್​ ಎಕ್ಸ್​ನಲ್ಲಿ ಪೋಸ್ಟ್​ ಮಾಡಿ ಅಳಲು ತೋಡಿಕೊಂಡಿದ್ದಾರೆ.

ಕಳೆದ 16 ಆವೃತ್ತಿಯ ಐಪಿಎಲ್​ನಲ್ಲಿ ಆರ್​ಸಿಬಿ ತಂಡ ಕಪ್​ ಗೆಲ್ಲದಿದ್ದರೂ ಕೂಡ ಇಷ್ಟೊಂದು ಕಳಪೆ ಮಟ್ಟದ ಆಟವಾಡಿರಲಿಲ್ಲ. ಈ ಬಾರಿ ಆಡಿದ 7 ಪಂದ್ಯಗಳ ಪೈಕಿ ಕೇವಲ ಒಂದು ಪಂದ್ಯ ಮಾತ್ರ ಗೆಲುವು ಕಂಡಿದೆ. ದುರಾದೃಷ್ಟವಶಾತ್‌ ಈ ಬಾರಿ ತವರಿನಲ್ಲೇ ಅತ್ಯಧಿಕ ಪಂದ್ಯ ಸೋತ ಅವಮಾನಕ್ಕೆ ಸಿಲುಕಿದೆ.

Advertisement

Advertisement
Tags :
Advertisement