For the best experience, open
https://m.newskannada.com
on your mobile browser.
Advertisement

ಹೆಲ್ಮೆಟ್​ ಹಾಕದಿರುವುದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸಪ್ಪನ ಕೈಕಚ್ಚಿದ ಬೈಕ್ ಸವಾರ: ವಿಡಿಯೋ ವೈರಲ್

ಹೆಲ್ಮೆಟ್​ ಹಾಕಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ಸಂಚಾರಿ ಪೊಲೀಸರ ಕೈಯನ್ನು ಬೈಕ್ ಸವಾರ ಕಚ್ಚಿದ ಘಟನೆ ವಿಲ್ಸನ್ ಗಾರ್ಡನ್ 10 ನೇ ಕ್ರಾಸ್ ಬಳಿ ನಡೆದಿದೆ.
06:34 PM Feb 12, 2024 IST | Ashitha S
ಹೆಲ್ಮೆಟ್​ ಹಾಕದಿರುವುದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸಪ್ಪನ ಕೈಕಚ್ಚಿದ ಬೈಕ್ ಸವಾರ  ವಿಡಿಯೋ ವೈರಲ್

ಬೆಂಗಳೂರು: ಹೆಲ್ಮೆಟ್​ ಹಾಕಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ಸಂಚಾರಿ ಪೊಲೀಸರ ಕೈಯನ್ನು ಬೈಕ್ ಸವಾರ ಕಚ್ಚಿದ ಘಟನೆ ವಿಲ್ಸನ್ ಗಾರ್ಡನ್ 10 ನೇ ಕ್ರಾಸ್ ಬಳಿ ನಡೆದಿದೆ.

Advertisement

ಬೈಕ್​ ಸವಾರನೊಬ್ಬ ಹೆಲ್ಮೆಟ್​ ಇಲ್ಲದೆ ಸಂಚರಿಸುತ್ತಿದ್ದ. ಇದನ್ನು ಗಮನಿಸಿದ ಕೂಡಲೇ ಸಂಚಾರಿ ಪೊಲೀಸರು ಬೈಕ್​​ ನಿಲ್ಲಿಸಿದ್ದರು. ಬಳಿಕ ಬೈಕ್​ ಅನ್ನು ತಡೆದು ವಶಕ್ಕೆ ಪಡೆದುಕೊಳ್ಳುತ್ತಿದ್ದರು. ಇದೇ ವೇಳೆ ಕೋಪಗೊಂಡ ಬೈಕ್​ ಸವಾರ ಸಂಚಾರಿ ಪೊಲೀಸ್ ಅಧಿಕಾರಿಯ ಕೈ ಕಚ್ಚಲು ಮುಂದಾಗಿದ್ದಾರೆ. ಕೂಡಲೇ ಹೊಯ್ಸಳ ಸಿಬ್ಬಂದಿ ಕರೆಸಿ ಬೈಕ್ ಸವಾರನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಸಂಚಾರಿ ಪೊಲೀಸರಿಂದ ಆರೋಪಿ ವಿರುದ್ಧ ದೂರು ದಾಖಲಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

Advertisement

Advertisement
Tags :
Advertisement