ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬೈಕ್‌ ಅಪಘಾತ : ಮಹಿಳೆ ದಾರುಣ ಸಾವು, ಸವಾರ ಗಂಭೀರ

ಬೈಕ್‌ ಡಿವೈಡರ್‌ಗೆ ಹೊಡೆದ ಪರಿಣಾಮ ಮಹಿಳೆ ಸಾವನಪ್ಪಿದ್ದು ಸವಾರ ಗಂಭೀರ ಗಾಯಗೊಂಡಿದ್ದಾರೆ. ಈ ಘಟನೆ ನಗರದ ಹೊರವಲಯ ನಾಟೇಕಲ್‌ ನಲ್ಲಿ ನಡೆದಿದೆ. ನಿಧಿ (29) ಮೃತ ದುರ್ಧೈವಿ.
12:16 PM Mar 25, 2024 IST | Nisarga K
ಬೈಕ್‌ ಅಪಘಾತ : ಮಹಿಳೆ ದಾರುಣ ಸಾವು, ಸವಾರ ಗಂಭೀರ

ಮಂಗಳೂರು: ಬೈಕ್‌ ಡಿವೈಡರ್‌ಗೆ ಹೊಡೆದ ಪರಿಣಾಮ ಮಹಿಳೆ ಸಾವನಪ್ಪಿದ್ದು ಸವಾರ ಗಂಭೀರ ಗಾಯಗೊಂಡಿದ್ದಾರೆ. ಈ ಘಟನೆ ನಗರದ ಹೊರವಲಯ ನಾಟೇಕಲ್‌ ನಲ್ಲಿ ನಡೆದಿದೆ. ನಿಧಿ (29) ಮೃತ ದುರ್ಧೈವಿ.

Advertisement

ಬೋಂದೆಲ್‌ ನಿವಾಸಿ ದೀಕ್ಷಿತ್ ಎಂಬವರ ಪತ್ನಿ ಅಂದು ಮುಡಿಪುವಿನಲ್ಲಿ ಸಂಬಂಧಿಕರ ಗೃಹಪ್ರವೇಶಕ್ಕೆಂದು ಸಂಬಂಧಿಯಾಗಿರುವ ಯತೀಶ್ ದೇವಾಡಿಗ ಜೊತೆ ಹೋಗಿ ಹಿಂತಿರುಗುವ ವೇಳೆ ಈ ಘಟನೆ ಸಂಭವಿಸಿದೆ. ವೇಳೆ ಬೈಕ್ ಸವಾರನ ನಿಯಂತ್ರಣ ತಪ್ಪಿ ನಾಟೆಕಲ್ ಗ್ರೀನ್ ಗ್ರೌಂಡ್ ಸಮೀಪ ಡಿವೈಡರ್ ಗೆ ಬಡಿದಿದೆ. ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೂಡಲೇ ಆಸ್ಪತ್ರೆಗೆ ದಾಖಾಲಿಸಲಾಯಿತು ಆದರು ಮಹಿಳೆ ಚಿಕಿತ್ಸೆ ಫಲಿಸದೆ ಸಾವನಪ್ಪಿದ್ದಾರೆ. ಇನ್ನು ಯತೀಶ್‌ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯ ಭೀಕರ ದೃಶ್ಯ ಬೈಕ್‌ನ ಹಿಂಬದಿಯಲ್ಲಿ ಬರುತ್ತಿದ್ದ ಕಾರಿನ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Advertisement

Advertisement
Tags :
1 DIEDACCIDENTBIKEdividerLatestNewsmangaluruNewsKarnatakaSERIOUS
Advertisement
Next Article