ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ʼಬಿಲ್ ವಿಳಂಬ ಪಾವತಿʼ ಕುರಿತು ಬಿಗ್‌ ಅಪ್‌ಡೇಟ್ ಕೊಟ್ಟ ಸರ್ಕಾರ

ಇಂಧನ ಇಲಾಖೆಯ ಸಾಫ್ಟ್ ವೇರ್ ವ್ಯವಸ್ಥೆ ಉನ್ನತೀಕರಣ ಪ್ರಯುಕ್ತ ಸ್ಥಗಿತಗೊಂಡಿದ್ದ ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂ) ಆನ್ ಲೈನ್ ಬಿಲ್ ಪಾವತಿ ಸೇರಿ ವಿವಿಧ ಸೇವೆಗಳು ಪುನಾರಂಭಗೊಂಡಿವೆ.
08:11 AM Mar 23, 2024 IST | Ashitha S

ಬೆಂಗಳೂರು: ಇಂಧನ ಇಲಾಖೆಯ ಸಾಫ್ಟ್ ವೇರ್ ವ್ಯವಸ್ಥೆ ಉನ್ನತೀಕರಣ ಪ್ರಯುಕ್ತ ಸ್ಥಗಿತಗೊಂಡಿದ್ದ ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂ) ಆನ್ ಲೈನ್ ಬಿಲ್ ಪಾವತಿ ಸೇರಿ ವಿವಿಧ ಸೇವೆಗಳು ಪುನಾರಂಭಗೊಂಡಿವೆ.

Advertisement

ಸಾಫ್ಟ್ ವೇಲ್ ಅಪ್ಡೇಟ್ ಕಾರಣದಿಂದಾಗಿ ಎಸ್ಕಾಂ ಆನ್ ಲೈನ್ ಸೇವೆ ಸ್ಥಗಿತಗೊಂಡಿತ್ತು.

ಈ ಹಿನ್ನಲೆಯಲ್ಲಿ ವಿದ್ಯುತ್ ಗ್ರಾಹಕರು ಬಿಲ್ ಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ವಿಳಂಬ ವಿದ್ಯುತ್ ಬಿಲ್ ಪಾವತಿಗೆ ಬಡ್ಡಿ ವಿಧಿಸೋದಿಲ್ಲ ಎಂಬುದಾಗಿ ಎಸ್ಕಾಂ ಮಾಹಿತಿ ನೀಡಿದೆ.

Advertisement

ಈ ಕುರಿತಂತೆ ಇಂಧನ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣದ ಸಲುವಾಗಿ ಮಾರ್ಚ್ 10 ರಿಂದ 19ರವರೆಗೆ ಎಲ್ಲಾ 5 ಎಸ್ಕಾಂಗಳ ನಗರ ಪ್ರದೇಶಗಳ ಸ್ಥಗಿತಗೊಂಡಿದ್ದ ಆನ್ ಲೈನ್ ವಿದ್ಯುತ್ ಸೇವೆಗಳು ಇದೀಗ ಪುನಾರಂಭಗೊಂಡಿದ್ದು, ಈ ತಿಂಗಳ 30ರೊಳಗೆ ಎಲ್ಲಾ ಆನ್ ಲೈನ್ ಸೇವೆಗಳು ಯಥಾಸ್ಥಿತಿಗೆ ಬರಲಿವೆ ಎಂದು ತಿಳಿಸಿದೆ.

ಸಾಫ್ಟ್ ವೇರ್ ಉನ್ನತೀಕರಣ ಸಂದರ್ಭದಲ್ಲಿ ವಿದ್ಯುತ್ ಬಿಲ್ ವಿಳಂಬ ಪಾವತಿಗೆ ಬಡ್ಡಿ ವಿಧಿಸುವುದಿಲ್ಲ ಹಾಗೂ ಈ ಸಂದರ್ಭದಲ್ಲಿ ಬಿಲ್ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

Advertisement
Tags :
BJPCongressGOVERNMENTindiaKARNATAKALatestNewsNewsKannadaಬಿಲ್ಬೆಂಗಳೂರು
Advertisement
Next Article