ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಜಿಯೋ-ಏರ್ಟೆಲ್ ಬಳಕೆದಾರರಿಗೆ ಶಾಕ್: 5G ಇಂಟರ್ನೆಟ್ ಅಂತ್ಯ?

5G ಇಂಟರ್ನೆಟ್ ಬಳಸುವ ಕೋಟ್ಯಂತರ ಭಾರತೀಯ ಗ್ರಾಹಕರು ಸದ್ಯದಲ್ಲೇ ದೊಡ್ಡ ಆಘಾತವನ್ನು ಎದುರಿಸಬೇಕಾಗುತ್ತದೆ. ಹೌದು. . ದೇಶದ ಎರಡು ದೊಡ್ಡ ಟೆಲಿಕಾಂ ಕಂಪನಿಗಳು ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ತಮ್ಮ ಅನಿಯಮಿತ 5G ಡೇಟಾ ಯೋಜನೆಗಳನ್ನು ಸ್ಥಗಿತಗೊಳಿಸಲು ಮುಂದಾಗಿದೆ. ಇದು 2024 ರ ದ್ವಿತೀಯಾರ್ಧದಲ್ಲಿ ಆಗಲಿದೆ. ನೀವು 5G ಅನ್ನು ಉಚಿತವಾಗಿ ಬಳಸುತ್ತಿದ್ದರೆ ಈ ಆಫರ್ ಸದ್ಯದಲ್ಲೇ ಕೊನೆಗೊಳ್ಳಲಿದೆ. ಆದಷ್ಟು ಬೇಗ ಜನರು 5G ಬಳಸಲು ಪಾವತಿಸಬೇಕಾಗುತ್ತದೆ ಎಂದು ವರದಿಯಾಗಿದೆ.
11:58 AM Jan 15, 2024 IST | Ashitha S

ದೆಹಲಿ: 5G ಇಂಟರ್ನೆಟ್ ಬಳಸುವ ಕೋಟ್ಯಂತರ ಭಾರತೀಯ ಗ್ರಾಹಕರು ಸದ್ಯದಲ್ಲೇ ದೊಡ್ಡ ಆಘಾತವನ್ನು ಎದುರಿಸಬೇಕಾಗುತ್ತದೆ. ಹೌದು. . ದೇಶದ ಎರಡು ದೊಡ್ಡ ಟೆಲಿಕಾಂ ಕಂಪನಿಗಳು ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ತಮ್ಮ ಅನಿಯಮಿತ 5G ಡೇಟಾ ಯೋಜನೆಗಳನ್ನು ಸ್ಥಗಿತಗೊಳಿಸಲು ಮುಂದಾಗಿದೆ. ಇದು 2024 ರ ದ್ವಿತೀಯಾರ್ಧದಲ್ಲಿ ಆಗಲಿದೆ.

Advertisement

ನೀವು 5G ಅನ್ನು ಉಚಿತವಾಗಿ ಬಳಸುತ್ತಿದ್ದರೆ ಈ ಆಫರ್ ಸದ್ಯದಲ್ಲೇ ಕೊನೆಗೊಳ್ಳಲಿದೆ. ಆದಷ್ಟು ಬೇಗ ಜನರು 5G ಬಳಸಲು ಪಾವತಿಸಬೇಕಾಗುತ್ತದೆ ಎಂದು ವರದಿಯಾಗಿದೆ.

2024 ರ ಅಂತ್ಯದ ವೇಳೆಗೆ ಭಾರತದಲ್ಲಿ 5G ಬಳಕೆದಾರರ ಸಂಖ್ಯೆ 20 ಕೋಟಿ ದಾಟುವ ನಿರೀಕ್ಷೆಯಿದೆ. ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌ನ 5G ಯೋಜನೆಗಳು ಅಸ್ತಿತ್ವದಲ್ಲಿರುವ 4G ಯೋಜನೆಗಳಿಗಿಂತ 5-10 ಪ್ರತಿಶತದಷ್ಟು ದುಬಾರಿಯಾಗಬಹುದು. ಇದಲ್ಲದೆ, ಎರಡೂ ಕಂಪನಿಗಳು 30-40 ಪ್ರತಿಶತ ಹೆಚ್ಚಿನ ಡೇಟಾವನ್ನು ನೀಡಬಹುದು, ಇದರಿಂದ ಜನರು 5G ಸೇವೆಯನ್ನು ಅಳವಡಿಸಿಕೊಳ್ಳಬಹುದು ಮತ್ತು ಮಾರುಕಟ್ಟೆ ಪಾಲು ಕೂಡ ಹೆಚ್ಚಾಗಬಹುದು ಎಂದು ಹೇಳಲಾಗ್ತಿದೆ.

Advertisement

ಭಾರತದಲ್ಲಿ 5G ಕ್ರಾಂತಿಯನ್ನು ತಂದ ಕೀರ್ತಿ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌ಗೆ ಸಲ್ಲುತ್ತದೆ. ಎರಡೂ ಕಂಪನಿಗಳು ದೇಶದಲ್ಲಿ 5G ಸೇವೆಯನ್ನು ಒದಗಿಸುವಲ್ಲಿ ಮುಂದಾಳತ್ವ ವಹಿಸಿವೆ. ದೇಶಾದ್ಯಂತ ಸುಮಾರು 12.5 ಕೋಟಿ 5ಜಿ ಬಳಕೆದಾರರಿದ್ದಾರೆ.

ಇನ್ನು ಹೊಸ 5ಜಿ ರೀಚಾರ್ಜ್ ಯೋಜನೆಗಳು ಪ್ರಸ್ತುತ 4G ರೀಚಾರ್ಜ್ ದರಗಳಿಗಿಂತ ಕನಿಷ್ಠ 5-10% ದುಬಾರಿಯಾಗಬಹುದು. ಹಾಗೆ ಮಾಡುವುದರಿಂದ ಟೆಲಿಕಾಂ ಕಂಪನಿಗಳು ಹಣಗಳಿಕೆಯನ್ನು ಹೆಚ್ಚಿಸುತ್ತದೆ ಮತ್ತು ಆದಾಯವನ್ನು ಹೆಚ್ಚಿಸುತ್ತದೆ ಎಂದು ವಿಶ್ಲೇಷಕರು ಉಲ್ಲೇಖಿಸಿದ್ದಾರೆ.

 

Advertisement
Tags :
5G ಇಂಟರ್ನೆಟ್indiaLatestNewsNewsKannadaಜಿಯೋ-ಏರ್ಟೆಲ್ನವದೆಹಲಿ
Advertisement
Next Article