ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅತಿದೊಡ್ಡ ಲೈಂಗಿಕ ಹಗರಣ ಬಯಲು: ಅತಿರಥರ ಹೆಸರು ಬಿಡುಗಡೆ

ಇಡೀ ಪ್ರಪಂಚವನ್ನೇ ಕಂಟ್ರೋಲ್ ಮಾಡಿದ್ದ ಅಮೆರಿಕಾದ ಅತಿರಥ ಮಹಾರಥರಿಗೆ ಅತಿದೊಡ್ಡ ಸಂಕಷ್ಟ ಎದುರಾಗಿದೆ. ಅಮೆರಿಕಾದಲ್ಲಿ ಅತಿದೊಡ್ಡ ಲೈಂಗಿಕ ಹಗರಣವೊಂದು ಬೆಳಕಿಗೆ ಬಂದಿದ್ದು ಡೋನಾಲ್ಡ್ ಟ್ರಂಪ್‌, ಬಿಲ್‌ ಕ್ಲಿಂಟನ್‌ ಹೀಗೆ ಹತ್ತಾರು ಅತಿರಥ ಮಹಾರಥರ ಹೆಸರು ಬಟಾ ಬಯಲಾಗಿದೆ.
03:21 PM Jan 04, 2024 IST | Ashitha S

ವಾಷಿಂಗ್ಟನ್‌: ಇಡೀ ಪ್ರಪಂಚವನ್ನೇ ಕಂಟ್ರೋಲ್ ಮಾಡಿದ್ದ ಅಮೆರಿಕಾದ ಅತಿರಥ ಮಹಾರಥರಿಗೆ ಅತಿದೊಡ್ಡ ಸಂಕಷ್ಟ ಎದುರಾಗಿದೆ. ಅಮೆರಿಕಾದಲ್ಲಿ ಅತಿದೊಡ್ಡ ಲೈಂಗಿಕ ಹಗರಣವೊಂದು ಬೆಳಕಿಗೆ ಬಂದಿದ್ದು ಡೋನಾಲ್ಡ್ ಟ್ರಂಪ್‌, ಬಿಲ್‌ ಕ್ಲಿಂಟನ್‌ ಹೀಗೆ ಹತ್ತಾರು ಅತಿರಥ ಮಹಾರಥರ ಹೆಸರು ಬಟಾ ಬಯಲಾಗಿದೆ.

Advertisement

ಅಮೆರಿಕಾದಲ್ಲಿ ಬೆಳಕಿಗೆ ಬಂದ ಈ ಲೈಂಗಿಕ ಹಗರಣದಲ್ಲಿ ಬೆಚ್ಚಿ ಬೀಳಿಸೋ ಅಂಶಗಳೇ ಬೆಳಕಿಗೆ ಬಂದಿದೆ. ಅಮೆರಿಕಾದ ಗಣ್ಯ ವ್ಯಕ್ತಿಗಳು ರಹಸ್ಯವಾಗಿ ಹೆಲಿಕಾಪ್ಟರ್‌ಗಳಲ್ಲಿ ದ್ವೀಪ ಪ್ರದೇಶಕ್ಕೆ ತೆರಳುತ್ತಿದ್ದರು. ಅಲ್ಲಿ ಹುಡುಗಿಯರ ಮೇಲೆ ಇವರು ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು ಎಂದು ವರದಿಯಾಗಿದೆ.

ಜೆಫ್ರಿ ಎಪಿಸ್ಟನ್ ಮಾಲೀಕತ್ವದ ದ್ವೀಪದಲ್ಲಿ ಈ ರೀತಿಯ ಲೈಂಗಿಕ ದೌರ್ಜನ್ಯದ ಹಗರಣಗಳು ನಡೆದಿದೆ ಎನ್ನಲಾಗಿದೆ. ಕೋರ್ಟ್‌ಗೆ ಈ ಬಗ್ಗೆ ಮಹತ್ವದ ದಾಖಲೆಗಳು ಸಲ್ಲಿಕೆಯಾಗಿದೆ. ಲೈಂಗಿಕ ಹಗರಣದಲ್ಲಿ ಅಮೆರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ಡೊನಾಲ್ಡ್ ಟ್ರಂಪ್‌, ಮೈಕಲ್ ಜಾಕ್ಸನ್ ಸೇರಿದಂತೆ ಖ್ಯಾತನಾಮರ ಹೆಸರುಗಳು ಸೇರಿದೆ.

Advertisement

ಇನ್ನು ಈ ಹಗರಣ ಬೆಳಕಿಗೆ ಬರಲು ಕಾರಣವಾಗಿರೋದು ಜೆಫ್ರಿ ಎಪಿಸ್ಟನ್‌ ಎಂಬಾತನಿಂದ. ಜೆಫ್ರಿ ಎಪಿಸ್ಟನ್ ಅಮೆರಿಕಾದ ದ್ವೀಪ ಪ್ರದೇಶಗಳ ಮಾಲೀಕನಾಗಿದ್ದ. ಈತನ ವಿಚಾರಣೆ ವೇಳೆ ಅಮೆರಿಕಾದ ಈ ಖ್ಯಾತನಾಮರ ಹೆಸರನ್ನು ಬಹಿರಂಗ ಪಡಿಸಿದ್ದಾನೆ ಎನ್ನಲಾಗಿದೆ.

ಇನ್ನು ಇನ್ನೊಂದು ವಿಚಾರವೆಂದರೆ ಜೆಫ್ರಿ ಎಪಿಸ್ಟನ್ ಅವರನ್ನು 2019ರಲ್ಲಿ ಅಮೆರಿಕಾದ ಪೊಲೀಸರು ಬಂಧಿಸಿ ಜೈಲಿನಲ್ಲಿಟ್ಟಿದ್ದರು. ಬಂಧನದ ಒಂದು ತಿಂಗಳ ಬಳಿಕ ಜೆಫ್ರಿ ಎಪಿಸ್ಟನ್ ನಿಗೂಢವಾಗಿ ಸಾವನ್ನಪ್ಪಿದ್ದಾನೆ. ಹಾಗಾಗಿ ಜೆಫ್ರಿ ಎಪಿಸ್ಟನ್ ಕುರಿತ ತನಿಖಾ ವರದಿ ಸದ್ಯ ಕೋರ್ಟ್‌ ಅಂಗಳದಲ್ಲಿದೆ ಎನ್ನಲಾಗ್ತಿದೆ.

Advertisement
Tags :
indiaNewsKannadaನವದೆಹಲಿಲೈಂಗಿಕ ಹಗರಣ
Advertisement
Next Article