ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅಯೋಧ್ಯೆಯಲ್ಲಿ ಮನೆಗಾಗಿ ನಿವೇಶನ ಖರೀದಿಸಿದ 'ಬಿಗ್‌ ಬಿʼ

ಅಮಿತಾಬ್ ಬಚ್ಚನ್ ಅವರು ಮುಂಬೈ ಮೂಲದ ಡೆವಲಪರ್ ದಿ ಹೌಸ್ ಆಫ್ ಅಭಿನಂದನ್ ಲೋಧಾ ನಿಂದ ಅಯೋಧ್ಯೆಯಲ್ಲಿ 7-ಸ್ಟಾರ್ ಮಿಶ್ರ-ಬಳಕೆಯ ಎನ್‌ಕ್ಲೇವ್ ದಿ ಸರಯೂನಲ್ಲಿ ಪ್ಲಾಟ್ ಖರೀದಿಸಿದ್ದಾರೆ.
11:28 AM Jan 15, 2024 IST | Ashitha S

ಮುಂಬೈ: ಅಮಿತಾಬ್ ಬಚ್ಚನ್ ಅವರು ಮುಂಬೈ ಮೂಲದ ಡೆವಲಪರ್ ದಿ ಹೌಸ್ ಆಫ್ ಅಭಿನಂದನ್ ಲೋಧಾ ನಿಂದ ಅಯೋಧ್ಯೆಯಲ್ಲಿ 7-ಸ್ಟಾರ್ ಮಿಶ್ರ-ಬಳಕೆಯ ಎನ್‌ಕ್ಲೇವ್ ದಿ ಸರಯೂನಲ್ಲಿ ಪ್ಲಾಟ್ ಖರೀದಿಸಿದ್ದಾರೆ.

Advertisement

ಮುಂಬೈ ಮೂಲದ ಅಭಿನಂದನ್ ಲೋಧಾ ಅವರ ಡೆವಲಪರ್ ಹೋಮ್‌ನಿಂದ ಅಮಿತಾಭ್ ಪ್ಲಾಟ್ ಖರೀದಿಸಿದ್ದಾರೆ. 10,000 ಚದರ ಅಡಿ ವಿಸ್ತೀರ್ಣದ ಮನೆ ನಿರ್ಮಿಸಲು ಅವರು ಯೋಜಿಸಿದ್ದಾರೆ. ಈ ಮನೆಯ ಮೌಲ್ಯ 14.5 ಕೋಟಿ ರೂ. ಅಯೋಧ್ಯೆಯ ಸರಯೂ ನದಿಯ ಬಳಿ ನಿರ್ಮಿಸಲಾಗಿರುವ ಶ್ರೀರಾಮ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಇದೇ 22 ರಂದು ಲೋಕಾರ್ಪಣೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಮಿತಾಬ್ ಅಯೋಧ್ಯೆಯಲ್ಲಿ ಮನೆ ಖರೀದಿಗೆ ಆದ್ಯತೆ ಸಿಕ್ಕಿದೆ.

"ರಾಮನ ಜನ್ಮಭೂಮಿಯಾದ ಅಯೋಧ್ಯೆಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಅಯೋಧ್ಯಾ ನಗರವು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸ್ಥಾಪಿಸಿದೆ. ಜಾಗತಿಕ ಆಧ್ಯಾತ್ಮಿಕ ರಾಜಧಾನಿ ಅಯೋಧ್ಯೆಯಲ್ಲಿ ಮನೆ ನಿರ್ಮಿಸಲು ನಾನು ಎದುರು ನೋಡುತ್ತಿದ್ದೇನೆ" ಎಂದು ಅಮಿತಾಭ್ ಹೇಳಿದ್ದಾರೆ.

Advertisement

Advertisement
Tags :
LatestNewsNewsKannadaಅಮಿತಾಬ್ ಬಚ್ಚನ್‌ಅಯೋಧ್ಯೆನವದೆಹಲಿಬಾಲಿವುಡ್ ಸ್ಟಾರ್
Advertisement
Next Article