For the best experience, open
https://m.newskannada.com
on your mobile browser.
Advertisement

ಬಿಗ್‌ಬಾಸ್‌ ವಿನ್ನರ್‌ ಎಲ್ವಿಶ್‌ ಯಾದವ್‌ ಬಂಧನ

ಯೂಟ್ಯೂಬರ್ ಹಾಗೂ ಬಿಗ್‌ ಬಾಸ್‌ ಒಟಿಟಿ ವಿನ್ನರ್‌ ಆಗಿರುವ ಎಲ್ವಿಶ್‌ ಯಾದವ್‌ನನ್ನು ನೋಯ್ಡಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಇದೀಗ  ಅವರನ್ನು ಬಂಧಿಸಲಾಗಿದೆ ಎನ್ನಲಾಗುತ್ತಿದೆ.
04:22 PM Mar 17, 2024 IST | Gayathri SG
ಬಿಗ್‌ಬಾಸ್‌ ವಿನ್ನರ್‌ ಎಲ್ವಿಶ್‌ ಯಾದವ್‌ ಬಂಧನ

ನವದೆಹಲಿ: ಯೂಟ್ಯೂಬರ್ ಹಾಗೂ ಬಿಗ್‌ ಬಾಸ್‌ ಒಟಿಟಿ ವಿನ್ನರ್‌ ಆಗಿರುವ ಎಲ್ವಿಶ್‌ ಯಾದವ್‌ನನ್ನು ನೋಯ್ಡಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಇದೀಗ  ಅವರನ್ನು ಬಂಧಿಸಲಾಗಿದೆ ಎನ್ನಲಾಗುತ್ತಿದೆ.

Advertisement

ಎಲ್ವಿಶ್‌ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ, ನೋಯ್ಡಾ ಪೊಲೀಸರು ಹಾವಿನ ವಿಷದೊಂದಿಗೆ 5 ಜನರನ್ನು ಬಂಧಿಸಿದ್ದರು. ಕಳೆದ ವರ್ಷ, ನೋಯ್ಡಾ ಪೊಲೀಸರು ಸೆಕ್ಟರ್ 39 ರಲ್ಲಿ ಈ ಪ್ರಕರಣದ ಕುರಿತು ಎಫ್‌ಐಆರ್ ದಾಖಲಿಸಿದ್ದರು, ಇಂದು ಎಲ್ವಿಶ್ ಯಾದವ್ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು. ಅದರ ಬೆನ್ನಲ್ಲಿಯೇ ಅವರನ್ನು ಬಂಧಿಸಲಾಗಿದೆ. ಸ್ವಲ್ಪ ಸಮಯದ ನಂತರ ಎಲ್ವಿಶ್ ಯಾದವ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

ಘಟನೆ ಹಿನ್ನೆಲೆ : ಕಳೆದ ವರ್ಷ ನವೆಂಬರ್ 8 ರಂದು ನೋಯ್ಡಾ ಪೊಲೀಸರು ರೇವ್ ಪಾರ್ಟಿಯಲ್ಲಿ ಹಾವಿನ ವಿಷವನ್ನು ಬಳಸಿದ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಯೂಟ್ಯೂಬರ್ ಎಲ್ವಿಶ್ ಯಾದವ್ ಕೂಡ ಈ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಪೊಲೀಸರು ಐವರನ್ನು ಬಂಧಿಸಿದ್ದರು. ಇದರಲ್ಲಿ ರಾಹುಲ್, ಟಿಟುನಾಥ್, ಜಯಕರನ್, ನಾರಾಯಣ್ ಮತ್ತು ರವಿನಾಥ್ ಸೇರಿದ್ದಾರೆ. ರಾಹುಲ್ ಹೆಸರಿನಲ್ಲಿ 20 ಎಂಎಲ್ ವಿಷ ಪತ್ತೆಯಾಗಿತ್ತು.

Advertisement

Advertisement
Tags :
Advertisement