ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬಿಗ್‍ಬಾಸ್ ಸ್ಪರ್ಧಿ ಡ್ರೋಣ್ ಪ್ರತಾಪ್‍ಗೆ ಸಂಕಷ್ಟ

ಬಿಗ್‍ಬಾಸ್ ಸ್ಪರ್ಧಿ ಡ್ರೋಣ್ ಪ್ರತಾಪ್‍ಗೆ ಸಂಕಷ್ಟ ಎದುರಾಗಿದೆ. ಕ್ವಾರಂಟೈನ್ ಕಹಾನಿ ಹೇಳಿಕೊಂಡು ಡ್ರೋನ್ ಪ್ರತಾಪ್ ಬಿಬಿಎಂಪಿ ನೋಡಲ್ ಅಧಿಕಾರಿ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ನೋಡಲ್ ಅಧಿಕಾರಿ ಆತ ಸುಳ್ಳುಹೇಳುತ್ತಿದ್ದಾನೆ.  ಇನ್ನೆರಡು ದಿನದಲ್ಲಿ ಕ್ಷಮೆಯಾಚನೆ ಮಾಡದೇ ಇದ್ರೇ ಆತನ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
12:16 PM Dec 04, 2023 IST | Ashitha S

ಬೆಂಗಳೂರು: ಬಿಗ್‍ಬಾಸ್ ಸ್ಪರ್ಧಿ ಡ್ರೋಣ್ ಪ್ರತಾಪ್‍ಗೆ ಸಂಕಷ್ಟ ಎದುರಾಗಿದೆ. ಕ್ವಾರಂಟೈನ್ ಕಹಾನಿ ಹೇಳಿಕೊಂಡು ಡ್ರೋನ್ ಪ್ರತಾಪ್ ಬಿಬಿಎಂಪಿ ನೋಡಲ್ ಅಧಿಕಾರಿ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ನೋಡಲ್ ಅಧಿಕಾರಿ ಆತ ಸುಳ್ಳುಹೇಳುತ್ತಿದ್ದಾನೆ.  ಇನ್ನೆರಡು ದಿನದಲ್ಲಿ ಕ್ಷಮೆಯಾಚನೆ ಮಾಡದೇ ಇದ್ರೇ ಆತನ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

ಕ್ವಾರಂಟೈನ್ ಸಮಯದಲ್ಲಿ ಅಧಿಕಾರಿಯೊಬ್ಬರು ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದರು. ಮೆಂಟಲಿ ಅನ್‍ಸ್ಟೇಬಲ್ ಅಂತಾ ಸಹಿ ಮಾಡುವಂತೆ ತಲೆತಲೆಗೆ ಹೊಡೆದು ಕಿರುಕುಳ ಕೊಟ್ಟರು. ಹೋಟೆಲ್‍ನಿಂದ ಕೆಳಗೆ ಬಂದ್ಮೇಲೆ ನನಗೆ ಏನೇನು ಮಾಡಿದ್ರೋ, ಅದನ್ನ ಸ್ವಲ್ಪ ಹೇಳಿದೆ. ಇವ್ನು ಹೇಗಿದ್ರೂ ಸುಳ್ಳು ಹೇಳ್ತಾನೆ. ಇವ್ನು ಹೇಳೋದೇ ಸುಳ್ಳು.. ನಂಬಬೇಡಿ ಎಂದು ಮಾಧ್ಯಮಗಳಿಗೆ ಹೇಳಿ ಕಳುಹಿಸಿದರು. ಕ್ವಾರಂಟೈನ್‍ನಲ್ಲಿ ಮಾನಸಿಕ ಹಿಂಸೆ ಕೊಟ್ರು, ಹುಚ್ಚ ಅಂತಾ ಪೇಪರ್ ಗೆ ಸಹಿಹಾಕು ಅಂತಾ ಹೇಳಿದ್ರು ಎಂದು ಡ್ರೋನ್ ಪ್ರತಾಪ್ ಆರೋಪ ಮಾಡಿದ್ದರು.

ಪ್ರತಾಪ್ ಕ್ವಾರಂಟೈನ್ ರೂಲ್ಸ್ ಉಲ್ಲಂಘನೆ ವಿರುದ್ಧ ನಾನೇ ಕೇಸ್ ದಾಖಲಿಸಿದ್ದೆ. ಕಾನೂನು ಪ್ರಕಾರವೇ ನಾನು ಕಾರ್ಯನಿರ್ವಹಿಸಿದ್ದೆ. ಇಡೀ ಆತನ ಕ್ವಾರಂಟೈನ್ ಪ್ರಕ್ರಿಯೆಯಲ್ಲಿ ನಾನೇ ನೋಡಲ್ ಅಧಿಕಾರಿಯಾಗಿ ನಿಗಾ ವಹಿಸಿದ್ದೆ. ಆದರೆ ಈತ ಹೇಳುತ್ತಿರುವ ಮಾತುಗಳಲ್ಲಿ ಯಾವುದೇ ಹುರುಳಿಲ್ಲ. ಆತನಿಗೆ ನಾನು ಯಾವುದೇ ಮಾನಸಿಕ ಹಿಂಸೆ ಕೊಟ್ಟಿಲ್ಲ. ಆತನ ತಲೆಯ ಮೇಲೆ ಹೊಡೆದಿಲ್ಲ. ಪ್ರತಾಪ್ ಮಹಾನ್ ಸುಳ್ಳುಗಾರ, ಈತ ಹೇಳುವ ಮಾತಿಗೆ ಒಂದೇ ಒಂದು ಸಾಕ್ಷ್ಯ ಒದಗಿಸಲಿ. ಆತನ ಆರೋಪ ನಿಜವಾಗಿದ್ದರೆ ನಾನು ರಾಜೀನಾಮೆ ಕೊಟ್ಟು ಹೊರಟು ಹೋಗುತ್ತೇನೆ ಎಂದು ಬಿಬಿಎಂಪಿ ನೋಡಲ್ ಅಧಿಕಾರಿ ಹೇಳಿದ್ದಾರೆ. ಪ್ರತಾಪ್ ತಂದೆ ಬಹಳ ಒಳ್ಳೆಯವರು. ಬೇಕಾದ್ರೇ ಅವರನ್ನು ಕೇಳಲಿ.

Advertisement

ಅಲ್ಲದೇ ಆತನನ್ನು ಒಳ್ಳೆ ಹೋಟೆಲ್‍ನಲ್ಲಿ ಇರಿಸಿ ಉತ್ತಮ ಊಟ ಕೊಟ್ಟು ಇರಿಸಿದ್ದೇವೆ. ಇನ್ನೆರಡು ದಿನದಲ್ಲಿ ಕ್ಷಮೆಯಾಚನೆ ಮಾಡದೇ ಇದ್ರೇ ಕಾನೂನು ಹೋರಾಟ ಮಾಡುತ್ತೇನೆ. ಬಿಗ್ ಬಾಸ್ ವೇದಿಕೆಯಲ್ಲಿ ಕ್ಷಮೆಯಾಚನೆ ಮಾಡದೆ ಇದ್ರೇ ಮಾನನಷ್ಟ ಮೊಕದ್ದಮೆ ಹಾಕ್ತೇನೆ ಅಂತ ವಾರ್ನಿಂಗ್ ಕೊಟ್ಟಿದ್ದಾರೆ.

Advertisement
Tags :
BBMPindiaKARNATAKALatestNewsSANDALWOODಡ್ರೋಣ್ ಪ್ರತಾಪ್‍ನವದೆಹಲಿಬೆಂಗಳೂರು
Advertisement
Next Article